ಕೋರ್ಟ್ ಆವರಣದಲ್ಲಿ ಉಗ್ರ ಅಬ್ದುಲ್ ಕರೀಂ ತುಂಡಾಗೆ ಥಳಿತ

ನವದೆಹಲಿ: ಭಾರತದ ಮೊಸ್ಟ್ ವಾಂಟೆಡ್ ಉಗ್ರ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಅಬ್ದುಲ್ ಕರೀಂ ತುಂಡಾಗೆ ದೆಹಲಿ ಕೋರ್ಟ್ನಲ್ಲಿ ಥಳಿಸಿದ ಘಟನೆ ಮಂಗಳವಾರ ನಡೆಯಿತು.
ದೆಹಲಿ ಪೊಲೀಸರ ವಶದಲ್ಲಿರುವ ತುಂಡಾನನ್ನು ಇಂದು ದೆಹಲಿಯ ಪಟಿಯಾಲ ಕೋರ್ಟ್ಗೆ ಹಾಜರು ಪಡಿಸುತ್ತಿದ್ದ ವೇಳೆ ಕೋರ್ಟ್ ಆವರಣದಲ್ಲೇ ತುಂಡಾ ಮೇಲೆ ಹಲ್ಲೆ ನಡೆಸಲಾಯಿತು. ಹಲ್ಲೆ ನಡೆಸಿದವರು ಹಿಂದು ಸೇನಾ ಸಂಘಟನೆಯ ಕಾರ್ಯಕರ್ತರು ಎನ್ನಲಾಗಿದ್ದು, ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಳೆದ ಶುಕ್ರವಾರ ಭಾರತ-ನೇಪಾಳ ಗಡಿಯಲ್ಲಿ ದೆಹಲಿ ವಿಶೇಷ ಪೊಲೀಸರಿಗೆ ಸೆರೆ ಸಿಕ್ಕಿದ್ದ ಉಗ್ರ ತುಂಡಾನನ್ನು ನ್ಯಾಯಾಲಯ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿತ್ತು. ತುಂಡಾ ಪೊಲೀಸ್ ಬಂಧನದ ಅವಧಿ ಇಂದಿಗೆ ಅಂತ್ಯಗೊಂಡ ಹಿನ್ನೆಲೆಯಲ್ಲಿ, ಇಂದು ಕೋರ್ಟ್ಗೆ ಹಾಜರು ಪಡಿಸಿ, ಬಂಧನದ ಅವಧಿಯನ್ನು ವಿಸ್ತರಿಸುವಂತೆ ಕೋರಿದರು.
ಬಂಧಿತ ಉಗ್ರ ತುಂಡಾನನ್ನು ವಿಚಾರಣೆ ನಡೆಸುತ್ತಿರುವ ದೆಹಲಿ ವಿಶೇಷ ಪೊಲೀಸರು ಆತನಿಂದ ಸಾಕಷ್ಟು ಸ್ಫೋಟಕ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ತುಂಡಾ ನಡುವಿನ ನಂಟು ಸೇರಿದಂತೆ, 26/11 ಮುಂಬೈ ದಾಳಿ ರೂವಾರಿ ಝಾಕಿ ಉರ್ ರೆಹಮಾನ್ ನಡುವಿನ ಸಂಬಂಧವನ್ನು ಆತ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಮೂಲತಃ ಕಡು ಬಡತನದಲ್ಲಿ ಹುಟ್ಟಿದ ತುಂಡಾ ಐಶಾರಾಮಿ ಜೀವನ ನಡೆಸಲು ಉಗ್ರರೊಂದಿಗೆ ಕೈ ಜೋಡಿಸಿದ್ದಾಗೆ ಹೇಳಿಕೆ ನೀಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


