ಯ್ಯೂಟೂಬ್ನಲ್ಲಿ ನಕಲಿ ವೀಡಿಯೋ ಬಳಕೆಗೆ ಅಮಿತಾಬ್ ಬಚ್ಚನ್ ಕಿಡಿ
ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮುಂದಿನ ಪ್ರಧಾನ ಮಂತ್ರಿ ಎಂದು ಬಿಂಬಿಸುವಂತಹ ಅಮಿತಾ ಬಚ್ಚನ್ ಅವರನ್ನೋಳಗೊಂಡ ನಕಲಿ ವೀಡಿಯೋ ಯ್ಯೂಟೂಬ್ನಲ್ಲಿ ಹರಿದಾಡುತ್ತಿರುವ ಬಗ್ಗೆ ಬಾಲಿವುಡ್ನ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರು ಗುರುವಾರ ವಿಷಾಧ ವ್ಯಕ್ತಪಡಿಸಿದ್ದಾರೆ.
ಗುಜರಾತ್ ಪ್ರವಾಸೋದ್ಯಮದ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಅಮಿತಾಬ್ ಬಚ್ಚನ್ ಅವರು, ತಾನು ಮೋದಿ ಅವರಿಗೆ ಬೆಂಬಲಿಸುತ್ತಿರುವಂತೆ ನಕಲಿ ವಿಡಿಯೋವನ್ನು ಯ್ಯೂಟೂಬ್ನಲ್ಲಿ ಹಾಕಲಾಗಿದೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಬಿಗ್ ಬೀ ಹೇಳಿದ್ದಾರೆ.
ಯ್ಯೂಟೂಬ್ ಹಾಕಲಾಗಿರುವ ವೀಡಿಯೋದಲ್ಲಿ ಬಚ್ಚನ್ ಅವರು ಮೋದಿ ಅವರೇ ಮುಂದಿನ ಪ್ರಧಾನಿ ಎಂದು ಹೇಳಿ ಬೆಂಬಲಿಸುತ್ತಿರುವ ಮಾದರಿಯಲ್ಲಿ ನಕಲಿ ದೃಶ್ಯಗಳು ಕಂಡುಬಂದಿದೆ. 2007ರಲ್ಲಿ ಪ್ರವಾಸೋದ್ಯಮ ಕುರಿತು ನಡೆಸಿದ ಅಭಿಯಾನದ ದೃಶ್ಯಗಳಿಗೆ ಹಿನ್ನಲೆ ಧ್ವನಿ ನೀಡಿ ಕಿಡಿಗೇಡಿಗಳು ಮೋದಿ ಪ್ರಧಾನಿ ಎಂದು ಸೂಚಿಸುತ್ತಿರುವಂತೆ ಕೈಚಳಕ ತೋರಿಸಿದ್ದಾರೆ ಎಂದು ಅಮಿತಾಬ್ ದೂರಿದ್ದಾರೆ.
ಯ್ಯೂಟೂಬ್ನಲ್ಲಿ ತಮ್ಮ ನಕಲಿ ವೀಡಿಯೋವನ್ನು ಹಾಕಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹೋರಾಟ ನಡೆಸಲಾಗುವುದು ಎಂದ ಅವರು, ಕೃತಿ ಚೌರ್ಯ ಕಾಯ್ದೆಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆಪಾದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

