ಮುಂಬೈ ಗ್ಯಾಂಗ್ರೇಪ್: ಓರ್ವನ ಬಂಧನ, ನಾಲ್ವರ ಗುರುತು ಪತ್ತೆ

ಮುಂಬೈ: ಮುಂಬೈನಲ್ಲಿ ಪತ್ರಿಕಾ ಫೋಟೋಗ್ರಾಫರ್ ಮೇಲೆ ಗುರುವಾರ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಮುಂಬೈ ಪೊಲೀಸರು ಭೇದಿಸಿದ್ದು, ಐವರು ಶಂಕಿತ ಆರೋಪಿಗಳ ಪೈಕಿ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅತ್ಯಾಚಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಮುಂಬೈ ಪೊಲೀಸರು, ಘಟನೆ ನಡೆದ 18 ಗಂಟೆಗಳಲ್ಲಿ ಕಾಮುಕರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಇಂದು ಮಧ್ಯಾಹ್ನ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಂಬೈ ಪೊಲೀಸ್ ಆಯುಕ್ತ ಸತ್ಯಪಾಲ್ ಸಿಂಗ್ ಅವರು, ಮುಂಬೈನ ಮಹಾಲಕ್ಷ್ಮಿಯ ಶಕ್ತಿ ಮಿಲ್ ಕಾಂಪೌಂಡ್ ನಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆದಿದ್ದು ನಿಜ ಎಂದು ಹೇಳಿದ್ದಾರೆ.
ನಿಯತಕಾಲಿಕೆಯೊಂದರ ಫೋಟೋಗ್ರಾಫರ್ ಆಗಿರುವ 22 ವರ್ಷದ ಯುವತಿ ನಿನ್ನೆ ಸಂಜೆ 6ರಿಂದ 6.30ರ ಸುಮಾರಿಗೆ ತನ್ನ ಸಹೋದ್ಯೋಗಿಯೊಂದಿಗೆ ವರದಿಗಾರಿಕೆಗೆ ತೆರಳಿದ್ದಾಗ ಜತೆಯಲ್ಲಿದ್ದ ಯುವಕನನ್ನು ಬೆಲ್ಟ್ನಿಂದ ಕಟ್ಟಿಹಾಕಿ, ಯುವತಿ ಮೇಲೆ ಐವರು ಯುವಕರು ಅತ್ಯಾಚಾರ ಎಸಗಿದ್ದಾರೆ. ನಂತರ 8 ಗಂಟೆಯ ಸುಮಾರಿಗೆ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ, 8.30ಕ್ಕೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಸಿಂಗ್ ತಿಳಿಸಿದರು.
ತಕ್ಷಣವೇ ಕಾರ್ಯಾಚರಣೆಗಿಳಿದ ಪೊಲೀಸರು, ಆರೋಪಿಗಳ ಪತ್ತೆಗಾಗಿ 20 ತಂಡಗಳನ್ನು ರಚಿಸಿಕೊಂಡರು. ನಿನ್ನೆ ರಾತ್ರಿಯೇ ಯುವತಿ ನೀಡಿದ ಮಾಹಿತಿಯ ಮೇರೆಗೆ ಐವರು ಶಂಕಿತ ಅತ್ಯಾಚಾರಿಗಳ ರೇಖಾ ಚಿತ್ರವನ್ನು ಸಿದ್ಧಪಡಿಸಲಾಯಿತು. ಅದರಲ್ಲಿ ಓರ್ವ ಆರೋಪಿಯನ್ನು ರಾತ್ರಿ 12 ಗಂಟೆಯ ಸುಮಾರಿಗೆ ನಾವು ಬಂಧಿಸಿದ್ದೇವೆ ಮತ್ತು ಆತ ಸಾಮೂಹಿಕ ಅತ್ಯಾಚಾರದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆದರೆ ಇತರೆ ಆರೋಪಿಗಳ ಬಗ್ಗೆ ಬಾಯಿ ಬಿಡುತ್ತಿಲ್ಲ ಎಂದು ಸಿಂಗ್ ಹೇಳಿದರು.
ಎಲ್ಲ ಐವರು ಆರೋಪಿಗಳು 20ರಿಂದ 22ವರ್ಷದವರಾಗಿದ್ದು, ಇತರ ನಾಲ್ವರು ಆರೋಪಿಗಳನ್ನು ಸಹ ನಾವು ಈಗಾಗಲೇ ಪತ್ತೆ ಹಚ್ಚಿದ್ದೇವೆ. ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಮುಂಬೈ ಪೊಲೀಸರು ಆಯುಕ್ತರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


