ಈಗಿನ ಸುದ್ದಿ

ನಕ್ಸಲರಿಂದ ನೆಲಬಾಂಬ್ ಸ್ಫೋಟ: 7 ಪೊಲೀಸರ ಸಾವು

Published On :

ಔರಂಗಬಾದ್: ಬಿಹಾರದ ಔರಂಗಬಾದ್ ಬಳಿ ಮಂಗಳವಾರ ನಕ್ಸಲರು ನೆಲಬಾಂಬ್ ಸ್ಫೋಟಿಸಿದ್ದು, ಘಟನೆಯಲ್ಲಿ 7 ಪೊಲೀಸರು ಮೃತಪಟ್ಟಿದ್ದಾರೆ.

ಕೆಂಪು ಉಗ್ರರು ಔರಂಗಬಾದ್ ಸಮೀಪ ರಸ್ತೆಯಲ್ಲಿ ಬಾಂಬ್ ಹುದುಗಿಸಿಟ್ಟು, ಗಸ್ತಿನಲ್ಲಿದ್ದ ಪೊಲೀಸರ ಜೀಪ್ ಸ್ಫೋಟಿಸಿದ್ದಾರೆ.

ಸ್ಫೋಟದಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ತಾಂಡ್ವಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಜಯ್ ಕುಮಾರ್ ಅವರು ಸೇರಿದಂತೆ ಒಟ್ಟು 7 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಮೀಪದ ನಾಭಿನಗರದಲ್ಲಿ ನಕ್ಸಲರು ಅವಿತಿರುವ ಮಾಹಿತಿ ಪಡೆದ ಅಜಯ್ ಕುಮಾರ್ ಅವರು ಕಾರ್ಯಾಚರಣೆ ನಡೆಸಿ ಅವರನ್ನು ನಾಭಿನಗರದಿಂದ ಹಿಮ್ಮೆಟಿಸಿದ್ದರು. ಕಾರ್ಯಾಚರಣೆ ಬಳಿಕ ತಾಂಡ್ವಾ ಪೊಲೀಸ್ ಠಾಣೆಗೆ ವಾಪಸಾಗುತ್ತಿದ್ದ ವೇಳೆಯಲ್ಲಿ ನಕ್ಸಲರು ಹುದುಗಿಸಿಟ್ಟಿದ್ದ ಲ್ಯಾಂಡ್‌ಮೈನ್ (ನೆಲಬಾಂಬ್) ಸ್ಫೋಟಗೊಂಡು ಜೀಪಿನಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು 108 ಆಂಬುಲೆನ್ಸ್ ಧಾವಿಸಿದ್ದು, ಮೃತದೇಹಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.