ಈಗಿನ ಸುದ್ದಿ

3ನೇ ಪರೀಕ್ಷೆಯಲ್ಲು ಪೃಥ್ವಿ-2 ಯಶಸ್ವಿ

3ನೇ ಪರೀಕ್ಷೆಯಲ್ಲು ಪೃಥ್ವಿ-2 ಯಶಸ್ವಿ
Published On :

ಭುವನೇಶ್ವರ್: ದೇಶಿಯವಾಗಿ ನಿರ್ಮಿಸಲಾದ ಅಣ್ವಸ್ತ್ರ ಹೊತ್ತೊಯ್ಯಬಲ್ಲ ಪೃಥ್ವಿ-2 ಕ್ಷಿಪಣಿಯು ಮಂಗಳವಾರ ಬೆಳಗ್ಗೆ ನಡೆಸಿದ ಮೂರನೇ ಪರೀಕ್ಷೆಯಲ್ಲೂ ಯಶಸ್ವಿಯಾಗಿದೆ.

ಪರಮಾಣ ಅಣ್ವಸ್ತ್ರವನ್ನು ಹೊತ್ತು ಸುಮಾರು 350 ಕಿ.ಮೀ ವ್ಯಾಪ್ತಿಯ ಗುರಿ ತಲುಪಬಲ್ಲ ಪೃಥ್ವಿ-2 ಕ್ಷಿಪಣಿಯನ್ನು ಬಾಲ್ಸೋರ್ನ ಕರಾವಳಿಯಲ್ಲಿನ ಚಂಡೀಪುರ್ನ ಕ್ಷಿಪಣಿ ಪರೀಕ್ಷಾರ್ಥ ಕೇಂದ್ರದಲ್ಲಿ ಇಂದು ಮೂರನೇ ಬಾರಿಗೆ ಪರೀಕ್ಷೆಗೆ ಒಳಪಡಿಸಲಾಯಿತು. ಈ ಪರೀಕ್ಷೆಯಲ್ಲಿ ಕ್ಷಿಪಣಿಯು ಯಶಸ್ವಿಯಾಗಿದ್ದಿರಂದ ಹರ್ಷ ವ್ಯಕ್ತಪಡಿಸಿರುವ ಅಧಿಕಾರಿಗಳು,  ಈ ಕ್ಷಿಪಣಿಯಿಂದ ಸೇನೆಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.

ಪೃಥ್ವಿ-2 ಕ್ಷಿಪಣಿಯ ಪರೀಕ್ಷೆಯನ್ನು ಸ್ಟ್ರಾಟಜಿಕ್ ಫೋರ್ರ್ಸ್ ಕಮಾಂಡ್(ಎಸ್ಎಫ್ಸಿ) ಇಂದು ಬೆಳಿಗ್ಗೆ ಪರೀಕ್ಷೆಗೆ ಒಳಪಡಿಸಿತು. ಈ ಪರೀಕ್ಷೆಯಲ್ಲಿ ಕ್ಷಿಪಣಿಯು ನಿರ್ದಿಷ್ಟ ಗುರಿಯನ್ನು ಸುಲಭವಾಗಿ ಕ್ರಮಿಸಿದ್ದು, ಈ ಪರೀಕ್ಷೆಯಲ್ಲು ಕ್ಷಿಪಣಿ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ ಎಂದು ಪರೀಕ್ಷಾ ಶ್ರೇಣಿಯ ಮುಖ್ಯಸ್ಥ ಎಂ.ವಿ.ಕೆ.ವಿ ಪ್ರಸಾದ್ ಅವರು ತಿಳಿಸಿದ್ದಾರೆ.

ಕಳೆದ ಎರಡು ತಿಂಗಳ ಅವಧಿಯಲ್ಲಿ ಎಸ್ಎಫ್ಸಿ ಎರಡು ಬಾರಿ ಕ್ಷಿಪಣಿಯನ್ನು ಪರೀಕ್ಷೆಗೆ ಒಳಪಡಿಸಿತ್ತು. ಅಕ್ಟೋಬರ್ 7 ಮತ್ತು 8 ರಂದು ನಡೆದ ಮೊದಲ ಪರೀಕ್ಷೆಯಲ್ಲು ಕ್ಷಿಪಣಿಯು ಯಶಸ್ವಿಯಾಗಿತ್ತು. ಪೃಥ್ವಿ-2 ಡಿಆರ್ಡಿಒ ಅಭಿವೃದ್ಧಿ ಪಡಿಸಿದ ಪ್ರಥಮ ಕ್ಷಿಪಣಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.