ನಿರ್ಮಾಪಕರಿಂದ ಉಪೇಂದ್ರಗೆ 'ಟೋಪಿ'

ಬೆಂಗಳೂರು: ತಮ್ಮ ಅನುಮತಿ ಪಡೆಯದೆ ಟೋಪಿವಾಲ ಚಿತ್ರದ ಹಕ್ಕನ್ನು ತೆಲುಗಿಗೆ ಮಾರಾಟ ಮಾಡಿರುವ ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ಗರಂ ಆಗಿರುವ ನಟ ಉಪೇಂದ್ರ ಅವರು ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಸ್ಯಾಂಡೆಲ್ವುಡ್ ಸೂಪರ್ಸ್ಟಾರ್ ಉಪೇಂದ್ರ ಅವರು ಕಥೆ, ಚಿತ್ರಕಥೆ ಬರೆದು ನಟಿಸಿದ್ದ ಟೋಪಿವಾಲ ಚಿತ್ರದ ರೈಟ್ಸ್ ಅನ್ನು ಚಿತ್ರದ ನಿರ್ಮಾಪಕರು ನನಗೆ ತಿಳಿಸದೆ ತೆಲುಗಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿರುವ ಉಪೇಂದ್ರ, ತಮ್ಮ ವಕೀಲರ ಮೂಲಕ ನಿರ್ಮಾಪಕ ಶ್ರೀನಿವಾಸ್ ಮತ್ತು ತೆಲುಗಿನ ನಿರ್ಮಾಪಕರ ಛೇಂಬರ್ಗು ನೋಟಿಸ್ ಕಳಿಸುವುದಾಗಿ ತಿಳಿಸಿದ್ದಾರೆ.
ಟೋಪಿವಾಲ ಚಿತ್ರದ ರೈಟ್ಸ್ ಕುರಿತಾಗಿ ಈ ಮೊದಲೇ ಜಂಟಿ ಒಪ್ಪಂದವಾಗಿತ್ತು. ಒಪ್ಪಂದ ಪ್ರಕಾರ ನಿರ್ಮಾಪಕರಿಗೆ 51ರಷ್ಟು ಮತ್ತು ಉಪೇಂದ್ರ 49ರಷ್ಟು ರೈಟ್ಸ್ ಇದೆ. ಎಂದು ಅಗ್ರಿಮೆಂಟ್ ಆಗಿತ್ತು. ಇಗಿದ್ದರು ನನಗೆ ಒಂದು ಮಾತು ತಿಳಿಸದೆ ಏಕಾ ಏಕಿ ತೆಲುಗಿಗೆ ಮಾರಾಟ ಮಾಡಿರುವುದು ನನಗೆ ತುಂಬಾ ನೋವಾಗಿದೆ. ಚಿತ್ರದ ರೈಟ್ಸ್ನಿಂದ ಬಂದ ಹಣದಲ್ಲಿ ನನಗೆ ಒಂದು ಬಿಡಿಗಾಸು ಬೇಡವಾಗಿತ್ತು. ಆದರೆ ಅಗ್ರಿಮೆಂಟ್ ಆಗಿದ್ದುದರಿಂದ ಸೌಜನ್ಯಕ್ಕಾದರು ನಿರ್ಮಾಪಕರು ಒಂದು ಮಾತು ತಿಳಿಸಬೇಕಿತ್ತು ಎಂದು ಉಪೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಶ್ರೀನಿವಾಸ್ ಅವರು, ಟೋಪಿವಾಲ ಚಿತ್ರದ ರೈಟ್ಸ್ ಮಾರಾಟದ ಸಂದರ್ಭದಲ್ಲಿ ಉಪೇಂದ್ರ ಅವರು ಯಾವುದೋ ಚಿತ್ರದ ಚಿತ್ರಿಕರಣ ನಿಮಿತ ವಿದೇಶಕ್ಕೆ ತೆರಳಿದ್ದರು. ಇದರಿಂದಾಗಿ ನಾನು ಉಪೇಂದ್ರ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಹೀಗಾಗಿ ಚಿತ್ರದ ರೈಟ್ಸ್ನ್ನು ಮಾರಾಟ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ನಿರ್ಮಾಪಕರ ಈ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ ಉಪೇಂದ್ರ, ರೀ ನಿರ್ಮಾಪಕರೆ... ನಾನು ಕಳೆದ ಮೂರು ತಿಂಗಳಿಂದ ವಿದೇಶಕ್ಕೆ ಹೋಗಿಲ್ಲ. ಈಗಿದ್ದರು ನಾನು ಸಂಪರ್ಕಕ್ಕೆ ಸಿಗಲಿಲ್ಲ ಎಂದು ಹೇಳುತ್ತಿದ್ದಿರ ಇದು ಸತ್ಯನ ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಹುಳುಕನ್ನು ಮುಚ್ಚಿಕೊಳ್ಳಲು ವಿನಾಃ ಕಾರಣ ನಾನು ವಿದೇಶಕ್ಕೆ ತೆರಳಿದ್ದೆ ಅಂತ ಹೇಳುತ್ತಿರುವುದು ಸರಿಯಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


