ನೆಲ್ಸನ್ ಮಂಡೇಲಾ ವಿಧಿವಶ

ಜೊಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲ್ ಅವರು ಶುಕ್ರವಾರ ಬೆಳಗಿನ ಜಾವ ವಿಧವಶರಾಗಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ವಿಶ್ವದ ಹಲವು ಗಣ್ಯರು ಶಾಂತಿದೂತನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ದಕ್ಷಿಣ ಆಫ್ರಿಕಾದ ಮೊದಲ ನೀಗ್ರೋ ಅಧ್ಯಕ್ಷ 95 ವರ್ಷದ ನೆಲ್ಸನ್ ಮಂಡೇಲಾ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಝುಮಾ ಅವರು ಪ್ರಕಟಿಸಿದ್ದಾರೆ.
ಮಂಡೇಲಾ ನಿಧನದ ಬಳಿಕ ದೇಶವನ್ನು ಉದ್ದೇಶಿಸಿ ಮಾಧ್ಯಮಕ್ಕೆ ಮಾತನಾಡಿದ ಝುಮಾ, 'ನಮ್ಮ ದೇಶ ಮಹಾನ್ ಪುತ್ರನನ್ನು ಕಳೆದುಕೊಂಡಿದೆ. ದೇಶದ ರಾಷ್ಟ್ರಪೀತನನ್ನು ನಾವು ಕಳೆದುಕೊಂಡಿದ್ದೆವೆ' ಎಂದು ಹೇಳಿದ್ದಾರೆ.
ದಶಕಗಳ ಕಾಲ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ್ದ ಮಹಾನ್ ನಾಯಕ ಮಂಡೇಲಾ ಅವರು, ದೇಶ ದ್ರೋಹದ ಆರೋಪದ ಮೇಲೆ 27 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಬಿಳಿಯರ ಅಲ್ಪಸಂಖ್ಯಾತರ ಆಳ್ವಿಕೆಗೆ ಅಂತ್ಯ ಹಾಡಿದ್ದರು.
1918ರ ಜುಲೈ 18ರಂದು ಈಸ್ಟರ್ನ್ ಕೇಪ್ ಪ್ರಾಂತ್ಯದ ಬುಡಕಟ್ಟು ಜನಾಂಗದ ಕುಟುಂಬವೊಂದರಲ್ಲಿ ಜನಿಸಿದ ನೆಲ್ಸನ್ ರೋಲಿಹ್ಲಾಲಾ ಮಂಡೇಲಾ ಅವರು, 1938ರಲ್ಲಿ ಕರಿಯ ಫೋರ್ಟ್ ಹೇರ್ ವಿವಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ, ವಿದ್ಯಾರ್ಥಿ ಮುಷ್ಕರಕ್ಕಾಗಿ ಕಾಲೇಜಿನಿಂದ ಹೊರಹಾಕಲ್ಪಟ್ಟಿದ್ದರು.
ಮೊದಲ ಪತ್ನಿ, ನರ್ಸ್ ಎವೆಲಿನ್ ಮೇಸ್ ಜತೆಗೆ ಅವರಿಗೆ ನಾಲ್ಕು ಮಕ್ಕಳಿದ್ದರು. ಇವರಲ್ಲಿ ಮೂವರು ಮಕ್ಕಳು ಅಕಾಲ ಮರಣಕ್ಕೆ ತುತ್ತಾಗಿದ್ದರು. 1957ರಲ್ಲಿ ಈ ದಂಪತಿ ವಿಚ್ಛೇದನ ಪಡೆದುಕೊಂಡದ್ದರು. 2004ರಲ್ಲಿ ಎವೆಲಿನ್ ನಿಧನರಾದರು.
1944ರಲ್ಲಿಯೇ ವರ್ಣಭೇದ ನೀತಿ ವಿರುದ್ಧ ಹೋರಾಟ ಆರಂಭಿಸಿದ್ದ ಮಂಡೇಲಾ, 1954ರಲ್ಲಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್‌ನ ಯುವ ಘಟಕ ಸ್ಥಾಪನೆಗೆ ಶ್ರಮಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


