ಈಗಿನ ಸುದ್ದಿ

ಒಡೆಯರ್ ಅಂತಿಮ ಯಾತ್ರೆ

ಒಡೆಯರ್ ಅಂತಿಮ ಯಾತ್ರೆ
Published On :

ಮೈಸೂರು: ಮರೆಯಾದ ಮೈಸೂರು ರಾಜವಂಶಸ್ಥ, ಯದುವಂಶದ ಕಡೆಯ ಕುಡಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮುಕ್ತಾಯಗೊಂಡಿದ್ದು, ಇದೀಗ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭವಾಗಿದೆ.

ಬೆಳ್ಳಿ ಪಲ್ಲಕ್ಕಿಯಲ್ಲಿ ಒಡೆಯರ್ ಮೃತದೇಹದ ಮೆರವಣಿಗೆ ಮೈಸೂರಿನ ಪ್ರಮುಖ ರಸ್ತೆಗಳ ಮೂಲಕ ಮನುವನ ತಲುಪಲಿದೆ.

ನಿನ್ನೆ ರಾತ್ರಿಯಿಂದ ಅಂಬಾವಿಲಾಸ ಅರಮನೆ ಸಮೀಪದ ಕಲ್ಯಾಣ ಮಂಟಪದಲ್ಲಿ ಒಡೆಯರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಯಮಯ್ಯ, ಸಚಿವರಾದ ಕೆ.ಜೆ.ಜಾರ್ಜ್, ಶ್ರೀನಿವಾಸ್ ಪ್ರಸಾದ್, ಅಂಬರೀಷ್ ಹಾಗೂ ಸುತ್ತೂರು ಶ್ರೀಗಳು ಸೇರಿದಂತೆ ಹಲವು ಗಣ್ಯರು ಒಡೆಯರ್‌ಗೆ ಅಂತಿಮ ನಮನ ಸಲ್ಲಿಸಿದರು.

ಮಧ್ಯಾಹ್ನ 2.30ಕ್ಕೆ ಮಹಾರಾಜರ ಅಂತ್ಯಕ್ರಿಯೆ
ನಂಜನಗೂಡು ರಸ್ತೆಯಲ್ಲಿರುವ ರಾಜವಂಶಸ್ಥರದ ರುದ್ರಭೂಮಿ ಮನುವನದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಮಧ್ಯಾಹ್ನ 2.30ಕ್ಕೆ ಒಡೆಯರ್ ಅಂತ್ಯಕ್ರಿಯೆ ನಡೆಯಲಿದೆ. ಅಂತ್ಯಕ್ರಿಯೆಯಲ್ಲಿ ಒಡೆಯರ್ ಕುಟುಂಬ ವರ್ಗ ಹಾಗೂ ಆಪ್ತರಿಗಷ್ಟೆ ಅವಕಾಶ ನೀಡಲಾಗಿದೆ.

ಶ್ರೀವೈಷ್ಣವ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಯಲಿದ್ದು, ಈಗಾಗಲೇ ಅಂತಿಮ ವಿಧಿವಿಧಾನಗಳು ಆರಂಭವಾಗಿವೆ. ಪಾರ್ಥಿವ ಶರೀರಕ್ಕೆ ಸಪ್ತನದಿಗಳ ಜಲಾಭಿಷೇಕ ಮಾಡಿಸಿ, ಬಳಿಕ ಪಂಚದ್ರವ್ಯಗಳಿಂದ ಅಭಿಷೇಕ ಮಾಡಲಾಯಿತು. ಚಾಮುಂಡಿಬೆಟ್ಟ, ಪರಕಾಲಮಠದ ಸೇರಿದಂತೆ ಐದು ದೇವಸ್ಥಾನಗಳಿಂದ ಒಡೆಯರ್ ಹೆಸರಿನಲ್ಲಿ ಮಾಡಿಸಲಾದ ವಿಶೇಷ ಪೂಜೆಯ ಪ್ರಸಾದ ತರಲಾಗಿದೆ. ಒಡೆಯರ್ ಅಂತ್ಯಕ್ರಿಯೆಗೆ 250ಕೆ.ಜೆ.ಶ್ರೀಗಂಧ ಬಳಕೆ ಮಾಡಲಾಗುತ್ತಿದೆ.

ಜನರನ್ನು ನಿಯಂತ್ರಿಸಲು ಪೊಲೀಸರ ಪರದಾಟ
ಸಾರ್ವಜನಿಕ ದರ್ಶನ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅರಮನೆಯ ಎಲ್ಲಾ ಗೇಟ್‌ಗಳನ್ನು ಬಂದ್ ಮಾಡಿದ್ದರಿಂದ ಅರಮನೆಯ ಹೊರಗಡೆ ನೂಕುನುಗ್ಗಲು ಉಂಟಾಗಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ನೂಕುನುಗ್ಗಲು ತಪ್ಪಿಸಲು ಲಘು ಲಾಠಿಚಾರ್ಚ್ ಸಹ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.