ಪ್ರಗತಿಪರ ರೈತ ಡಾ.ಪ್ರಫುಲ್ಲಚಂದ್ರ ನಿಧನ
ಶಿವಮೊಗ್ಗ: ಪ್ರಗತಿಪರ ರೈತ, ಸಹಜ ಹಾಗೂ ಶೂನ್ಯ ಕೃಷಿಯ ಸಾಧಕ ಡಾ.ದೇವಂಗಿ ಪ್ರಫುಲ್ಲಚಂದ್ರ ಅವರು ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.
1934 ಅಕ್ಟೋಬರ್ 14ರಂದು ರೈತ ಕುಟುಂಬವೊಂದರಲ್ಲಿ ಜನಿಸಿದ್ದ ಪ್ರಫುಲ್ಲಚಂದ್ರ ಅವರು, ತಮ್ಮ 40 ವರ್ಷಗಳ ಸಹಜ ಕೃಷಿಯ ಸಾಧನೆಯಿಂದಾಗಿ 8ಕ್ಕೂ ಅಧಿಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪ್ರಫುಲ್ಲಚಂದ್ರ ಅವರು ಸತತ 30 ವರ್ಷಗಳ ಕಾಲ ಕಬ್ಬು ಬೆಳೆದು, ಮಧ್ಯಂತರ ಬೆಳೆಗಳಲ್ಲಿ ಹೊಸ ಸಂಶೋಧನೆ ನಡೆಸಿದ್ದರು. ಇವರ ಈ ಸಾಧನೆಗಾಗಿ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.
ರಾಷ್ಟ್ರಕವಿ ಕುವೆಂಪು ಅವರ ಪತ್ನಿಯ ತಮ್ಮನಾಗಿರುವ ಪ್ರಫುಲ್ಲಚಂದ್ರ ಅವರ ಸ್ಪೂರ್ತಿಯಿಂದಲೇ ಪೂರ್ಣಚಂದ್ರ ತೇಜಸ್ವಿ ಅವರು ಸಹಜ ಕೃಷಿಯತ್ತ ಆಕರ್ಷಿತರಾಗಿದ್ದರು ಎನ್ನಲಾಗಿದೆ.
ಪ್ರಫುಲ್ಲಚಂದ್ರ ಅವರು ಕೇವಲು ಒಂದು ಹೆಕ್ಟೇರ್ ಪ್ರದೇಶದಲ್ಲಿ 16.7ಟನ್ ಭತ್ತ ಹಾಗೂ 147ಟನ್ ಕಬ್ಬು ಬೆಳೆದು ದಾಖಲೆ ನಿರ್ಮಿಸಿದ್ದರು. ಇವರ ಈ ಕೃಷಿ ಭೂಮಿ ಅನೇಕ ವಿಶ್ವವಿದ್ಯಾಲಯಗಳ ಕುತೂಹಲಕಾರಿ ತಾಣವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

