ಈಗಿನ ಸುದ್ದಿ

ಸಲಿಂಗಾಪರಾಧ ತೀರ್ಪಿನಿಂದ ಭಾರತ ಹಿಂದುಳಿದಿದೆ: ಯುಎನ್

Published On :

ಜಿನಿವಾ: ಸಲಿಂಗಕಾಮ ಅಪರಾಧ ಎಂದು ಸುಪ್ರೀಂ ನೀಡಿರುವ ತೀರ್ಪಿನಿಂದ ಭಾರತ ಒಂದು ಹೆಜ್ಜೆ ಹಿಂದೆ ಸರಿದಿದೆ ಎಂದು ಯುನೈಟೆಡ್ ನೇಶನ್‌ನ(ಯುಎನ್) ಮಾನವ ಹಕ್ಕುಗಳ ಮುಖ್ಯಸ್ಥ ನವಿ ಪಿಲ್ಲೇ ಅವರು ಹೇಳಿದ್ದಾರೆ.

ಸಲಿಂಗಕಾಮ ಅಪರಾಧ ಎಂದು ತೀರ್ಪು ನೀಡುವ ಮೂಲಕ ಅಂತರಾಷ್ಟ್ರೀಯ ಕಾನೂನನ್ನು ಮುರಿದಂತಾಗಿದೆ. ಸಲಿಂಗಗಳ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ಖಾಸಗಿತನಕ್ಕೆ ಅನುಮತಿ ನೀಡದೆ, ಅದನ್ನು ಅಪರಾಧ ಎಂದು ಹೇಳುವ ತೀರ್ಪು ಅಂತರಾಷ್ಟ್ರೀಯ ಕಾನೂನನ್ನು ಮುರಿದಂತಾಗಿದೆ. ಸಮ್ಮತಿ ಲೈಂಗಿಕತೆ ಹಾಗೂ ಸಲಿಂಗಕಾಮ ಖಾಸಗಿಯವಾಗಿದ್ದು, ಇದು ಮಾನವ ಹಕ್ಕಿನಡಿಯಲ್ಲಿ ಬರುತ್ತದೆ. ಇದು ಅಪರಾಧವಲ್ಲ. ಭಾರತದಲ್ಲಿ ತಪ್ಪು ತೀರ್ಪು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ತೀರ್ಪಿನ ಬಗ್ಗೆ ಮತ್ತೊಮ್ಮೆ ಪರೀಶೀಲಿಸಬೇಕು ಎಂದು ಅವರು ತಿಳಿಸಿದ್ದಾರೆ. ನಿನ್ನೆ ಸುಪ್ರೀಂ ಕೋರ್ಟ್ ಸಲಿಂಗಕಾಮ ಅಪರಾಧ ಎಂದು ಆದೇಶ ಹೊರಡಿಸಿತ್ತು. ಇದಕ್ಕೆ ಭಾರತದ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.