ಈಗಿನ ಸುದ್ದಿ

ಅಣ್ಣಾ-ಆಮ್ ಆದ್ಮಿ ಒಡಕು ಬಹಿರಂಗ

ಅಣ್ಣಾ-ಆಮ್ ಆದ್ಮಿ ಒಡಕು ಬಹಿರಂಗ
Published On :

ರಾಳೇಗಣ್‌ಸಿದ್ಧಿ: ಸಾಮಾಜಿಕ ಹೋರಾಟಗಾರ, ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಹಾಗೂ ಆಮ್ ಆದ್ಮಿ ಪಕ್ಷದ ನಡುವಿನ ಒಡಕು ಶುಕ್ರವಾರ ಬಹಿರಂಗವಾಗಿದ್ದು, ಜನಲೋಕಪಾಲ್ ಮಸೂದೆ ಜಾರಿಗಾಗಿ ಕಳೆದ ನಾಲ್ಕು ದಿನಗಳಿಂದ ಹಜಾರೆ ಅವರು ಉಪವಾಸ ನಡೆಸುತ್ತಿರುವ ಸ್ಥಳದಲ್ಲೇ ಮಾಜಿ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಜತೆ ಕೇಜ್ರಿವಾಲ್ ಪ್ರತಿನಿಧಿ ಗೋಪಾಲ್ ರಾಯ್ ಕಿತ್ತಾಡಿಕೊಂಡ ಘಟನೆ ನಡೆಯಿತು.

ವರದಿಗಳ ಪ್ರಕಾರ, ಅಣ್ಣಾ ಹಜಾರೆಯೊಂದಿಗೆ ವೇದಿಕೆ ಹಂಚಿಕೊಳ್ಳಲು ಬಂದಿದ್ದ ವಿ.ಕೆ.ಸಿಂಗ್, ನಾವು ಇಬ್ಭಾಗವಾಗುವುದರಿಂದ ಮತ್ತು ಪ್ರತ್ಯೇಕ ತಂಡ ರಚನೆ ಮಾಡುವುದರಿಂದ ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟಕ್ಕೆ ಜಯ ಸಿಗಲ್ಲ. ಕೆಲವರು(ಅರವಿಂದ್ ಕೇಜ್ರಿವಾಲ್ ಹೆಸರು ಪ್ರಸ್ತಾಪಿಸಿದೆ) ತಮ್ಮನ್ನು ತಾವು ಅಣ್ಣಾಗಿಂತ ದೊಡ್ಡವರು ಎಂದು ಭಾವಿಸಿದ್ದಾರೆ ಎಂದು ಹೇಳಿದರು.

ಎಎಪಿ ನಾಯಕ ಗೋಪಾಲ್ ರಾಯ್, ಸಿಂಗ್ ಅವರ ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಅವರ ಭಾಷಣಕ್ಕೆ ಅಡ್ಡಿಪಡಿಸಿದರು. ಅಲ್ಲದೆ ಅಣ್ಣಾ ತಂಡವನ್ನು ತೊರೆದು ನರೇಂದ್ರ ಮೋದಿ ಅವರೊಂದಿಗೆ ಕೈ ಜೋಡಿಸುವವರು ಮತ್ತೊಬ್ಬರ ಮೇಲೆ ಆರೋಪ ಮಾಡಬಾರದು ಎಂದರು.

ಟಿಕೆಟ್‌ಗಾಗಿ ಮೋದಿಯನ್ನು ಹೊಗಳುವುದು ಸರಿಯಲ್ಲ. ನಾವು ಇಲ್ಲಿ ಸೇರಿರುವುದು ಜನಲೋಕಪಾಲ್ ಜಾರಿಗಾಗಿ ಮಾತ್ರ ಎಂದು ರಾಯ್, ಸಿಂಗ್ ಅವರಿಗೆ ನೆನಪಿಸಿದರು. ಈ ವೇಳೆ ಇಬ್ಬರ ಮಧ್ಯೆ ತೀವ್ರ ಜಟಾಪಟಿ ನಡೆಯಿತು. ಇದರಿಂದ ಆಕ್ರೋಶಗೊಂಡ ಅಣ್ಣಾ ಹಜಾರೆ ಅವರು, ಸ್ಥಳದಿಂದ ತೆರಳುವಂತೆ ಗೋಪಾಲ್ ರಾಯ್‌ಗೆ ತಾಕೀತು ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.