ಈಗಿನ ಸುದ್ದಿ

ಲೋಕಪಾಲ್ ಮಸೂದೆ ಮಂಡನೆ ಮುಂದೂಡಲು ಬಿಜೆಪಿ ಹೊಣೆ: ಅಣ್ಣಾ

Published On :

ರಾಲೇಗಾಂವ್ ಸಿದ್ಧಿ: ರಾಜ್ಯಸಭೆಯಲ್ಲಿ ಲೋಕಪಾಲ್ ಮಸೂದೆ ಮಂಡನೆಯಾಗದೆ ಕಲಾಪವನ್ನು ಮುಂದೂಡವುದಕ್ಕೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷವೇ (ಬಿಜೆಪಿ) ಕಾರಣ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಶುಕ್ರವಾರ ಹೇಳಿದ್ದಾರೆ.

ಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ಅಣ್ಣಾ ಹಜಾರೆ ಅವರು ಕೈಗೊಂಡಿರುವ ಉಪವಾಸ ಸತ್ಯಾಗ್ರಹ ನಾಲ್ಕನೆ ದಿನಕ್ಕೆ ಕಾಲಿಟ್ಟಿದೆ. ಅಣ್ಣಾ ಹಜಾರೆ ಅವರು ಮಾತನಾಡಿ, ಕಲಾಪ ಮುಂದೂಡಲು ಬಿಜೆಪಿಯು ಕಾರಣ. ಸುಮ್ಮನೆ ಇಲ್ಲದ ಸಲ್ಲದ ನೆಪಗಳನ್ನು ಹೇಳಿ ಕಲಾಪವನ್ನು ಮುಂದೂಡುತ್ತಿದ್ದಾರೆ. ಇದರಿಂದ ಲೋಕಪಾಲ್ ಮಸೂದೆ ಮಂಡನೆಯಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ದೇಶದ ಕಲ್ಯಾಣ ನಮಗೆ ಮುಖ್ಯವಾಗಿದೆ. ಕೇಂದ್ರ ಸರ್ಕಾರ ಪ್ರಬಲ ಜನ ಲೋಕಪಾಲ್ ಮಸೂದೆ ಜಾರಿ ಮಾಡಿದರೆ, ಜನರಿಗೆ ನ್ಯಾಯ ಸಿಗಲಿದೆ. ಆದರೆ ಲೋಕಪಾಲ್ ಮಸೂದೆಗೆ ಜಾರಿಗೆ ತಡೆ ಹಾಕಲಾಗುತ್ತಿದೆ. ಮಸೂದೆ ಜಾರಿಯಾದರೆ ಉನ್ನತ ಸ್ಥಾನದಲ್ಲಿರುವವರು ಕೂಡ ತನಿಖೆ ಎದುರಿಸಬೇಕಾಗುತ್ತದೆ. ಇದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವರಿಷ್ಠರು ಒಳಪಡುತ್ತಾರಾದ್ದರಿಂದ ನಿಧಾನ ಮಾಡುಲಾಗುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.