ಈಗಿನ ಸುದ್ದಿ

ಪಂಜಾಬ್‌ನಲ್ಲಿ ಮೋದಿ ರ್ಯಾಲಿಗೆ 'ಕೈ' ಅಪಸ್ವರ

Published On :

ಚಂಡೀಗಢ:  ಪಂಜಾಬ್‌ನ ಜಗ್ರಾನ್ ನಗರದಲ್ಲಿ ಡಿ.21ಕ್ಕೆ ನಡೆಯಲಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ರ್ಯಾಲಿಗೆ ಪಂಜಾಬ್ ಕಾಂಗ್ರೆಸ್ ಯೂನಿಟ್ ವಿರೋಧ ವ್ಯಕ್ತ ಪಡಿಸಿದೆ.

ಗುಜರಾತ್‌ನಲ್ಲಿ ಮೋದಿ ಸರ್ಕಾರ ಸಿಖ್ ಮತ್ತು ಪಂಜಾಬಿ ರೈತರನ್ನು ಕಚ್ ಪ್ರದೇಶದಿಂದ ಹೊರಗಟ್ಟಿದೆ. ಆದ್ದರಿಂದ ಮೋದಿ, ಪಂಜಾಬ್‌ಗೆ ಭೇಟಿ ನೀಡುವುದನ್ನು ನಾವು ವಿರೋಧಿಸುತ್ತೇವೆ ಎಂದು ಕಾಂಗ್ರೆಸ್ ವಕ್ತಾರರು ಹೇಳಿದ್ದಾರೆ.

ಮೋದಿ ಅವರ ಪಂಜಾಬ್ ವಿರೋಧಿ ಮತ್ತು ರೈತ ವಿರೋಧಿ ನಿಲುವು ವಿರೋಧಿಸಿ, ಕಾಂಗ್ರೆಸ್ ಪಕ್ಷ ಅಂದು ಪ್ರತಿಭಟನೆ ಕೈಗೊಳ್ಳಲಿದೆ ಎಂದು ಕಾಂಗ್ರೆಸ್ ಹೇಳಿದೆ.

ಗುಜರಾತ್‌ನ ಕಚ್ ಪ್ರದೇಶದಲ್ಲಿರುವ ಸಿಖ್ ರೈತರ ವಿರುದ್ಧ ಅಕ್ರಮದ ಆರೋಪ ಹೊರಿಸಿ ಹೊರದಬ್ಬಲಾಗುತ್ತಿದೆ. 60 ವರ್ಷಗಳ ಹಿಂದೆ ಲಾಲ್  ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾಗಿರುವಾಗ ಪಂಜಾಬ್ ಮತ್ತು ಹರ್ಯಾಣದಿಂದ ಸುಮಾರು 50,000 ರೈತರು ಕಚ್ ಪ್ರದೇಶದಲ್ಲಿ ನೆಲೆಸಿದ್ದರು. ಈ ರೈತರಿಗೆ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡಲಾಗಿದ್ದು, ಅಲ್ಲಿ ಅವರು ಕೃಷಿ ಮಾಡುತ್ತಿದ್ದಾರೆ. ಆದರೆ ಇದೀಗ ಮೋದಿ ಸರ್ಕಾರ ಅಲ್ಲಿನ ರೈತರನ್ನು ಹೊರದಬ್ಬಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ವಕ್ತಾರರು ಹೇಳಿದ್ದಾರೆ.

ಡಿ. 21ಕ್ಕೆ ಮೋದಿ ಜಗ್ರಾನ್ ನಗರದಲ್ಲಿ ಫತೇಹ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.