ಈಗಿನ ಸುದ್ದಿ

ಲೋಕಪಾಲ್ ಮಸೂದೆ ಜಾರಿಗೆ ಸಿದ್ಧ: ರಾಹುಲ್ ಗಾಂಧಿ

ಲೋಕಪಾಲ್ ಮಸೂದೆ ಜಾರಿಗೆ ಸಿದ್ಧ: ರಾಹುಲ್ ಗಾಂಧಿ
Published On :

ನವದೆಹಲಿ: ಅಣ್ಣಾ ಹಜಾರೆ ಹಾಗೂ ಆಮ್ ಆದ್ಮಿ ಭಯದಿಂದ ಚಳಿಗಾಲದ ಅಧಿವೇಶನದಲ್ಲೇ ಲೋಕಪಾಲ ಮಸೂದೆ ಜಾರಿಗೊಳಿಸಲು ನಾವು ಸಿದ್ಧ ಎಂದು ಶನಿವಾರ ಕಾಂಗ್ರೆಸ್ ಹೇಳಿದೆ.

ಈ ಸಂಬಂಧ ಇಂದು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಬಲ ಲೋಕಪಾಲ ಮಸೂದೆ ಜಾರಿಗೊಳಿಸಲು ನಾವು ಸಿದ್ಧರಿದ್ದು, ಮಸೂದೆ ಜಾರಿಗೆ ಪ್ರತಿಪಕ್ಷಗಳು ಸಹಕರಿಸಿದರೆ ಸಂಸತ್ತಿನಲ್ಲಿ ಅಂಗೀಕರಿಸಲಾಗುವುದು ಎಂದು ಹೇಳಿದ್ದಾರೆ.

ಲೋಕಪಾಲ ಮಸೂದೆ ದೇಶಕ್ಕೆ ಅಗತ್ಯವಾಗಿದೆ. ದೇಶದ ಹಿತಾಸಕ್ತಿಗಾಗಿ ಲೋಕಪಾಲ ಮಸೂದೆಯನ್ನು ಬೆಂಬಲಿಸುವಂತೆ ಪ್ರತಿಪಕ್ಷಗಳಿಗೆ ರಾಹುಲ್ ಮನವಿ ಮಾಡಿದರು.

ಇದೇ ವೇಳೆ, ಲೋಕಪಾಲ ಎಲ್ಲಾ ಸಮಸ್ಯೆಗೂ ಪರಿಹಾರ ಅಲ್ಲ. ಲೋಕಪಾಲಗಿಂತ ಆರ್‌ಟಿಐ ಪ್ರಮುಖವಾದದ್ದು. ಆರ್‌ಟಿಐಯಿಂದಲೇ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬಹುದು ಎಂದು ರಾಹುಲ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವರಾದ ಪಿ.ಚಿದಂಬರಂ ಹಾಗೂ ಕಪಿಲ್ ಸಿಬಲ್ ಅವರು ಉಪಸ್ಥಿತರಿದ್ದರು.

ಇನ್ನು ಕೇವಲ 5 ದಿನ ಮಾತ್ರ ಅಧಿವೇಶನ ನಡೆಯಲಿದೆ. ಶುಕ್ರವಾರವೇ ಲೋಕಪಾಲ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಯಿತಾದರೂ ಯಾವುದೇ ಚರ್ಚೆಗೆ ಅವಕಾಶ ಸಿಗದೇ ಕೇವಲ ಗದ್ದಲಕ್ಕಷ್ಟೇ ಸಾಕ್ಷಿಯಾಯಿತು. ಹೀಗಾಗಿ ಲೋಕಪಾಲ ಮಸೂದೆ ಕುರಿತ ಚರ್ಚೆ ಸೋಮವಾರಕ್ಕೆ ಮುಂದೂಡಿಕೆಯಾಗಿದ್ದರೂ ಸಹ, ಅಂದೂ ನಡೆಯುವ ಸಾಧ್ಯತೆಗಳು ಕಡಿಮೆಯೇ. ಏಕೆಂದರೆ, ಮೊದಲು ಬೆಲೆ ಏರಿಕೆ ಬಗ್ಗೆ ಚರ್ಚೆಯಾಗಬೇಕು, ಬಳಿಕವಷ್ಟೇ ಲೋಕಪಾಲ ಮಸೂದೆ ಎಂದು ಪಟ್ಟುಹಿಡಿದು ಕುಳಿತಿರುವ ಸಮಾಜವಾದಿ ಪಕ್ಷ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.