ಈಗಿನ ಸುದ್ದಿ

ಸರ್ಕಾರ ರಚನೆ: ಆಮ್ ಆದ್ಮಿಯಿಂದ ಕಾಂಗ್ರೆಸ್, ಬಿಜೆಪಿಗೆ 18 ಷರತ್ತು

ಸರ್ಕಾರ ರಚನೆ: ಆಮ್ ಆದ್ಮಿಯಿಂದ ಕಾಂಗ್ರೆಸ್, ಬಿಜೆಪಿಗೆ 18 ಷರತ್ತು
Published On :

ನವದೆಹಲಿ: ದೆಹಲಿಯಲ್ಲಿ ಸರ್ಕಾರ ರಚಿಸಲು ಆಮ್ ಆದ್ಮಿ ಪಕ್ಷ(ಎಎಪಿ)ಕ್ಕೆ ಬೇಷರತ್ತು ಬೆಂಬಲ ನೀಡಿರುವ ಕಾಂಗ್ರೆಸ್ ಹಾಗೂ ಬಿಜೆಪಿಗೆ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಹಲವು ಷರತ್ತುಗಳನ್ನು ವಿಧಿಸಿದ್ದಾರೆ.

ಈ ಸಂಬಂಧ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು, ರಾಷ್ಟ್ರ ರಾಜಧಾನಿಯಲ್ಲಿ ವಿಐಪಿ ಸಂಸ್ಕೃತಿ ಕೊನೆಗೊಳಿಸಬೇಕು ಎಂಬ ಷರತ್ತು ಸೇರಿದಂತೆ ತಮ್ಮ ಎಲ್ಲ 18 ಷರತ್ತುಗಳಿಗೆ ಒಪ್ಪಿಗೆ ಸೂಚಿಸುವುದಾದರೆ ತಾವು ದೆಹಲಿಯಲ್ಲಿ ಸರ್ಕಾರ ರಚಿಸುವುದಾಗಿ ತಿಳಿಸಿದ್ದಾರೆ.

ಪತ್ರದಲ್ಲಿರುವ 18 ಷರತ್ತುಗಳು:
1. ತಮ್ಮ ಪಕ್ಷ ಕೇಳದೇ ಇದ್ದರೂ ಬೆಂಬಲ ಸೂಚಿಸಿದ್ದು ಏಕೆ?
2. ರಾಷ್ಟ್ರ ರಾಜಧಾನಿಯಲ್ಲಿ ವಿವಿಐ ಸಂಸ್ಕೃತಿ ಕೊನೆಗೊಳ್ಳಬೇಕು.
3.ಮಂತ್ರಿ, ಶಾಸಕ ಅಥವಾ ಅಧಿಕಾರಿಗಳ್ಯಾರೂ ಕೆಂಪು ದೀಪವಿರುವ ವಾಹನ, ಬಳಸುವಂತಿಲ್ಲ, ಅವರಿಗೆ ರಕ್ಷಣೆ ನೀಡಲಾಗುವುದಿಲ್ಲ ಮತ್ತು ದೊಡ್ಡ ಬಂಗಲೆಗಳಲ್ಲಿ ವಾಸಿಸುವಂತಿಲ್ಲ.
4. ಶಾಸಕರ ಅಥವಾ ಕಾರ್ಪೊರೇಟರ್ ಪ್ರದೇಶಾಭಿವೃದ್ಧಿ ನಿಧಿಯನ್ನು ರದ್ದು ಮಾಡಲಾಗುತ್ತದೆ. ಬದಲಾಗಿ, ಮೊಹಲ್ಲಾ ಸಭಾ ಮೂಲಕ ಇದೇ ಹಣ ವಿತರಿಸಲಾಗುತ್ತದೆ ಮತ್ತು ಖರ್ಚಿನ ಬಗ್ಗೆ ನಿರ್ಧರಿಸುವುದು ಆ ಊರಿನ ಜನರಿಗೆ ಬಿಟ್ಟ ವಿಚಾರ.
5. ರಾಮ ಲೀಲಾ ಮೈದಾನದಲ್ಲಿ ಜನ ಲೋಕಪಾಲ್ ಮಸೂದೆ ಮಂಡನೆಗಾಗಿ ಆಮ್ ಆದ್ಮಿ ಪಕ್ಷ ವಿಶೇಷ ಅಧಿವೇಶನ ಆಯೋಜಿಸುತ್ತದೆ. ಇದಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಒಪ್ಪುತ್ತದಾ?
6. ದಿಲ್ಲಿಯಲ್ಲಿ ಜನ ಲೋಕಪಾಲ ಕಾಯಿದೆ ಜಾರಿಗೊಳಿಸಲಾಗುತ್ತದೆ. ನಿಮ್ಮ ಪಕ್ಷದ ಮುಖಂಡರು ಭ್ರಷ್ಟಾಚಾರಿಗಳೆಂದು ಸಾಬೀತಾದರೂ ಕೂಡ ಸರಕಾರವನ್ನು ಬೆಂಬಲಿಸುವಿರಾ?
7. ಮೊಹಲ್ಲಾ ಸಭಾ (ಗ್ರಾಮಸಭೆ) ಗಳಿಗೆ ಹೆಚ್ಚಿನ ಅಧಿಕಾರ ನೀಡುವುದು
8. ದಿಲ್ಲಿಗೆ ಪೂರ್ಣ ಪ್ರಮಾಣದ ರಾಜ್ಯವೆಂಬ ಸ್ಥಾನ ಮಾನ ದೊರಕಿಸುವುದು ಹಾಗೂ ವಿದ್ಯುತ್ ವಿತರಣಾ ಕಂಪನಿಗಳ ಲೆಕ್ಕ ಪರಿಶೋಧನೆ ನಡೆಸುವುದು. ವಿದ್ಯುತ್ ಮೀಟರ್ ಅಳವಡಿಕೆ - ಇದಕ್ಕೆ ಬೆಂಬಲವಿದೆಯೇ?
9. ಸ್ವತಂತ್ರ ಸಂಸ್ಥೆಯಿಂದ ವಿದ್ಯುತ್ ಮೀಟರ್ ಹಗರಣದ ಕುರಿತಾಗಿ ತನಿಖೆಯಾಗಬೇಕು.
10. ಪ್ರತೀ ವರ್ಷ ನೀರಿನ ದರ ಏರಿಸುವ ಕಾನೂನು ರದ್ದುಪಡಿಸುವುದಕ್ಕೆ ಬೆಂಬಲವಿದೆಯೇ?
11 ಎರಡೂ ರಾಷ್ಟ್ರೀಯ ಪಕ್ಷಗಳ ಮುಖಂಡರು ಅಕ್ರಮ ಸಂಪರ್ಕ ಹೊಂದಿರುವ ಟ್ಯಾಂಕರ್ ಮಾಫಿಯಾಗಳಿಗೆ ಅಂತ್ಯ ಹಾಡುವುದಕ್ಕೆ ಸಮ್ಮತಿಯಿದೆಯೇ?
12. ಅನಧಿಕೃತ ಕಾಲೊನಿಗಳ ಸಕ್ರಮೀಕರಣ, ಸ್ಲಂಗಳ ಪುನರ್ವಸತಿ ವ್ಯವಸ್ಥೆ, ನರ್ಸ್, ವೈದ್ಯರು, ಜಾಡಮಾಲಿಗಳಉ ಮತ್ತು ಶಿಕ್ಷಕರ ಗುತ್ತಿಗೆ ಆಧಾರಿತ ನೇಮಕಕ್ಕೆ ಅಂತ್ಯ ಹಾಡಲು ಬೆಂಬಲಿಸುವಿರಾ?
13. ವ್ಯಾಟ್ ಸರಳೀಕರಣಗೊಳಿಸಿ, ವ್ಯಾಪಾರ ಉದ್ಯಮವನ್ನು ಉತ್ತೇಜಿಸಲು, ಕೈಗಾರಿಕಾ ಪ್ರದೇಶಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದಕ್ಕೆ ಬೆಂಬಲವಿದೆಯೇ?
14. ದಿಲ್ಲಿಯ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶೀ ಹೂಡಿಕೆಯನ್ನು ವಿರೋಧಿಸುತ್ತೀರಾ?
15. ರೈತರಿಗೆ ಸಬ್ಸಿಡಿ ನೀಡುವ ಮತ್ತು ಗ್ರಾಮಸಭೆಗಳ ಅನುಮತಿಯಿಲ್ಲದೆ ಭೂಸ್ವಾಧೀನ ಮಾಡುವಂತಿಲ್ಲ ಎಂಬ ಆಮ್ ಆದ್ಮೀ ಪಕ್ಷದ ಅಭಿಪ್ರಾಯವನ್ನು ಬೆಂಬಲಿಸುತ್ತೀರಾ?
16. ಮಹಿಳೆಯರಿಗೆ ರಕ್ಷಣೆ ನೀಡುವ ಪ್ರಯತ್ನಕ್ಕೆ ಬೆಂಬಲವಿದೆಯೇ?
17. ನಗರ ಪಾಲಿಕೆಯ 1800 ಶಾಲೆಗಳು ಹಾಗೂ 1200 ಸರಕಾರಿ ಶಾಲೆಗಳಲ್ಲಿ ಶಿಕ್ಷಣ ಮಟ್ಟ ಸುಧಾರಣೆಗೆ ಬೆಂಬಲಿಸುತ್ತೀರಾ?
18. ನ್ಯಾಯಾಂಗ ಸುಧಾರಣೆಗೆ ಬೆಂಬಲವಿದೆಯೇ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.