ಈಗಿನ ಸುದ್ದಿ

ಸರ್ಕಾರದ ಲೋಕಪಾಲ ಮಸೂದೆ ದುರ್ಬಲ: ಎಎಪಿ

Published On :

ನವದೆಹಲಿ: ಸಂಸತ್‌ನಲ್ಲಿ ಅನುಮೋದನೆಗಾಗಿ ಕಾಯುತ್ತಿರುವ ಲೋಕಪಾಲ ಮಸೂದೆಯನ್ನು ತಿರಸ್ಕರಿಸಿದ ಆಮ್ ಆದ್ಮಿ ಪಕ್ಷ (ಆಪ್), ಪ್ರಸ್ತುತ ಮಸೂದೆ ದುರ್ಬಲವಾಗಿದ್ದು, ಇದು ಭ್ರಷ್ಟಾಚಾರವನ್ನು ನಿಯಂತ್ರಿಸಲ್ಲ ಎಂದು ಹೇಳಿದೆ. ಸರ್ಕಾರದ ಅನುಮೋದನೆಗಾಗಿ ಕಾದಿರುವ ಈ ಮಸೂದೆ ಭ್ರಷ್ಟಾಚಾರವನ್ನು ತಡೆಯುವ ಬದಲು ಭ್ರಷ್ಟಾಚಾರಿಗಳನ್ನು ರಕ್ಷಿಸುತ್ತದೆ ಎಂದು ಎಎಪಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಈ ಲೋಕಪಾಲ ಮಸೂದೆಯಿಂದಾಗಿ ಲೋಕಾಯುಕ್ತ ನೇಮಕ ಆಗಲ್ಲ, ಈ ಮೂಲಕ ಭ್ರಷ್ಟಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಎಎಪಿ ಸದಸ್ಯ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯವಾಗದೇ ಇರುವ ಲೋಕಪಾಲ ಮಸೂದೆಯನ್ನು ಜಾರಿಗೊಳಿಸಿ ಏನು ಪ್ರಯೋಜನ? ಇದು ಭ್ರಷ್ಟರನ್ನು ರಕ್ಷಿಸುತ್ತದೆ ಎಂದು ಭೂಷಣ್ ಹೇಳಿದ್ದಾರೆ.

ಅದೇ ವೇಳೆ ಈ ಮಸೂದೆಯಲ್ಲಿ ಸಿಬಿಐನ್ನು ಸ್ವತಂತ್ರ ಮಾಡಲಾಗಿಲ್ಲ. ಈ ರೀತಿ ಮಾಡಿದರೆ 2 ಜಿ ಅಥವಾ ಇನ್ನಿತರ ಹಗರಣದಲ್ಲಿ ನಮ್ಮ ಪ್ರಧಾನಿಯೇ ಜೈಲಿಗೆ ಹೋಗಬೇಕಾಗಿ ಬರುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.