'ಡಯಾನಾ ಸಾವಿಗೆ ಎಸ್ಎಎಸ್ ಕಾರಣ ಅಲ್ಲ'

ಲಂಡನ್: ಬ್ರಿಟನ್ನ ಯುವರಾಣಿ ಡಯಾನ, ಆಕೆಯ ಪ್ರಿಯಕರ ದೋಡಿ ಫಾಯೆಡ್ ಮತ್ತು ಕಾರು ಚಾಲಕ ಅಪಘಾತದಲ್ಲಿ ಸಾವನ್ನಪ್ಪಿದ್ದಕ್ಕೆ ಬ್ರಿಟಿಷ್ ಸೇನೆಯ ವಿಶೇಷ ಪಡೆ ಕಾರಣ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಬ್ರಿಟಿಷ್ ಪೊಲೀಸರು ಹೇಳಿದ್ದಾರೆ.
1997ರಲ್ಲಿ ಕಾರು ಅಪಘಾತದಲ್ಲಿ ರಾಣಿ ಡಯಾನ ಸಾವನ್ನಪ್ಪಿದ್ದರು. ಈ ಅಪಘಾತ ಸಂಭವಿಸಲು ಬ್ರಿಟಿಷ್ ಸೇನಾಪಡೆಯ ಸ್ಪೆಷನ್ ಏರ್ ಸರ್ವೀಸ್ನ (ಎಸ್ಎಎಸ್ )ಮಾಜಿ ಮತ್ತು ಹಾಲಿ ಸದಸ್ಯರು ಕಾರಣರಾಗಿದ್ದಾರೆ ಎಂದು ಇತ್ತೀಚೆಗೆ ಆರೋಪವೆದ್ದಿತ್ತು. ಆದರೆ ಈ ಆರೋಪವನ್ನು ದೃಢೀಕರಿಸಲು ಯಾವುದೇ ಸಾಕ್ಷ್ಯಗಳು ಇಲ್ಲ ಎಂದು ಬ್ರಿಟಿಷ್ ಪೊಲೀಸರು ಹೇಳಿದ್ದಾರೆ.
ಯುವರಾಣಿ ಡಯಾನಾ ಅವರ 16ನೇ ವರ್ಷದ ಪುಣ್ಯತಿಥಿಯ ಸಂದರ್ಭದಲ್ಲಿ, ಡಯಾನ ಅವರನ್ನು ಬ್ರಿಟಿಷ್ ಸೇನೆಯ ಕೆಲವು ಸದಸ್ಯರು ಹತ್ಯೆ ಮಾಡಿದ್ದಾರೆ ಎಂಬ ಹೊಸ ಆರೋಪ ಕೇಳಿ ಬಂದಿತ್ತು.
ಪ್ರಸ್ತುತ ಆರೋಪದ ಬಗ್ಗೆ ಸ್ಕಾಟ್ಲೆಂಡ್ ಪೊಲೀಸರು ತನಿಖೆ ನಡೆಸಿದ್ದು, ಈ ಆರೋಪವನ್ನು ಸಾಬೀತು ಪಡಿಸಲು ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿದ್ದಾರೆ
1997, ಅಗಸ್ಟ್ 31ರಂದು ಹೋಟೆಲ್ ರಿಟ್ಜ್ ನಿಂದ ತೆರಳುತ್ತಿದ್ದ ಯುವರಾಣಿ ಡಯಾನ ಮತ್ತು ದೋಡಿ ಫಾಯ್ಡ್ನ್ನು ಪಾಪರಾಜಿ (ಸೆಲೆಬ್ರಿಟಿಗಳ ಖಾಸಗಿ ಚಿತ್ರಗಳನ್ನು ತೆಗೆಯುವ ಛಾಯಾಗ್ರಾಹಕರು) ಬೆನ್ನತ್ತಿದ್ದಾಗ ಕಾರು ಅಪಫಾತಕ್ಕೀಡಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


