ಈಗಿನ ಸುದ್ದಿ

ದೆಹಲಿ ಸರ್ಕಾರ ರಚನೆ: ಜನಾಭಿಪ್ರಾಯ ಕೇಳಿದ ಎಎಪಿ

ದೆಹಲಿ ಸರ್ಕಾರ ರಚನೆ: ಜನಾಭಿಪ್ರಾಯ ಕೇಳಿದ ಎಎಪಿ
Published On :

ನವದೆಹಲಿ: ಮಂಗಳವಾರ ಆಮ್ ಆದ್ಮಿ ಪಕ್ಷದ ನೂತನ ಶಾಸಕರ ಸಭೆ ನಡೆದಿದ್ದು, ಪ್ರಸ್ತುತ ಸಭೆಯಲ್ಲಿ ಆಮ್ ಆದ್ಮಿ ಪಕ್ಷ ಮಹತ್ವದ ತೀರ್ಮಾನಗಳನ್ನು ಕೈಗೊಂಡಿದೆ.

ದೆಹಲಿಯಲ್ಲಿ ಸರ್ಕಾರ ರಚಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದು, ಎಎಪಿ ಪಕ್ಷದ 28 ಶಾಸಕರು ಕೂಡಾ ಈ ಸಭೆಗೆ ಹಾಜರಾಗಿದ್ದರು.

ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿನ ಆಮ್ ಆದ್ಮಿ ಪಕ್ಷದ ಮೇಲೆ ಸರ್ಕಾರ ರಚನೆ ಮಾಡುವ ಒತ್ತಡವಿದೆ. ಆದಾಗ್ಯೂ, ಮರು ಚುನಾವಣೆ ನಡೆಸಿ ದೆಹಲಿ ಜನರಿಗೆ ಕಷ್ಟ ಕೊಡುವುದಿಲ್ಲ ಎಂದು ಎಎಪಿ ಹೇಳಿದೆ.

ದೆಹಲಿ ಸರ್ಕಾರ ರಚನೆ ಬಗ್ಗೆ ಬಿಕ್ಕಟ್ಟು ಏರ್ಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ನಡೆಸಬೇಕೆಂದು ಲೆ. ಗವರ್ನರ್ ನಜೀಬ್ ಜಂಗ್ ಶಿಫಾರಸು ಮಾಡಿದ್ದರು. ಬಹುಮತವಿಲ್ಲದ ಕಾರಣ 31 ಸೀಟುಗಳನ್ನು ಪಡೆದುಕೊಂಡಿರುವ ಬಿಜೆಪಿ ಪಕ್ಷಕ್ಕೆ 70 ಸದಸ್ಯರಿರುವ ದೆಹಲಿ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಅಸಾಧ್ಯವಾಗಿದೆ.

ಡಿ.8ಕ್ಕೆ ಚುನಾವಣಾ ಮತದಾನ ಘೋಷಣೆ ಆದ ಕೂಡಲೇ 2 ನೇ ಸ್ಥಾನ ಪಡೆದುಕೊಂಡಿದ್ದ ಎಎಪಿ ತಾವು ಬಿಜೆಪಿ ಅಥವಾ ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸುವುದು ಇಲ್ಲ ಎಂದು ಕಡ್ಡಿಮುರಿದಂತೆ ಹೇಳಿತ್ತು.

ಏತನ್ಮಧ್ಯೆ, ಸರ್ಕಾರ ರಚನೆಗೆ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಜನಾಭಿಪ್ರಾಯ ಆಲಿಸಲು ಆಮ್ ಆದ್ಮಿ ಪಕ್ಷ ಮುಂದಾಗಿದೆ.

ಸರ್ಕಾರ ರಚನೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಎಎಪಿಗೆ ಆಹ್ವಾನವಿತ್ತಾಗ ಕೇಜ್ರಿವಾಲ್ ಉಭಯ ಪಕ್ಷಗಳಿಗೆ 18 ಷರತ್ತುಗಳನ್ನೊಡ್ಡಿದ್ದರು. ಕಾಂಗ್ರೆಸ್ ಪಕ್ಷ 18 ಷರತ್ತುಗಳಲ್ಲಿ 16 ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದ್ದು, ಬಿಜೆಪಿ ಕೇಜ್ರಿವಾಲ್ ಪತ್ರಕ್ಕೆ ಈವರೆಗೆ ಉತ್ತರಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.