ಈಗಿನ ಸುದ್ದಿ

ಲೋಕಪಾಲ್ ಜಾರಿಗೆ ಬದ್ಧ: ರಾಹುಲ್‌ಗೆ ಅಣ್ಣಾ ಅಭಿನಂದನೆ

ಲೋಕಪಾಲ್ ಜಾರಿಗೆ ಬದ್ಧ: ರಾಹುಲ್‌ಗೆ ಅಣ್ಣಾ ಅಭಿನಂದನೆ
Published On :

ರಾಳೇಗಣ್‌ಸಿದ್ಧಿ: ಲೋಕಪಾಲ್ ಮಸೂದೆ ಜಾರಿಗೊಳಿಸುವ ಬಗ್ಗೆ ಬದ್ಧತೆ ಪ್ರದರ್ಶಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ದೇಶ ಪ್ರಬಲ ಲೋಕಪಾಲ್‌ ಜಾರಿಗಾಗಿ ಕಾಯುತ್ತಿದೆ ಎಂದು ಹಜಾರೆ ಅವರು ಕಳೆದ ಡಿಸೆಂಬರ್ 15ರಂದು ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಆ ಪತ್ರ ಇಂದು ಮಾಧ್ಯಮಕ್ಕೆ ಲಭ್ಯವಾಗಿದೆ.

ಲೋಕಪಾಲ್ ಮಸೂದೆಗೆ ಸಂಸತ್ತಿನ ಅಂಗೀಕಾರ ಪಡೆಯುವ ನಿಮ್ಮ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಮತ್ತು ನಿಮ್ಮ ಬದ್ಧತಗೆ ಅಭಿನಂದನೆ ಎಂದು ಅಣ್ಣಾ ಹಜಾರೆ ಅವರು ರಾಹುಲ್‌ಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಲೋಕಪಾಲ್ ಮಸೂದೆ ಜಾರಿಗಾಗಿ ಅಣ್ಣಾ ಹಜಾರೆ ಅವರು ನಡೆಸುತ್ತಿರುವ ನಿರಶನ ಇಂದು 8ನೇ ದಿನಕ್ಕೆ ಕಾಲಿಟ್ಟಿದೆ. ಮಸೂದೆ ಅಂಗೀಕಾರವಾಗದ ಹೊರತು ನಿರಶನ ಕೈಬಿಡುವುದಿಲ್ಲ ಎಂದೂ ಅಣ್ಣಾ ನುಡಿದಿದ್ದಾರೆ.

ಕಳೆದ ಶನಿವಾರ ನವದೆಹಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ವಿಶೇಷ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ್ದ ರಾಹುಲ್, ಸೋಮವಾರ ರಾಜ್ಯಸಭೆಯಲ್ಲಿ ಲೋಕಪಾಲ ಮಸೂದೆ ಚರ್ಚೆಗೆ ಬರಲಿದೆ. ಬಲಿಷ್ಠ ಲೋಕಪಾಲಕ್ಕೆ ನಾವು ಶೇ.99ರಷ್ಟು ಬೆಂಬಲ ನೀಡಿದ್ದೇವೆ. ಇನ್ನುಳಿದ ಶೇ.1ರಷ್ಟು ಬೆಂಬಲವನ್ನು ಇತರೆ ಪಕ್ಷಗಳಿಂದ ಕೋರುತ್ತಿದ್ದೇವೆ. ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಎಲ್ಲರೂ ಇದಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದರು. ಇದೇ ವೇಳೆ, ದೆಹಲಿಯಲ್ಲಿ ಎಎಪಿ ವಿರುದ್ಧದ ಸೋಲು ಹಾಗೂ ಅಣ್ಣಾ ನಿರಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಲೋಕಪಾಲ ಅಂಗೀಕಾರಕ್ಕೆ ಮುಂದಾಗಿದೆ ಎಂಬ ಮಾತನ್ನು ಅವರು ತಳ್ಳಿಹಾಕಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.