ಈಗಿನ ಸುದ್ದಿ

ವಿಮರ್ಶಕ ಸಿಎನ್ ರಾಮಚಂದ್ರನ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ವಿಮರ್ಶಕ ಸಿಎನ್ ರಾಮಚಂದ್ರನ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Published On :

ಬೆಂಗಳೂರು: 2013ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದ್ದು, ಕನ್ನಡದಲ್ಲಿ ಸಾಹಿತಿ ಸಿಎನ್ ರಾಮಚಂದ್ರನ್ ಅವರಿಗೆ ಪ್ರಶಸ್ತಿ ಲಭಿಸಿದೆ.

ಕನ್ನಡದ ಹಿರಿಯ ವಿಮರ್ಶಕರೂ, ಸಂಸ್ಕೃತಿ ಚಿಂತಕರೂ ಆಗಿರುವ ಸಿ.ಎನ್. ರಾಮಚಂದ್ರನ್ ಅವರು ಸೇರಿದಂತೆ ಸಾಹಿತ್ಯ ಕ್ಷೇತ್ರದ 22 ಸಾಧಕರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಶಸ್ತಿ ಲಭಿಸಿದೆ.

ಪ್ರಸಕ್ತ ಸಾಲಿನಲ್ಲಿ 8 ಕವನ ಸಂಕಲನ, 4 ಪ್ರಬಂಧ, ಮೂರು ಕಾದಂಬರಿ, ತಲಾ 2 ಸಣ್ಣ ಕತೆ ಮತ್ತು  ಪ್ರವಾಸ ಕಥನ, ಒಂದು ಆತ್ಮಕಥನ, ಜೀವನ ಚರಿತ್ರೆ ಮತ್ತು ನಾಟಕಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿ ಪಡೆದವರ ಹೆಸರು, ಕೃತಿ ಮತ್ತು ಭಾಷೆ ಈ ಕೆಳಗಿನಂತಿದೆ.

ಕವಿತಾ ವಿಭಾಗ

ಸುಭೋದ್ ಸರ್ಕಾರ್ -ಧ್ವೈಪಾಯನ್ ಹ್ರಾದೇರ್ ಧಾರೇ( ಬಂಗಾಳಿ),
ಅನಿಲ್ ಬೋರೋ - ದೆಲ್ಫಿನಿ ಒಂಥಾಯ್ ಮಾದ್ವೈ ಆರೋ ಗುಬಾನ್ ಗುಬಾನ್ ಕೊಂತಾಯಿ (ಬೋಡೋ)
ಸೀತಾರಾಂ ಸಪೊಲಿಯಾ- ದೋಹಾ ಸಾತ್‌ಸಾಯಿ(ಡೋಗ್ರಿ),
ಅಂಬಿಕಾ ದತ್ - ಅಂತ್ ಹೋಯಿ ನಹೀ ದಿನ್ ಹಾಲ್(ರಾಜಸ್ತಾನಿ)
ರಾಧಾಕಾಂತ್ ಠಾಕೂರ್ - ಚಲದೂರವಾಣಿ(ಸಂಸ್ಕೃತ)
ಅರ್ಜುನ್ ಚರಣ್ ಹೆಂಬ್ರಂ -ಚಂದ ಬೋಂಗಾ(ಸಂತಾಲಿ )
ನಾಮ್‌ದೇವ್ ತಾರಾಚಂದಾನಿ - ಮನ್ಶ್-ನಗರಿ(ಸಿಂಧಿ)
ಜಾವೇದ್ ಅಖ್ತರ್ -ಲಾವಾ(ಉರ್ದು)


ಕಾದಂಬರಿ ವಿಭಾಗ
ಮೃದುಲಾ ಗಾರ್ಗ್- ಮಿಲ್‌ಜುಲ್ ಮನ್  (ಹಿಂದಿ)
 ಮನ್‌ಮೋಹನ್ -ನಿರ್ವಾಣ್(ಪಂಜಾಬಿ)  
ಆರ್.ಎನ್, ಜೋ ಡಿ ಕ್ರೂಜ್- ಕೋರ್‌ಕೈ(ತಮಿಳು)


ಪ್ರಬಂಧ, ವಿಮರ್ಶೆ

ಸಿ.ಎನ್ ರಾಮಚಂದ್ರನ್- ಆಖ್ಯಾನ -ವ್ಯಾಖ್ಯಾನ (ಕನ್ನಡ),
ತುಕಾರಾಂ ರಾಮಾ ಶೇಟ್ -ಮನ್‌ಮೋತಯಂ (ಕೊಂಕಣಿ),
ಸತೀಶ್ ಕಲಾಸೇಖರ್-  ವಚನಾರ್ಯಾಚಿ ರಾಜೋನಿಶಿ( ಮರಾಠಿ)
ಕಾತ್ಯಾಯಿನಿ ವಿದ್ಮಹೆ - ಸಾಹಿತ್ಯಾಕಾಶ್ಮೊಲೋ ಸಂಗಂ(ತೆಲುಗು)

ಸಣ್ಣ ಕತೆ
ತೆಮ್‌ಸುಲಾ ಓ - ಲಾಬರ್‌ನಂ ಫಾರ್ ಮೈ ಹೆಡ್(ಇಂಗ್ಲಿಷ್)
ಮೋಹಿ ಉದ್ ದಿನ್ ರೇಶಿ - ಆಯಿನಾ ಅತಾಶ್(ಕಶ್ಮೀರಿ)

ಪ್ರವಾಸ ಕಥನ
ಮಕೋನ್ಮನಿ ಮೋಂಗ್‌ಸಭಾ - ಚಿಂಗ್‌ಲಾಂಗ್ ಅಮಾದಗಿ ಅಮಾದಾ (ಮಣಿಪುರಿ)
ಮನ್ ಬಹಾದೂರ್ ಪ್ರದಾನ್ - ಮಂಕಾ ಲಹರ್ ರಾ ರಹಾರ್‌ಹಾರು (ನೇಪಾಳಿ)

ಆತ್ಮ ಕಥನ
ಎಂ.ಎನ್ ಪಾಲೂರ್ -'ಕಥೆಯಿಲ್ಲಾದವಂಡೆ ಕಥಾ'  (ಮಲಯಾಳಂ)

ಜೀವನ ಚರಿತ್ರೆ
ಸುರೇಶ್ವರ್ ಜಾ - ಸಂಗ್‌ಹರ್ಷ್ ಆ ಸೆಹಂತಾ (ಮೈಥಿಲಿ)

ನಾಟಕ
ಬಿಜೋಯ್ ಮಿಶ್ರಾ - ಬಾನಪ್ರಸ್ಥಾ(ಒಡಿಯಾ)

ಪ್ರಸ್ತುತ ಪ್ರಶಸ್ತಿಯು ಪ್ರಶಸ್ತಿ ಫಲಕ, ಶಾಲು ಮತ್ತು 1,00000 ರು. ಚೆಕ್ ಒಳಗೊಂಡಿರುತ್ತದೆ. ಈ ಪ್ರಶಸ್ತಿಯನ್ನು 2014 ಮಾರ್ಚ್ 11 ರಂದು ನವದೆಹಲಿಯಲ್ಲಿ ನಡೆಯುವ ಸಾಹಿತ್ಯ ಅಕಾಡೆಮಿಯ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.

ಅಸ್ಸಾಮಿ ಮತ್ತು ಗುಜರಾತಿ ಭಾಷೆಗಳ ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿಯನ್ನು ನಂತರ ಘೋಷಿಸಲಾಗುವುದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ವೆಬ್‌ಸೈಟ್‌ನಲ್ಲಿ ಸೂಚನೆ ನೀಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.