ಬಂಧಮುಕ್ತಕ್ಕಾಗಿ 25 ಕೋಟಿ ರು ನೀಡಿರುವ ಬಗ್ಗೆ ತನಿಖೆಗೆ ಆದೇಶ
ಬಿಹಾರ: ಸೂರತ್ ಮೂಲಕ ಉದ್ಯಮಿಯೊಬ್ಬನನ್ನು ಅಪಹರಣಗೈದ ಪ್ರಕರಣದಲ್ಲಿ ತನ್ನ ಮಗನನ್ನು ಬಿಡುಗಡೆಗೊಳಿಸಲು ತಾನು 25 ಕೋಟಿ ನೀಡಿದ್ದೇನೆ ಎಂದು ಅಪಹರಣಕ್ಕೊಳಗಾದ ವ್ಯಕ್ತಿಯ ಅಪ್ಪ ಆರೋಪಿಸಿದ್ದಾರೆ. ತಾನು ಮಗನನ್ನು ಬಂಧಮುಕ್ತಗೊಳಿಸಲಿಕ್ಕಾಗಿ ಇಷ್ಟೊಂದು ಹಣವನ್ನು ಬಿಹಾರದ ರಾಜಕಾರಣಿಯೊಬ್ಬರ ಮನೆಯಲ್ಲಿ ನೀಡಿದ್ದೆ ಎಂದು ಅವರು ಹೇಳಿದ್ದು, ಇದು ಬಿಹಾರದಲ್ಲಿ ವಿವಾದಕ್ಕೆಡೆ ಮಾಡಿದೆ.
ಅಪಹರಣಕಾರರು ತನ್ನನ್ನು ಪಾಟ್ನಾಗೆ ಕರೆದು ತನ್ನ ಮಹ ಮೊಹಮ್ಮದ್ ಸೊಹೈಲ್ ಹಿಂಗೋರಾ ಅವರನ್ನು ಬಿಡುಗಡೆ ಮಾಡಬೇಕಾದರೆ 25 ಕೋಟಿ ರು. ನೀಡಬೇಕೆಂದು ಹೇಳಿದ್ದರು ಎಂದು ಟೆಕ್ಸ್‌ಟೈಲ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಕಟ್ಟಡ ಉದ್ಯಮಿ ಹನೀಫ್ ಹಿಂಗೋರಾ ಹೇಳಿದ್ದಾರೆ.
ಅಕ್ಟೋಬರ್ 29 ರಂದು ಸೊಹೈಲ್ ಅವರನ್ನು ಆಗಂತುಕರು ದಮನ್ ನಿಂದ ಅಪಹರಣಗೈದು ಬಿಹಾರದಲ್ಲಿ ಬಚ್ಚಿಟ್ಟಿದ್ದರು.
ನಾನು ಪಾಟ್ನಾದಲ್ಲಿ ಅಪಹರಣಕಾರರಿಗೆ ಹಣ ನೀಡುವ ಮುನ್ನ ನನ್ನನ್ನು 40 ಸ್ಥಳಗಳಿಗೆ ಕರೆದೊಯ್ಯಲಾಗಿತ್ತು. ಈ ಅಪಹರಣ ಕೃತ್ಯದಲ್ಲಿ ಪೊಲೀಸರು ಮತ್ತು ರಾಜಕಾರಣಿಗಳ ದೊಡ್ಡ ಗ್ಯಾಂಗ್ ಕಾರ್ಯಾಚರಣೆ ನಡೆಸುತ್ತಿದೆ ಎಂದು ಬಿಡುಗಡೆಯಾದನಂತರ ನನ್ನ ಮಗ ಹೇಳಿದ್ದ ಎಂದು ಹಿಂಗೋರಾ ಹೇಳಿದ್ದಾರೆ.
ಜೆಡಿಯು ಸಚಿವರ ಮನೆಯಲ್ಲಿಯೇ ನಾನು ಈ ಹಣವನ್ನು ನೀಡಿದ್ದು, ಆ ಸಚಿವರ ಹೆಸರನ್ನು ನಾನೀಗ ಬಹಿರಂಗ ಪಡಿಸುವುದಿಲ್ಲ. ತನ್ನ ಮಗ ಸೊಹೈಲ್‌ನ್ನು ಸರಣ್ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರ ಮನೆಯಲ್ಲಿ ಬಚ್ಚಿಟ್ಟಿದ್ದರು ಎಂದು ಹನೀಫ್ ಹೇಳಿದ್ದಾರೆ.
ಹನೀಫಾ ಅವರ ಆರೋಪದ ಹಿನ್ನೆಲೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತನಿಖೆಗೆ ಆದೇಶಿಸಿದ್ದಾರೆ. ಹನೀಫಾ ಅವರು ಆರೋಪ ಮಾಡುತ್ತಿರುವ ಸಚಿವರ ಹೆಸರು ತಿಳಿದುಕೊಳ್ಳಲು ನಾನು ಕುತೂಹಲಿಯಾಗಿದ್ದೇನೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

