ಸರ್ಕಾರ ರಚನೆ: ಸೋಮವಾರ ಎಎಪಿ ನಿರ್ಧಾರ ಪ್ರಕಟ
ನವದೆಹಲಿ: ದೆಹಲಿಯಲ್ಲಿ ಸರ್ಕಾರ ರಚನೆ ಮಾಡುವ ಬಗ್ಗೆ ತಮ್ಮ ಅಂತಿಮ ನಿರ್ಧಾರವನ್ನು ಆಮ್ ಆದ್ಮಿ ಪಕ್ಷ (ಎಎಪಿ) ಸೋಮವಾರ ಪ್ರಕಟಿಸಲಿದೆ.
ಸರ್ಕಾರ ರಚನೆ ಬಗ್ಗೆ ಎಎಪಿ ದೆಹಲಿಯಲ್ಲಿ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದು, ಈ ಬಗ್ಗೆ ತಮ್ಮ ತೀರ್ಮಾನವನ್ನು ಸೋಮವಾರ ಪ್ರಕಟಿಸಲಿದೆ.
ಅದೇ ವೇಳೆ ಎಎಪಿ ದೆಹಲಿಯಲ್ಲಿ ಶನಿವಾರ ಮತ್ತು ಭಾನುವಾರ 271 ಸಾರ್ವಜನಿಕ ಸಭೆಗಳನ್ನು ಹಮ್ಮಿಕೊಂಡಿದೆ. ಈ ಸಭೆಗಳ ನಂತರ ತಾವು ನಿರ್ಧಾರ ತೆಗೆದುಕೊಂಡು
ತದನಂತರವೇ ನಮ್ಮ ಅಭಿಪ್ರಾಯವನ್ನು ಬಹಿರಂಗಪಡಿಸುತ್ತೇವೆ ಎಂದು ಎಎಪಿ ಹಿರಿಯ ನೇತಾರರೊಬ್ಬರು ಹೇಳಿದ್ದಾರೆ.
ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿದ್ದು, ದೆಹಲಿಯ ಜನರು ನಿರ್ಧಾರ ತೆಗೆದುಕೊಳ್ಳಲು ನಮಗೆ ಸಹಾಯ ಮಾಡುತ್ತಾರೆ ಎಂದು ಎಎಪಿ ನಾಯಕರು ಹೇಳಿದ್ದಾರೆ.
ಆದಾಗ್ಯೂ, ತಾವು ನಡೆಸುವ ಸಾರ್ವಜನಿಕ ಸಭೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಎಎಪಿ ಎಲ್ಲ ಸಭೆಗಳ ವೀಡಿಯೋ ರೆಕಾರ್ಡಿಂಗ್ ಮಾಡುತ್ತಿದೆ. ಯಾರಿಗೆ ನೋಡಬೇಕೆಂದೆನಿಸುತ್ತೋ ಅವರು ಆ ವೀಡಿಯೋ ನೋಡಬಹುದು ಎಂದು ಎಎಪಿ ಹೇಳಿದೆ.
ಎಎಪಿ ಸರ್ಕಾರಕ್ಕೆ "ಜನಮತ"
ದೆಹಲಿಯಲ್ಲಿ ಸರ್ಕಾರ ರಚನೆಗೆ ಆಮ್ ಆದ್ಮಿ ಪಕ್ಷ ಜನಾಭಿಪ್ರಾಯ ಸಂಗ್ರಹಿಸುತ್ತಿರುವ ವೇಳೆಯಲ್ಲಿ ದೆಹಲಿಯ ಬಹುತೇಕ ಜನರು ಎಎಪಿ ಸರ್ಕಾರವೇ ಗದ್ದುಗೆಗೇರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಎಬಿಪಿ ನ್ಯೂಸ್-ನೀಲ್ಸನ್ ನಡೆಸಿದ ಸಮೀಕ್ಷೆಯಲ್ಲಿ ಪ್ರಕಟವಾಗಿದೆ.
ಎಬಿಪಿ ನ್ಯೂಸ್-ನೀಲ್ಸನ್ ಸಮೀಕ್ಷೆಯಲ್ಲಿ ದೆಹಲಿ ಜನರಿಗೆ ಕೇಜ್ರಿವಾಲ್ ಸರ್ಕಾರ ನಡೆಸಬೇಕೆ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಇದಕ್ಕೆ ಶೇ.80 ಮಂದಿ ಬೇಕು ಎಂದು ಉತ್ತರ ಕೊಟ್ಟರೆ ಶೇ. 19 ಮಂದಿ ಬೇಡ ಎಂದು ಉತ್ತರಿಸಿದ್ದಾರೆ.
ಅದೇ ವೇಳೆ ದೆಹಲಿಯಲ್ಲಿ ಮರುಚುನಾವಣೆ ನಡೆಸಬೇಕೆ? ಎಂಬ ಪ್ರಶ್ನೆಗೆ ಶೇ. 64 ಮಂದಿ ಬೇಡ ಎಂದು ಉತ್ತರಿದ್ದು, ಶೇ. 33 ಜನ ಬೇಕು ಎಂದು ಉತ್ತರಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

