ಭಾರತದ ಸೇನೆಗೆ ದೇಶಿ ನಿರ್ಮಿತ 'ತೇಜಸ್'

ಬೆಂಗಳೂರು: 30 ವರ್ಷಗಳ ಬಳಿಕ ಭಾರತದಲ್ಲಿ ಸ್ವತಂತ್ರ್ಯವಾಗಿ ಅಭಿವೃದ್ಧಿಪಡಿಸಲಾಗಿರುವ ಲಘು ಯುದ್ಧ ವಿಮಾನ (ಎಲ್ಸಿಎ) 'ತೇಜಸ್' ಶುಕ್ರವಾರ ಅಧಿಕೃತವಾಗಿ 'ಆರಂಭಿಕ ಕಾರ್ಯಾಚರಣೆ ಪ್ರಮಾಣಪತ್ರ-2' (ಐಓಸಿ) ಪಡೆದುಕೊಂಡಿದೆ.
ಸುಮಾರು 200 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ತೇಜಸ್ ಯುದ್ಧ ವಿಮಾನದ ಎರಡನೇ ಪರೀಕ್ಷಾರ್ಥ ಪ್ರದರ್ಶನ ಇಂದು ನಗರದ ಎಚ್ಎಎಲ್ನಲ್ಲಿ ನಡೆಯಿತು. ಬಳಿಕ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಅವರು ಈ ಸಂಬಂಧ ಅಧಿಕೃತ ದಾಖಲೆಗಳನ್ನು ಏರ್ ಚೀಫ್ ಮಾರ್ಷಲ್ ಎನ್.ಎ.ಕೆ ಬ್ರೌನ್ ಅವರಿಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ರಕ್ಷಣಾ ಸಚಿವರು ಭಾರತಕ್ಕೆ ಇದೊಂದು ಐತಿಹಾಸಿಕ, ಮಹತ್ವದ ದಿನ ಎಂದು ಬಣ್ಣಿಸಿದರು. ಭಾರತದ ಸೇನೆಗೆ ತೇಜಸ್ ವಿಮಾನವನ್ನು ಸೇರ್ಪಡೆಗೊಳಿಸುವ ಕಾಲ ಹತ್ತಿರ ಬಂದಿರುವುದು ದೇಶದ ಪಾಲಿಗೆ ಮಹತ್ವದ ಮೈಲಿಗಲ್ಲಾಗಿದೆ. ಲಘು ಯುದ್ಧ ವಿಮಾನ ತಯಾರಿಕೆ ಮೂಲಕ ಎಲ್ಲಾ ಮಾದರಿಯ ಯುದ್ಧ ವಿಮಾನಗಳನ್ನು ಸ್ವತಂತ್ರ್ಯವಾಗಿ ಅಭಿವೃದ್ಧಿಪಡಿಸುವ ಎಲೈಟ್ ಗುಂಪಿಗೆ ಭಾರತ ಸೇರ್ಪಡೆಯಾಗಿದೆ ಎಂದು ಆ್ಯಂಟನಿ ಹೇಳಿದರು.
ದೇಶದ ಭದ್ರತೆಯನ್ನು ಗಮನದಲ್ಲಿರಿಸಿಕೊಂಡು ಕಳೆದ 30 ವರ್ಷಗಳಿಂದ 'ತೇಜಸ್' ಅಭಿವೃದ್ಧಿಗೆ ಶ್ರಮಿಸಿದ ಎಚ್ಎಎಲ್, ಎಡಿಎ, ವಾಯುಸೇನೆ, ಡಿಆರ್ಡಿಓ ಸೇರಿದಂತೆ ನೂರಾರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳೆಲ್ಲರಿಗೂ ಅಭಿನಂದಿಸಿದರು.
ಯುದ್ಧ ವಿಮಾನ 'ತೇಜಸ್' ನಿರ್ಮಾಣದ ಶ್ರೇಯಸ್ಸು ಯಾವುದೇ ಒಂದು ಸರ್ಕಾರ, ಅಥವಾ ಯಾವುದೇ ಒಬ್ಬ ಅಧಿಕಾರಿಗೆ ಸಲ್ಲುವಂತದಲ್ಲ. ಬದಲಿಗೆ ಕಳೆದ 30 ವರ್ಷಗಳಿಂದ ತೇಜಸ್ ಅಭಿವೃದ್ಧಿಯ ಪ್ರತಿ ಹಂತದಲ್ಲಿ ಶ್ರಮಿಸಿದ ಎಲ್ಲರಿಗೂ ಸಲ್ಲುತ್ತದೆ ಎಂದು ಆ್ಯಂಟನಿ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಾಯು ಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎನ್.ಎ.ಕೆ. ಬ್ರೌನ್, ತೇಜಸ್ ಆರಂಭಿಕ ಕಾರ್ಯಾಚರಣೆ ಪ್ರಮಾಣಪತ್ರ ಪಡೆಯುವ ಮೂಲಕ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದರು.
'ತೇಜಸ್' ವೈಶಿಷ್ಟ್ಯಗಳು:
- ಗಂಟೆಗೆ ಸುಮಾರು 1350 ಕಿ.ಮಿ. ವೇಗದಲ್ಲಿ ಚಲಿಸುವ ಈ ತೇಜಸ್ ವಿಶಿಷ್ಟ ತಂತ್ರಜ್ಞಾನವನ್ನು ಹೊಂದಿದೆ.
- ತನ್ನ ರಾಡಾರ್ ವ್ಯವಸ್ಥೆಯಿಂದಾಗಿ ರಾತ್ರಿ ವೇಳೆ ಮತ್ತು ಎಲ್ಲ ಸಮಯದಲ್ಲೂ ಅಂದರೆ ಮಳೆ, ಗಾಳಿ, ಚಳಿಯಲ್ಲೂ ಇದು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಬಲ್ಲದು.
- ತೇಜಸ್ ಇಬ್ಬರು ಪೈಲಟ್ಗಳನ್ನು ಹೊಂದಿದ್ದು, ಟ್ರೈನರ್ ಆಗಿಯೂ ಕೆಲಸ ಮಾಡುತ್ತದೆ.
- ತೇಜಸ್ ಲೇಸರ್ ಬಾಂಬ್ ದಾಳಿ ಹಾಗೂ ಗನ್ಫೈಟ್ನಲ್ಲೂ ಕಾರ್ಯನಿರ್ವಹಿಸಲಿದೆ.
- 4 ಅಡಿ 9 ಇಂಚು ಎತ್ತರ ಹಾಗೂ 43ಅಡಿ ಉದ್ದವಿರುವ ಈ ತೇಜಸ್ನ ನಿರ್ಮಾಣದ ಒಟ್ಟು ವೆಚ್ಚ 200ಕೋಟಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


