ಭಾರತಕ್ಕೆ 457 ರನ್ಗಳ ಮುನ್ನಡೆ
ಜೊಹಾನ್ಸ್ಬರ್ಗ್: ದಕ್ಷಿಣ ಅಫ್ರಿಕಾ ವಿರುದ್ಧ ಮೊದಲ ಟೆಸ್ಟ್ನ ದ್ವಿತೀಯ ಇನ್ಸಿಂಗ್ಸ್ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದ್ದು 457 ರನ್ಗಳ ಮುನ್ನಡೆ ಸಾಧಿಸಿದೆ.
ಎರಡು ವಿಕೆಟ್ ನಷ್ಟಕ್ಕೆ 284 ರನ್ ಸ್ಕೋರ್ ಇದ್ದು, ಶನಿವಾರ ನಾಲ್ಕನೇ ದಿನದ ಆಟ ಆರಂಭಿಸಿದ ಟೀಂ ಇಂಡಿಯಾ 412 ರನ್ಗೆ ಆಲ್ ಔಟಾಗಿದೆ.
ಸೆಂಚುರಿ ಬಾರಿಸುವ ಮೂಲಕ ಉತ್ತಮ ಆಟ ಪ್ರದರ್ಶಿಸಿದ ಚೇತೇಶ್ವರ ಪೂಜಾರ (153), ಮತ್ತು ಶತಕ ವಂಚಿತ ವಿರಾಟ್ ಕೊಹ್ಲಿ (96) ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಬೃಹತ್ ಮೊತ್ತ ದಾಖಲಿಸುವಂತಾಯಿತು.
ನಾಲ್ಕನೇ ದಿನದ ಪಂದ್ಯದಲ್ಲಿ ರೋಹಿತ್ ಶರ್ಮಾ(6), ಅಜೆಂಕ್ಯ ರೆಹಾನೆ (15), ಧೋನಿ (29), ಆರ್. ಅಶ್ವಿನ್ (7), ಇಶಾಂತ್ ಶರ್ಮಾ (4), ಮುಹಮ್ಮದ್ ಶಮಿ (4) ರನ್ ಗಳಿಸಿ ಔಟಾಗಿದ್ದು, 29 ರನ್ ಗಳಿಸಿದ ಜಹೀರ್ ಖಾನ್ ಅಜೇಯರಾಗಿ ಉಳಿದಿದ್ದಾರೆ.
ದಕ್ಷಿಣ ಆಫ್ರಿಕಾದ ಫಿಲಾಂಡರ್ 4, ಮೋರ್ಕೆಲ್ 3, ಸ್ಟೇಯ್ನ್ ಮತ್ತು ಕಾಲಿಸ್ ತಲಾ ಒಂದು ವಿಕೆಟ್ ಪಡೆದ್ದಾರೆ.
ಭಾರತಕ್ಕೆ ಸ್ಕೋರ್ನ್ನು ಬೆನ್ನಟ್ಟಿ ಬ್ಯಾಟಿಂಗ್ಗಿಳಿದಿರುವ ದಕ್ಷಿಣಾ ಆಫ್ರಿಕಾ ಇದೀಗ 24ನೇ ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೆ 77 ರನ್ ಗಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

