ಗುಜರಾತ್ ಗಲಭೆಯಿಂದ ಆಘಾತಕ್ಕೊಳಗಾಗಿದ್ದೆ: ಮೋದಿ

ನವದೆಹಲಿ: 2002ರ ಗುಜರಾತ್ ಗಲಭೆ ಬಗ್ಗೆ ಬ್ಲಾಗ್ನಲ್ಲಿ ತಮ್ಮ ನೋವು, ಸಂಕಟ ತೋಡಿಕೊಂಡಿರುವ ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು, ಗಲಭೆಗಳಿಂದ ನಾನು ತೀವ್ರ ಆಘಾತಕ್ಕೆ ಒಳಗಾಗಿದ್ದೆ ಎಂದಿದ್ದಾರೆ.
2002ರ ಗುಜರಾತ್ ಗಲಭೆ ಪ್ರಕರಣದಲ್ಲಿ ಅಹಮಬಾದ್ ಕೋರ್ಟ್ನಿಂದ ಕ್ಲೀನ್ ಚಿಟ್ ಪಡೆದ ಮಾರನೆ ದಿನವೇ ಮೋದಿ ದೇಶದ ಜನತೆಯಲ್ಲಿ ತಮ್ಮ ಮನದಾಳದ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಗುಜರಾತ್ನಲ್ಲಿ ನಡೆದ ಹಿಂಸಾಚಾರ ಘಟನೆಗಳು 2001ರ ಭೀಕರ ಭೂಕಂಪದ ನಂತರದ ಅನಿರೀಕ್ಷಿತ ಹೊಡೆತ ಎಂದಿದ್ದಾರೆ. ರಾಜ್ಯದಲ್ಲಿ ಅಮಾನುಷ ಕೃತ್ಯ ಘಟಿಸಿದೆ, ಇಂಥ ದುರದೃಷ್ಟಕರ ದಿನಗಳು ಇನ್ಯಾರ ಬಾಳಲ್ಲೂ ಬಾರದಿರಲಿ, ಬೇರೆ ಯಾವ ದೇಶದಲ್ಲೂ ಬಾರದಿರಲಿ ಎಂದು ಮೋದಿ ಆಶಿಸಿದ್ದಾರೆ.
ತಾವು ಶಾಂತಿ, ನ್ಯಾಯ ಹಾಗೂ ಪುನರ್ವಸತಿಗಾಗಿ ಶ್ರಮಿಸಿದ್ದನ್ನು ಬ್ಲಾಗ್ನಲ್ಲಿವಿವರಿಸಿರುವ ಮೋದಿ, ಸಾಮರಸ್ಯ ಕಾಪಾಡಲು ದೇಶದ ಜನತೆಗೆ ಮನವಿ ಮಾಡಿದ್ದಾರೆ.
ನಿನ್ನೆ ಅಹಮದಾಬಾದ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗುಜರಾತ್ ಮುಖ್ಯಮಂತ್ರಿಗೆ ಕ್ಲೀನ್ಚಿಟ್ ನೀಡಿ ತೀರ್ಪು ನೀಡುತ್ತಿದಂತೆ ಟ್ವೀಟ್ ಮಾಡಿದ್ದ ಮೋದಿ, 'ಸತ್ಯಮೇವ ಜಯತೆ' ಎಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


