ಸನ್ಯಾಸ ದೀಕ್ಷೆ ಪಡೆದ ನಟಿ ರಂಜಿತಾ

ಬೆಂಗಳೂರು: ನಿತ್ಯಾನಂದನ ಜೊತೆಗಿನ ರಾಸಲೀಲೆ ಪ್ರಕರಣದ ನಾಯಕಿ ಹಾಗೂ ತಮಿಳು ನಟಿ ರಂಜಿತಾ ಅವರು ಶುಕ್ರವಾರ ಬಿಡದಿಯ ನಿತ್ಯಾನಂದ ಆಶ್ರಮದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ.
ನಿತ್ಯಾನಂದನ 37ನೇ ಹುಟ್ಟಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ನಟಿ ರಂಜಿತಾ ಅವರು ಸ್ವಯಂಪ್ರೇರಿತರಾಗಿ ಸನ್ಯಾಸ ದೀಕ್ಷೆ ಪಡೆದಿದ್ದಾರೆ. ಸನ್ಯಾಸ ದೀಕ್ಷೆ ಪಡೆದ ನಂತರ ರಂಜಿತಾ ಅವರ ಹೆಸರನ್ನು 'ಮಾ ಆನಂದಮಯೀ' ಎಂದು ಬದಲಾಯಿಸಲಾಗಿದೆ.
ಸನ್ಯಾಸ ದೀಕ್ಷೆ: ನಾನು ಪ್ರಜ್ಞಾಪೂರ್ವಕವಾಗಿ ಇನ್ನು ಮುಂದೆ ಆನಂದಮಯೀಯಾಗುತ್ತಿದ್ದೇನೆ. ಇನ್ನೇನಿದ್ದರು ನಿತ್ಯಾನಂದ ಸ್ವಾಮೀಯ ಸೇವೆಯೇ ನನ್ನ ಗುರಿ. ನನ್ನು ಉಸಿರಿರುವ ತನಕ ನಾನು ನಿತ್ಯಾನಂದನ ಆಶ್ರಮ ಬಿಟ್ಟು ಹೋಗುವುದಿಲ್ಲ ಎಂದು ಪ್ರಮಾಣ ಮಾಡುವ ಮೂಲಕ ದೀಕ್ಷೆ ಸ್ವೀಕರಿಸಿದರು.
ರಂಜಿತಾ ಕಳೆದ ನಾಲ್ಕು ವರ್ಷಗಳಿಂದ ನಿತ್ಯಾನಂದ ಸ್ವಾಮಿಯ ಭಕ್ತೆಯಾಗಿದ್ದರು. ಅಲ್ಲದೆ ನಿತ್ಯಾನಂದನ ಹಲವಾರು ಕಾರ್ಯಕ್ರಮಗಳಲ್ಲೂ ರಂಜಿತಾ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ರಂಜಿತಾ ಇಂದು ಸನ್ಯಾಸ ದೀಕ್ಷೆ ಪಡೆದಿದ್ದಾರೆ.
ನಟಿ ರಂಜಿತಾ ಸನ್ಯಾಸ ದೀಕ್ಷೆ ಸ್ವೀಕರಿಸಿರುವುದನ್ನು ಹಲವು ಮಠಾಧೀಶರು ವಿರೋಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಗದ್ಗುರು ಬಸವ ಧರ್ಮಪೀಠದ ಪೀಠಾಧ್ಯಕ್ಷೆ, ಮಾತೆ ಮಾದೇವಿ ಅವರು, ಈ ವಿಚಾರ ಕೇಳಿ ನನಗೆ ಆಶ್ಚರ್ಯ ಮತ್ತು ಆಘಾತವಾಗಿದೆ. ರಂಜಿತಾ ನಿತ್ಯಾನಂದರ ಪ್ರಕರಣ ಇನ್ನು ನೆನಪಿದೆ. ಹೀಗಿದ್ದವರು ಇದ್ದಕ್ಕಿದ್ದಂತೆ ಹೇಗೆ ಸನ್ಯಾಸ ಸ್ವೀಕರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕೇವಲ ಪ್ರಚಾರಕ್ಕಾಗಿ ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದ ಅವರು, ಸಾಧು ದೀಕ್ಷೆ ಪಡೆದು ಸಾಧಿಸುವುದು ಸುಲಭವಲ್ಲ. ಸನ್ಯಾಸ ಸ್ವೀಕರಿಸುವವರು ಮೊದಲು ಸೇವೆ ಮತ್ತು ತ್ಯಾಗ ಮನೋಭಾವ ಹೊಂದಿರಬೇಕು. ಆದರೆ ರಂಜಿತಾ ಅವರು ಸುಖಭೋಗದಲ್ಲಿ ಬೆಳೆದಿರುವ ಹೆಣ್ಣುಮಗಳು ಸನ್ಯಾಸ ದೀಕ್ಷೆ ಪಡೆಯುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಅದು ಅಲ್ಲದೆ ನಿತ್ಯಾನಂದ ಆಶ್ರಮದಲ್ಲಿ ಎಂತಾ ವಾತಾವರಣವಿದೆ ಎಂದು ಎಲ್ಲರಿಗೂ ತಿಳಿದಿದೆ. ಈಗಿರುವಾಗ ಇಂತಹ ಭೋಗ ವಾತಾವರಣದಲ್ಲಿ ಸನ್ಯಾಸಿಯಾಗಿ ರಂಜಿತಾ ಏನು ಸಾಧಿಸುತ್ತಾರೆ ನೋಡಬೇಕಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


