ಬಾಲಿವುಡ್ ನಟ ಫಾರೂಕ್ ಶೇಕ್ ವಿಧಿವಶ

ನವದೆಹಲಿ: ಬಾಲಿವುಡ್ನ ಹಿರಿಯ ನಟ ಫಾರೂಖ್ ಶೇಕ್ ಅವರು ಹೃದಯಾಘಾತದಿಂದಾಗಿ ಶನಿವಾರ ನಿಧನರಾಗಿದ್ದಾರೆ.
ಗಾಯನ ಕಾರ್ಯಕ್ರಮವೊಂದರಲ್ಲಿ ಪಾಲ್ಗೋಳ್ಳಲು ದುಬೈಗೆ ಹೋಗಿದ್ದ ಅವರು ಕಳೆದ ತಡರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಗಾದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು ಎಂದು ಅವರ ಕುಟುಂಬವರ್ಗದವರು ತಿಳಿಸಿದ್ದಾರೆ. ಅಲ್ಲದೆ ದುಬೈನಲ್ಲಿ ಕೆಲ ವಿಧಿವಿಧಾನಗಳನ್ನು ಪೂರೈಸಿದ ನಂತರ ಅವರ ಪಾರ್ಥಿವ ಶರೀರವನ್ನು ಮುಂಬೈಗೆ ತರಲಾಗುವುದು ಎಂದಿದ್ದಾರೆ.
ಫಾರೂಖ್ ಅವರು ಬಾಲಿವುಡ್ನ ಪ್ರಮುಖ ಚಿತ್ರಗಳಲ್ಲಿ ಒಂದಾದ 1973ರಲ್ಲಿ ತೆರೆಕಂಡ 'ಗರಂ ಹವಾ' ಚಿತ್ರದ ಮನೋಜ್ಞಾ ನಟನೆಯಿಂದ ಜನಪ್ರಿಯರಾಗಿದ್ದರು. ನಂತರ 1977ರಲ್ಲಿ ಸತ್ಯಜೀತ್ ರೇ ಅವರ, ಶತ್ರಂಜ್ ಕೀ ಕಿಲಾಡಿ(ಚೆಸ್ ಆಟಗಾರ) ಚಿತ್ರದಲ್ಲಿ ನಟಿಸಿದ್ದರು. ನಂತರ ಚೆಶ್ಮೆ ಬುದ್ದೂರ್, ಕೀಸಿಸೇ ನಾ ಕೆಹ್ನಾ, ನೂರಿಹೇ ಚಿತ್ರಗಳಲ್ಲಿ ಅವರು ನಟಿಸಿದ್ದರು.
ರಂಗಭೂಮಿ, ಚಿತ್ರರಂಗ, ಟಿವಿ ಕಿರುತೆರೆಗಳಲ್ಲಿ ಫಾರೂಖ್ ಕೊಡುಗೆ ಅಪಾರವಾಗಿದ್ದು, ಗರಂ ಹವಾ ಸೇರಿದಂತೆ ಬಾಲಿವುಡ್ನ ಹಲವು ಚಿತ್ರಗಳಲ್ಲಿ ತಮ್ಮ ಅದ್ಬುತ ನಟನೆಯ ಮೂಲಕ ಮನೆ ಮಾತಾಗಿದ್ದರು. ಅವರ ಕಡೆಯ ಚಿತ್ರ 'ಕ್ಲಬ್ 60'. ಅದಕ್ಕೂ ಮುಂಚೆ 'ಯೇ ಜವಾನ್ ಹೈ ದಿವಾನಿ' ಚಿತ್ರದಲ್ಲಿ ರಣಬೀರ್ ಕಪೂರ್ ತಂದೆಯಾಗಿ ನಟಿಸಿದ್ದರು. ಝೀ ಟಿವಿಯಲ್ಲಿ ಅವರು ನಡೆಸಿಕೊಟ್ಟ 'ಜೀನಾ ಇಸೀ ಕಾ ನಾಮ್ ಹೈ' ಕಾರ್ಯಕ್ರಮ ಭಾರಿ ಜನಪ್ರಿಯವಾಗಿತ್ತು.
ಫಾರೂಕ್ ನಿಧನಕ್ಕೆ ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ. ಬಾಲಿವುಡ್ನ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಅವರು ವಿಷಾದ ವ್ಯಕ್ತಪಡಿಸಿದ್ದು, ಅವರು ಮೃತಪಟ್ಟಿರುವುದಾಗಿ ನಂಬಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಚಿತ್ರರಂಗ ಒಬ್ಬ ಹಿರಿಯ ನಟನನ್ನು ಕಳೆದುಕೊಂಡಿದೆ. ಅಲ್ಲದೆ ನಾನು ಒಬ್ಬ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಎಂದು ನಟ ಸತೀಶ್ ಷಾ ಅವರು ಶೋಕ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


