ದೇವಯಾನಿ ವಿಚಾರಣೆ ಮುಂದುವರೆಸಿದ ಅಮೆರಿಕಾ

ನ್ಯೂಯಾರ್ಕ್: ವೀಸಾ ವಂಚನೆ ಆರೋಪದಡಿ ಭಾರತದ ಉಪರಾಯಭಾರಿ ದೇವಯಾನಿ ಖೋಬ್ರಾಗಡೆ ಅವರನ್ನು ಬಂಧಿಸಿ ವಿಚಾರಣೆ ವೇಳೆ ಹೀನಾಯವಾಗಿ ನಡೆಸಿಕೊಂಡಿದ್ದ ಅಮೆರಿಕಾ, ಅವರನ್ನು ಕ್ಷಮೆಯಾಚಿಸುವುದಿಲ್ಲ ಎಂಬ ದುರಂಕಾರದ ಪ್ರತಿಕ್ರಿಯೆ ನೀಡಿದ್ದು, ಅವರ ವಿರುದ್ಧದ ವಿಚಾರಣೆಯನ್ನು ಚುರುಕುಗೊಳಿಸಿದೆ.
ತನಿಖೆಯ ಹೆಸರಲ್ಲಿ ದೇವಯಾನಿ ಖೋಬ್ರಾಗಡೆ ಅವರನ್ನು ಹೀನಾಯವಾಗಿ ನಡೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಕ್ಷಮೆಯಾಚಿಸಬೇಕು ಎಂಬ ಭಾರತದ ಆಗ್ರಹಕ್ಕೆ ಸೊಪ್ಪು ಹಾಕದ ಅಮೆರಿಕಾ, ತಾನು ಅವರನ್ನು ಕ್ಷಮೆಯಾಚಿಸುವುದಿಲ್ಲ ಎಂಬ ದುರಂಕಾರದ ಪ್ರತಿಕ್ರಿಯೆ ನೀಡಿದೆ. ಅಲ್ಲದೆ ಖೋಬ್ರಾಗಡೆ ವಿರುದ್ಧದ ವಂಚನೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯ ಸಂಗ್ರಹಕ್ಕೆ ಮುಂದಾಗಿರುವ ಅಧಿಕಾರಿಗಳು ಜನವರಿ 13 ಡೆಡ್ಲೈನ್ ಪಡೆದಿದ್ದಾರೆ.
ಭಾರತದ ಉಪರಾಯಭಾರಿ ಆಗಿ ನೇಮಕಗೊಂಡಿದ್ದ ದೇವಯಾನಿ ಕೋಬ್ರಾಗಡೆ ತಮ್ಮ ಮನೆಗೆಲಸದಾಕೆ ಸಂಗೀತಾ ರಿಚರ್ಡ್ ಎಂಬಾಕೆಗೆ ನೀಡುತ್ತಿರುವ ಸಂಬಳದ ಕುರಿತು ವೀಸಾ ದಾಖಲಾತಿಯಲ್ಲಿ ತಪ್ಪು ಮಾಹಿತಿ ನೀಡಿದ್ದ ಆರೋಪದಡಿ ಡಿಸೆಂಬರ್ 12ರಂದು ದೇವಯಾನಿಯನ್ನು ಬಂಧಿಸಲಾಗಿತ್ತು. ಆ ನಂತರ 2.4 ಲಕ್ಷ ಡಾಲರ್ ಭದ್ರತೆ ನೀಡಿ ಜಾಮೀನಿನ ಮೇಲೆ ದೇವಯಾನಿ ರಿಲೀಸ್ ಆಗಿದ್ದರು.
ಕೋಬ್ರಾಗಡೆ ಅವರನ್ನು ಬಂಧಿಸಿದ ಅಧಿಕಾರಿಗಳು ಅವರನ್ನು ಒಬ್ಬ ಸಾಮಾನ್ಯ ಕೈದಿಯಂತೆ ನಡೆಸಿಕೊಳ್ಳಲಾಗಿತ್ತು. ಇದೇ ವೇಳೆ ಆಕೆಯನ್ನು ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿದ್ದರು. ಅಲ್ಲದೆ ಅವರನ್ನು ಕ್ರಿಮಿನಲ್ಸ್ ಮತ್ತು ಮಾದಕ ವ್ಯಸನಿಗಳ ಸೆಲ್ನಲ್ಲಿ ಕೂಡಿ ಹಾಕಿ ಹೀನಾಯವಾಗಿ ನಡೆಸಿಕೊಂಡಿದ್ದರು.
ಅಮೆರಿಕದ ಈ ವರ್ತನೆ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಭಾರತ ಸರ್ಕಾರ ಅಮೆರಿಕಾ ರಾಯಭಾರ ಕಚೇರಿ ಸಿಬ್ಬಂದಿಗೆ ನೀಡಿದ ಎಲ್ಲ ವಿನಾಯ್ತಿಗಳನ್ನು ಹಿಂಪಡೆದಿತ್ತು. ಪ್ರಕರಣದ ಸಂಬಂಧ ಅಮೆರಿಕ ಕ್ಷಮೆಯಾಚಿಸುವಂತೆ ಭಾರತ ಪಟ್ಟುಹಿಡಿದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


