ಈಗಿನ ಸುದ್ದಿ

ಸೊಲೊಮನ್ ದ್ವೀಪಗಳಲ್ಲಿ ಪ್ರಬಲ ಭೂಕಂಪ: ಸುನಾಮಿ ಭೀತಿ

ಸೊಲೊಮನ್ ದ್ವೀಪಗಳಲ್ಲಿ ಪ್ರಬಲ ಭೂಕಂಪ: ಸುನಾಮಿ ಭೀತಿ
Published On :

ಹೊಂಜಾರಾ: ಸೊಲೊಮನ್ ದ್ವೀಪಗಳಲ್ಲಿ ಬುಧವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ಫೆಸಿಫಿಕ್ ಕರಾವಳಿಯಾದ್ಯಂತ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಫೆಸಿಫಿಕ್ ರಾಷ್ಟ್ರಗಳ ಕರಾವಳಿ ಭಾಗದಲ್ಲಿರುವ ಸೊಲೊಮನ್ ದ್ವೀಪಗಳಲ್ಲಿ ಇಂದು ಮಧ್ಯಾಹ್ನದ ಹೊತ್ತಿಗೆ 8.0 ತೀವ್ರತೆಯ ಪ್ರಬಲ ಭೂಕಂಪನ ಉಂಟಾಗಿದೆ. ಭೂಕಂಪನದ ತೀವ್ರತೆಗೆ ದ್ವೀಪದಲ್ಲಿ ಭೂಮಿ ಬಿರುಕು ಬಿಟ್ಟಿದೆ. ಅಲ್ಲದೆ ಫೆಸಿಫಿಕ್ ಕರಾವಳಿಯಾದ್ಯಂತ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಈಗಾಗಲೇ ಹವಾಯಿ ದ್ವೀಪದಲ್ಲಿ ಅಲ್ಪ ಪ್ರಮಾಣದ ಸುನಾಮಿ ಸಂಭವಿಸಿದ್ದು, ಸಾವುನೋವಿನ ವರದಿಯಾಗಿಲ್ಲ. ಫೆಸಿಫಿಕ್ ಕರಾವಳಿ ಪ್ರದೇಶದಲ್ಲಿರುವ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳ ಸರ್ಕಾರ ತಮ್ಮ-ತಮ್ಮ ದೇಶದಲ್ಲಿ ಸುನಾಮಿ ಎಚ್ಚರಿಕೆ ನೀಡಿವೆ. ಕರಾವಳಿ ತೀರ ಪ್ರದೇಶದಲ್ಲಿರುವ ಜನರು ನೀರಿಗೆ ಇಳಿಯದೇ, ಆದಷ್ಟು ಎತ್ತರ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಫೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ, ಆಸ್ಟ್ರೇಲಿಯಾದಲ್ಲಿ ಸುನಾಮಿ ಸಂಭವ ಕಡಿಮೆ ಇದೆ ಎಂದು ಹೇಳಿದೆ.

ಅಮೆರಿಕದ ಜಿಯಾಲಕಲ್ ಸರ್ವೇ ಸಂಸ್ಥೆಯ ಪ್ರಕಾರ ಸೊಲೊಮನ್ ದ್ವೀಪಗಳಲ್ಲಿರುವ ಸಂತಾ ಕ್ರೂಜ್ ದ್ವೀಪವೇ ಭೂಕಂಪನದ ಕೇಂದ್ರ ಬಿಂದು ಎಂದು ಗುರುತಿಸಲಾಗಿದೆ. ಅಲ್ಲದೆ ಸಮುದ್ರದ ಅಲೆಗಳ ಏರಿಳಿತದಲ್ಲಿ ಏರುಪೇರು ಕಂಡುಬರುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಒಟ್ಟಾರೆ ಇತ್ತೀಚೆಗಷ್ಟೇ ಜಪಾನ್‌ನಲ್ಲಿ ತನ್ನ ರೌದ್ರ ನರ್ತನ ಪ್ರದರ್ಶಿಸಿದ್ದ ಸುನಾಮಿ ಇದೀಗ ಫೆಸಿಫಿಕ್ ಕರಾವಳಿ ತೀರಗಳಲ್ಲಿ ಭೀತಿ ಸೃಷ್ಟಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.