ಈಗಿನ ಸುದ್ದಿ

ಮಂಗಳನ ಆಂತರ್ಯ ಬಗೆದ ಕ್ಯೂರಿಯಾಸಿಟಿ

ಮಂಗಳನ ಆಂತರ್ಯ ಬಗೆದ ಕ್ಯೂರಿಯಾಸಿಟಿ
Published On :

ನವದೆಹಲಿ: ಮಂಗಳಗ್ರಹಕ್ಕೆ ನಾಸಾ ಕಳುಹಿಸಿರುವ ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹದ ನೆಲವನ್ನು ಕೊರೆದು ಮಣ್ಣಿನ ಮಾದರಿಯನ್ನು ಭೂಮಿಗೆ ರವಾನಿಸಿದೆ.

ಇದೇ ಮೊದಲ ಬಾರಿಗೆ ಕ್ಯೂರಿಯಾಸಿಟಿ ತನ್ನ ಆನ್‌ಬೋರ್ಡ್ ಡ್ರಿಲ್ಲಿಂಗ್ ಅನ್ನು ಬಳಸಿ ಮಂಗಳ ಗ್ರಹದ ನೆಲವನ್ನು ಕೊರೆದಿದೆ. ನಾಸಾ ಮೂಲಗಳ ಪ್ರಕಾರ ಇದೇ ಮೊದಲ ಬಾರಿಗೆ ಮಾನವ ನಿರ್ಮಿತ ರೊಬೋಟ್‌ವೊಂದು ಅನ್ಯಗ್ರಹದ ಕಲ್ಲನ್ನು ಕೊರೆದು ಮಾದರಿಯನ್ನು ಸಂಗ್ರಹಿಸಿರುವುದು ನೂತನ ದಾಖಲೆಯಾಗಿದೆ.

ಮಂಗಳನ ನೆಲದ ಒಟ್ಟು 0.63 ಇಂಚು ಅಗಲ ಮತ್ತು 2.5 ಇಂಚು ಆಳ ಕೊರೆದಿರುವ ಕ್ಯೂರಿಯಾಸಿಟಿ, ಆರ್ದ್ರ ವಾತಾವರಣದಲ್ಲಿ ಡ್ರಿಲ್ಲಿಂಗ್ ನಡೆಸಿ ಕಲ್ಲಿನ ಪುಡಿಯನ್ನು ತನ್ನಲ್ಲಿ ಅಳವಡಿಸಲಾಗಿರುವ ಮಿನಿ ಲ್ಯಾಬೊರೇಟರಿಯಲ್ಲಿ ಪರೀಕ್ಷೆ ನಡೆಸಿದೆ.  ಬಾಹ್ಯಾಕಾಶ ಕ್ಷೇತ್ರದಲ್ಲಿ ಇದು ಕೂಡ ನೂತನ ದಾಖಲೆಯಾಗಿದೆ. ಕ್ಯೂರಿಸಿಟಿ ರೋವರ್‌ನ ಈ ಸಾಧನೆ ನಾಸಾ ಹೆಮ್ಮೆ ಪಡುವಂತೆ ಮಾಡಿದೆ.

ಭೂಮಿಯಿಂದ ಉಡಾವಣೆಯಾದ ಕ್ಯೂರಿಯಾಸಿಟಿ ರೋವರ್ ಕಳೆದ ವರ್ಷದ ಆಗಸ್ಟ್‌ನಲ್ಲಿ ಮಂಗಳ ಅಂಗಳ ತಲುಪಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.