ಮಹಾ ಕುಂಭ: ಮೌನಿ ಅಮವಾಸ್ಯೆಯ ಶಾಹಿಸ್ನಾನಕ್ಕೆ ಕ್ಷಣಗಣನೆ

ಅಲಹಾಬಾದ್: ಅಲಹಾಬಾದಿನಲ್ಲಿ ನಡೆಯುತ್ತಿರುವ ಕುಂಭ ಮೇಳದ ಪ್ರಮುಖ ಆಕರ್ಷಣೆ ಮೌನಿ ಅಮವಾಸ್ಯೆಯ ಶಾಹಿಸ್ನಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಗಾಲೇ ಕೋಟ್ಯಂತರ ಭಕ್ತಾದಿಗಳು ಭಾಗವಹಿಸಿದ್ದಾರೆ.
12 ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳ ಇದೀಗ ಅಂತಿಮ ಘಟ್ಟ ತಲುಪಿದೆ. ಇದೇ ಭಾನುವಾರ ಅಂದರೆ ಇಂದು ಮೌನಿ ಅಮವಾಸ್ಯೆ ಇದ್ದು ಅಂದು ಕುಂಭಮೇಳ ನಡೆಯುವ ಗಂಗಾನದಿಯ ತಟದಲಿ ಕೋಟ್ಯಂತರ ಭಕ್ತಾದಿಗಳು ಸೇರುವ ನಿರೀಕ್ಷೆ ಇದೆ. ಈಗಾಗಲೇ ಸ್ಥಳದಲ್ಲಿ ಸುಮಾರು 5 ಕೋಟಿಗೂ ಅಧಿಕ ಮಂದಿ ಸೇರಿದ್ದು, ಪವಿತ್ರ ಸ್ನಾನದಲ್ಲಿ ತೋಡಗಿದ್ದಾರೆ. ಕುಂಭ ಮೇಳದ ಪ್ರಮುಖ ಆಕರ್ಷಣೆ ಸಂಜೆ ನಡೆಯುವ ಶಾಹಿಸ್ನಾನದ ವೇಳೆಗೆ ಈ ಸಂಖ್ಯೆ ಸುಮಾರು 10 ಕೋಟಿ ದಾಟುವ ನಿರೀಕ್ಷೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.
ಇದಕ್ಕಾಗಿ ಕಾರ್ಯಕ್ರಮದ ಆಯೋಜಕರು ಮತ್ತು ನಿರ್ವಾಹಕರು ಈಗಾಗಲೇ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ಜರುಗದಂತೆ ತಡೆಯಲು ಕುಂಭಮೇಳ ನಡೆಯುವ ಅಲಹಾಬಾದಿನ ಹರಿದ್ವಾರದ ಸಂಗಮಕ್ಕೆ 15.000 ಕ್ಕೂ ಅಧಿಕ ಪೊಲೀಸರನ್ನು, ಸಿಆರ್‌ಪಿಎಫ್, ಐಟಿಬಿಪಿ, ಬಿಎಸ್‌ಎಫ್ ಮತ್ತು ಆರ್‌ಎಎಫ್ ನಂತಹ ಕೇಂದ್ರ ಪ್ಯಾರಾ ಮಿಲಿಟರಿ ಪಡೆಗಳನ್ನು ಕರೆಸಿಕೊಳ್ಳಲಾಗಿದೆ.
ಜನವರಿ 14 ಸಂಕ್ರಾಂತಿ ಹಬ್ಬದಂದು ಆರಂಭಗೊಂಡಿದ್ದ ಮಹಾಕುಂಭ ಮೇಳ ಇದೇ ಫೆಬ್ರವರಿ 15ರಂದು ನಡೆಯುವ ಬಸಂತಿಪಂಚಮಿ ಕಾರ್ಯಕ್ರಮದೊಂದಿಗೆ ಅಂತ್ಯಗೊಳ್ಳುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


