ಗೆದ್ದರೆ ಹೊಗಳಿಕೆ, ಸೋತರೆ ತೆಗಳಿಕೆ ಸರಿಯಲ್ಲ: ಶೆಟ್ಟರ್

ಬೆಂಗಳೂರು: ನ್ಯಾಯಾಲಯದಲ್ಲಿ ಪ್ರಕರಣವನ್ನು ಗೆದ್ದರೆ ಹೊಗಳುವುದು, ಸೋತರೆ ವಕೀಲರನ್ನು ತೆಗಳುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕರ್ನಾಟಕ ಪರ ವಕೀಲ ನಾರಿಮನ್ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಕಾವೇರಿ ವಿಚಾರವಾಗಿ ಇಂದು ವಿಧಾನಸಭೆಯ ಚರ್ಚೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಷಯ ಪ್ರಸ್ತಾಪಿಸಿದರು. ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿ ರಾಜ್ಯದ ಪರ ವಕಾಲತ್ತು ವಹಿಸಿರುವ ವಕೀಲ ನಾರಿಮನ್ ಅವರ ವಾದ ಸರಿಯಿಲ್ಲ. ಹೀಗಾಗಿ ಅವರನ್ನು ಬದಲಿಸುವಂತೆ ನಾನು ಸಾಕಷ್ಟು ಬಾರಿ ಸರ್ಕಾರಕ್ಕೆ ಸಲಹೆ ನೀಡಿದ್ದೆ. ಆದರೆ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದರು.
ಸಿದ್ದರಾಮಯ್ಯ ಅವರಿಗೆ ಉತ್ತರಿಸಿದ ಮುಖ್ಯಮಂತ್ರಿ ಶೆಟ್ಟರ್, ರಾಜ್ಯದ ಪರವಾಗಿ ವಕೀಲ ನಾರಿಮನ್ ಅವರು ಪ್ರಾಮಾಣಿಕವಾಗಿ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ವತಃ ವಕೀಲನಾಗಿ ಸೇವೆಸಲ್ಲಿಸಿರುವ ನನಗೆ ಈ ವಿಷಯ ಅರ್ಥವಾಗುತ್ತದೆ. ಪ್ರಕರಣವನ್ನು ಗೆದ್ದಾಗ ಅವರನ್ನು ಹೊಗಳುವುದು, ಪ್ರಕರಣವನ್ನು ಸೋತಾಗ ತೆಗಳುವುದು ಸರಿಯಲ್ಲ ಎಂದು ಶೆಟ್ಟರ್ ಅಭಿಪ್ರಾಯಪಟ್ಟರು.
ಅಲ್ಲದೆ ರಾಜಿನಾಮೆ ನೀಡಿದರೆ ಅಥವಾ ಸರ್ಕಾರವನ್ನು ವಿಸರ್ಜಿಸಿದ ಮಾತ್ರಕ್ಕೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಬದಲಿಸುವುದಿಲ್ಲ. ಶೀಘ್ರದಲ್ಲಿಯೇ ಸುಪ್ರೀಂನಲ್ಲಿ ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸುವುದಾಗಿ ಶೆಟ್ಟರ್ ತಿಳಿಸಿದರು.
ಒಟ್ಟಾರೆ ಇಡೀ ಕಲಾಪವನ್ನು ಕಾವೇರಿ ವಿವಾದ ಆವರಿಸಿಕೊಂಡಿದ್ದು, ರಾಜ್ಯ ರೈತರ ಪಾಲಿಗೆ ಸುಪ್ರೀಂ ತೀರ್ಪು ಕರಾಳ ಶಾಸನವಾಗಿ ಮಾರ್ಪಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


