ವಿಧಾನಸಭೆಯಲ್ಲಿ ಗದ್ದಲ: ಆರ್ಟಿಐ ಕಾರ್ಯಕರ್ತರು ಹೊರಕ್ಕೆ
ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಗದ್ದಲವೆಬ್ಬಿಸಿದ ಆರ್ಟಿಐ ಕಾರ್ಯಕರ್ತರನ್ನು ಕಲಾಪದಿಂದ ಹೊರಹಾಕಿದ ಘಟನೆ ಗುರುವಾರ ವಿಧಾನಸೌಧದಲ್ಲಿ ನಡೆದಿದೆ.
ವಿಧಾನಸಭೆ ಕಲಾಪದ ಸಂದರ್ಭದಲ್ಲಿ ಲೋಕಾಯುಕ್ತ ಸಂಸ್ಥೆಗೆ ಪರಮಾಧಿಕಾರ ನೀಡುವಂತೆ ಆಗ್ರಹಿಸಿ ಆರ್ಟಿಐ ಕಾರ್ಯಕರ್ತರು ಪ್ರತಿಭಟನಾ ಘೋಷಣೆಗಳನ್ನು ಕೂಗಿದರು. ಸ್ಪೀಕರ್ ಕೆ.ಜೆ.ಬೋಪಯ್ಯ ಅವರ ಆದೇಶಕ್ಕೂ ಬೆಲೆಕೊಡದ ಕಾರ್ಯಕರ್ತರು, ಘೋಷಣೆಗಳನ್ನು ಕೂಗುತ್ತಲಿದ್ದರು.
ಇದರಿಂದ ಬೇಸತ್ತ ಸ್ಪೀಕರ್ ಬೋಪಯ್ಯ ಅವರು ಆರ್ಟಿಐ ಕಾರ್ಯಕರ್ತರನ್ನು ಹೊರಹಾಕುವಂತೆ ಮಾರ್ಷಲ್ಗಳಿಗೆ ಆದೇಶ ನೀಡಿದರು. ಸ್ಪೀಕರ್ ಆದೇಶದಂತೆ ಮಾರ್ಷಲ್ಗಳು ಆರ್ಟಿಐ ಕಾರ್ಯಕರ್ತರನ್ನು ಹೊರಹಾಕಿದರು.
ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರು ಪ್ರಮಾಣವಚನ ಸ್ವೀಕರಿಸಿದ ಇಂದೇ ವಿಧಾನಸಭೆ ಕಲಾಪದಲ್ಲಿ "ಲೋಕಾ'ಗೆ ಪರಮಾಧಿಕಾರ ನೀಡುವಂತೆ ಆರ್ಟಿಐ ಕಾರ್ಯಕರ್ತರು ಘೋಷಣೆ ಕೂಗಿದ್ದು ವಿಶೇಷವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

