ಈಗಿನ ಸುದ್ದಿ

ಸಿಎಂ ಶೆಟ್ಟರ್‌ರಿಂದ ಬಜೆಟ್ ಅನುದಾನ ಹಂಚಿಕೆ

Published On :

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಾವು ಮಂಡಿಸಿದ್ದ ಬಜೆಟ್ ಅನುದಾನವನ್ನು ಮತ್ತೆ ಹಂಚಿಕೆ ಮಾಡಿದ್ದಾರೆ.

ನಿನ್ನೆ ಸುಮಾರು 23 ಮಠಗಳಿಗೆ ಬಜೆಟ್‌ನಲ್ಲಿ ಅನುದಾನ ಘೋಷಿಸಿದ್ದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು, ಇಂದು ಮತ್ತೆ ತಮ್ಮ ಅನುದಾನ ಹಂಚಿಕೆ ಕಾರ್ಯವನ್ನು ಮುಂದುವರೆಸಿದ್ದಾರೆ. ಇಂದಿನ ಹಂಚಿಕೆ ಕಾರ್ಯದಲ್ಲಿಯೂ ಶೆಟ್ಟರ್ ಅವರು ಮಠಗಳಿಗೆ ಸಿಂಹಪಾಲನ್ನು ಮೀಸಲಿಟ್ಟಿದ್ದಾರೆ. ಶೆಟ್ಟರ್ ಅವರು ಇಂದು ಮಂಡಿಸಿದ ಅನುದಾನ ಹಂಚಿಕೆ ವಿವರ ಈ ಕೆಳಗಿನಂತಿದೆ.

ಬೆಂಗಳೂರಿನ ಬೇಲಿ ಮಠಕ್ಕೆ 2 ಕೋಟಿ, ಶಿವಮೊಗ್ಗದ ರಾಮಕೃಷ್ಣ ಮಠಕ್ಕೆ 2 ಕೋಟಿ, ಅಂಬಿಗರ ಚೌಡಯ್ಯ ಮಠಕ್ಕೆ 2 ಕೋಟಿ, ಕೊಳ್ಳೆಗಾಲದ ಮಂಠೇಸ್ವಾಮಿ ಭಕ್ತ ಭವನಕ್ಕೆ 2 ಕೋಟಿ, ಔರಾದ್‌ನ ಶರಣ ಭವನಕ್ಕೆ 2 ಕೋಟಿ, ಗದಗ ತೋಂಟದಾರ್ಯ ಮಠಕ್ಕೆ 2 ಕೋಟಿ, ಗುಂಡ್ಲುಪೇಟೆಯ ಕನಕ ಭವನಕ್ಕೆ 2 ಕೋಟಿ, ಹಾವೇರಿಯ ಶಿವಲಿಂಗೇಶ್ವರ ದೇವಾಲಯಕ್ಕೆ 2 ಕೋಟಿ, ಹುಲವಿ ಚೆನ್ನಬಸವೇಶ್ವರ ಮಠಕ್ಕೆ 2 ಕೋಟಿ ರುಪಾಯಿಗಳ ಅನುದಾನ ನೀಡಿದ್ದಾರೆ.

ಅಂತೆಯೇ ರಾಜ್ಯದ ಹಲವು ಅಧ್ಯಯನ ಕೇಂದ್ರಗಳಿಗೂ ಶೆಟ್ಟರ್ ಅವರು ಅನುದಾನ ನೀಡಿದ್ದು, ವಿ.ಎಸ್ ಆಚಾರ್ಯ ಅಧ್ಯಯನ ಕೇಂದ್ರಕ್ಕೆ 2 ಕೋಟಿ, ಸಾಮಾಜಿಕ ಸಂಘಟನೆ ಹಳ್ಳಿಕಾರ್ ಸಂಘಕ್ಕೆ 1 ಕೋಟಿ ಅನುದಾನ ನೀಡಲಾಗಿದೆ. ಅಂತೆಯೇ ಜಗಜೀವನ್ ರಾಂ ಟ್ರಸ್ಟ್‌ಗೆ 2 ಕೋಟಿ, ದಾವಣಗೆರೆ ವಿಶ್ವವಿದ್ಯಾಲಯಕ್ಕೆ 10 ಕೋಟಿ ಅನುದಾನ, ಡಾ. ಗಂಗಲ್ ಸಂಶೋಧನಾ ಕೇಂದ್ರಕ್ಕೆ 5 ಕೋಟಿ ಅನುದಾನವನ್ನು ಶೆಟ್ಟರ್ ಘೋಷಿಸಿದ್ದಾರೆ.

ಈ ನಡುವೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇತ್ತ ತಮ್ಮ ಬಜೆಟ್‌ನಲ್ಲಿನ ಅನುದಾನವನ್ನು ಹಂಚಿಕೆ ಮಾಡುತ್ತಿದ್ದರೆ ಅವರ ಬಳಿ ಬಂದ ಕೆಲ ಬಿಜೆಪಿ ಶಾಸಕರು, ತಮಗೆ ಬೇಕಾದ ಮತ್ತು ತಮ್ಮ ಕ್ಷೇತ್ರಗಳ ಮಠ ಮತ್ತು ದೇವಾಲಯಗಳಿಗೆ ಅನುದಾನ ನೀಡುವಂತೆ ಮನವಿ ಮಾಡುತ್ತಿದ್ದರು. ಇದನ್ನು ಕಂಡ ವಿರೋಧ ಪಕ್ಷಗಳು ಸಭಾಪತಿಗಳ ಬಳಿ ಆಕ್ಷೇಪ ವ್ಯಕ್ತಪಡಿಸಿದವು. ಹೀಗಾಗಿ ಸಭಾಪತಿ ಡಿ.ಎಚ್ ಶಂಕರಮೂರ್ತಿ ಅವರು ಸದಸ್ಯರನ್ನು ತಮ್ಮ ಆಸನಗಳಿಗೆ ಹೋಗಿ ಕುಳಿತುಕೊಳ್ಳುವಂತೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.