ಕರ್ಫ್ಯೂ ಹಿಂದಕ್ಕೆ: ಸಹಜ ಸ್ಥಿತಿಯತ್ತ ಕಾಶ್ಮೀರ

ಶ್ರೀನಗರ: ಉಗ್ರ ಅಫ್ಜಲ್ ಗುರುವನ್ನು ನೇಣಿಗೇರಿಸಿದ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಇಂದು ಸಡಿಲಗೊಳಿಸಲಾಗಿದೆ.
ಸಂಸತ್ತಿನ ಮೇಲಿನ ಉಗ್ರರ ದಾಳಿ ಪ್ರಕರಣದ ಪ್ರಮುಖ ರೂವಾರಿ ಉಗ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ಹಿನ್ನಲೆಯಲ್ಲಿ ಹೇರಲಾಗಿದ್ದ ಕರ್ಫ್ಯೂವನ್ನು ಶನಿವಾರ ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಹಿಂಪಡೆದಿದ್ದಾರೆ. ಕಾಶ್ಮೀರ ರಾಜ್ಯ ಸಹಜ ಸ್ಥಿತಿಯತ್ತ ಮರಳುತ್ತಿರುವುದರಿಂದ ಒಮರ್ ಈ ನಿರ್ಧಾರ ಕೈಗೊಂಡಿದ್ದಾರೆ.
ಮುಖ್ಯಮಂತ್ರಿಗಳ ಆದೇಶದಂತೆ ಸತತ ಒಂದು ವಾರದಿಂದ ಹೇರಲಾಗಿದ್ದ, ಕರ್ಫ್ಯೂವನ್ನು ಇಂದು ಹಿಂತೆಗೆಯಲಾಗಿದೆ. ಅಲ್ಲದೆ ಕರ್ಫ್ಯೂ ಹಿನ್ನಲೆಯಲ್ಲಿ ಇಂಟರ್ನೆಟ್, ದೂರವಾಣಿ ಮತ್ತು ಕೇಬಲ್ ನೆಟವರ್ಕ್ ಪ್ರಸಾರದ ಮೇಲೆ ಹೇರಲಾಗಿದ್ದ ನಿಷೇಧವನ್ನು ಕೂಡ ಹಿಂಪಡೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಈ ನಡುವೆ ಅಫ್ಜಲ್ ಗುರು ಗಲ್ಲಿಗೇರಿಸಿದನ್ನು ಖಂಡಿಸಿ ಶೋಕಾಚರಣೆ ನಡೆಸುತ್ತಿರುವ ಹುರಿಯತ್ ಕಾನ್ಫರೆನ್ಸ್, ಶೋಕಾಚರಣೆಯನ್ನು ಮುಂದುವರೆಸುವಂತೆ ಕರೆನೀಡಿದೆ. ಅಲ್ಲದೆ ಅಫ್ಜಲ್ ಮೃತ ದೇಹವನ್ನು ಆತನ ಕುಟುಂಬ ಸದಸ್ಯರಿಗೆ ವಾಪಸ್ ಮಾಡುವವರೆಗೂ ತನ್ನ ಹೋರಾಟ ನಿಲ್ಲುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದೆ.
ಸರ್ಕಾರ ಕರ್ಫ್ಯೂವನ್ನು ಹಿಂಪಡೆಯುತ್ತಿದ್ದಂತೆಯೇ ಶ್ರೀನಗರದ ಪ್ರತಿಷ್ಟಿತ ಪ್ರದೇಶಗಳು ತಮ್ಮ ಎಂದಿನ ಚಟುವಟಿಕೆಯಲ್ಲಿ ತೊಡಗಿಕೊಂಡಿವೆ. ರಸ್ತೆ, ರೈಲು ಸಂಚಾರಗಳು ಸಹಜವಾಗಿವೆ. ಅಲ್ಲದೆ ಅಂಗಡಿಮುಂಗಟ್ಟು ತೆರೆದು ತಮ್ಮ ಎಂದಿನ ವ್ಯಾಪಾರದಲ್ಲಿ ತೊಡಗಿಕೊಂಡಿವೆ. ಅದರೆ ಇನ್ನೂ ಹಲವೆಡೆ ಪ್ರತಿಭಟನಾ ಬಿಸಿ ಇರುವುದರಿಂದ ಅಲ್ಲಿ ಅಂಗಡಿ ಮುಂಗಟ್ಟು ಬಾಗಿಲು ಹಾಕಿವೆ.
ಒಟ್ಟಾರೆ ಕಳೆದ ಸತತ ಒಂದು ವಾರದಿಂದ ಕರ್ಫ್ಯೂ ಬಿಸಿಯಲ್ಲಿ ಬೆಂದಿದ್ದ ಕಾಶ್ಮೀರ ನಿಧಾನವಾಗಿ ಚೇತರಿಕೆ ಕಾಣುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


