ಕಾವೇರಿ ಅಧಿಸೂಚನೆ ಪ್ರಕಟ, 90 ದಿನದಲ್ಲಿ ಆದೇಶ ಜಾರಿ

ನವದೆಹಲಿ: ರಾಜ್ಯ ಸರ್ಕಾರದ ತೀವ್ರ ವಿರೋಧದ ನಡುವೆಯೂ ಕಾವೇರಿ ನ್ಯಾಯಾಧೀಕರಣದ ಅಂತಿಮ ಐತೀರ್ಪಿನ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಬುಧವಾರ ಗೆಜೆಟ್‌ನಲ್ಲಿ ಪ್ರಕಟಿಸಿದೆ. ಮುಂದಿನ 90 ದಿನಗಳಲ್ಲಿ ಐ ತೀರ್ಪಿನ ಆದೇಶ ಜಾರಿಗೆ ಬರಲಿದೆ.
ಐತೀರ್ಪಿನ ವಿರುದ್ಧ ಕಾವೇರಿ ನದಿ ಪಾತ್ರದ ನಾಲ್ಕು ರಾಜ್ಯಗಳು ಸಲ್ಲಿಸಿರುವ ತಕರಾರು ಮತ್ತು ಸ್ಪಷ್ಟನೆ ಕೋರಿರುವ ಅರ್ಜಿಗಳು ಇತ್ಯರ್ಥವಾಗದೇ ಇದ್ದರೂ, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಿದ್ಧಪಡಿಸಿರುವ ಅಧಿಸೂಚನೆ ಭಾರತ ಸರ್ಕಾರದ ಮುದ್ರಣಾಲಯಕ್ಕೆ ನಿನ್ನೆ ರವಾನೆಯಾಗಿತ್ತು. ಇಂದು ಮುದ್ರಿತ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ನೀಡಿದೆ.
2007ರಲ್ಲಿ ಕಾವೇರಿ ನ್ಯಾಯಾಧೀಕರಣ ಅಂತಿಮ ತೀರ್ಪು ನೀಡಿತ್ತು.
ಐತೀರ್ಪಿನಲ್ಲಿರುವ ಪ್ರಮುಖ ಅಂಶಗಳು:
- ಈವರೆಗೂ ಇದ್ದ ಕಾವೇರಿ ಮೇಲ್ವಿಚಾರಣಾ ಮಂಡಳಿ ಹಾಗೂ ಕಾವೇರಿ ನದಿ ಪ್ರಾಧಿಕಾರ ರದ್ದಾಗಲಿದೆ.
- ಕಾವೇರಿ ಜಲಾನಯನ ಅನುಷ್ಠಾನ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ಇದರಲ್ಲಿ ಕೇಂದ್ರ ಸರ್ಕಾರ ನೇಮಿಸಿದ್ದ ತಜ್ಞರು ಇರುತ್ತಾರೆ.
- ಮಂಡ್ಯ, ಚಾಮರಾಜನಗರ ಜಿಲ್ಲಾ ಕೇಂದ್ರ ಸೇರಿದಂತೆ ಕಾವೇರಿ ಕೊಳ್ಳದ ಗ್ರಾಮಾಂತರ ಪ್ರದೇಶಗಳಿಗೆ 8.5 ಟಿಎಂಸಿ ನೀರು ಹಂಚಿಕೆಯಾಗಲಿದೆ.
- ಬೆಂಗಳೂರು ಹಾಗೂ ಇತರೆ ಜಿಲ್ಲಾ ಕೇಂದ್ರಗಳಿಗೆ ನೀರು ಹಂಚಿಕೆ
- ತಮಿಳುನಾಡಿಗೆ 419 ಟಿಎಂಸಿ ಹಂಚಿಕೆ
- ಕರ್ನಾಟಕಕ್ಕೆ ಕೇವಲ 270 ಟಿಎಂಸಿ ನೀರು ಹಂಚಿಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


