ಗಾಂಧಿ ಕುರಿತು ವಿವಾದಾತ್ಮಕ ಹೇಳಿಕೆ: ಎಂಐಎಂ ಶಾಸಕನ ವಿರುದ್ಧ ದೂರು

ಹೈದರಾಬಾದ್: ರಾಷ್ಟ್ರಪಿತ ಮಹಾತ್ಮ ಗಾಂಧಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ, ಎಂಐಎಂ ಶಾಸಕನ ವಿರುದ್ಧ ಬಿಜೆಪಿ ನಾಯಕರೊಬ್ಬರು ದೂರು ದಾಖಲಿಸಿದ್ದಾರೆ.
ಪ್ರಚೋದನಾತ್ಮಕ ಭಾಷಣ ಮಾಡಿ ಪೊಲೀಸ್ ಬಂಧನದಲ್ಲಿರುವ ಎಂಐಎಂ ಶಾಸಕ ಒವೈಸಿ ವಿರುದ್ಧದ ಪ್ರಕರಣ ಹಸಿರಾಗಿರುವಂತೆಯೇ ಇದೀಗ ಮತ್ತೆ ಆಂಧ್ರಪ್ರದೇಶದಲ್ಲಿ ಎಂಐಎಂ ಸುದ್ದಿ ಮಾಡುತ್ತಿದೆ. ಎಂಐಎಂನ ಚಾರ್ಮೀನಾರ್ ಕ್ಷೇತ್ರದ ಶಾಸಕ ಸೈಯ್ಯದ್ ಅಹ್ಮದ್ ಪಾಷ ಖಾದ್ರಿ, ಆಂಧ್ರಪ್ರದೇಶ ಅಸೆಂಬ್ಲಿ ಮುಂದೆ ಪ್ರತಿಷ್ಠಾಪಿಸಿರುವ ಗಾಂಧಿ ಪ್ರತಿಮೆ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.
ಕರೀಂ ನಗರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, "ಆಂಧ್ರಪ್ರದೇಶಕ್ಕೆ ನಾವು (ನಿಜಾಮರು) ಭವ್ಯವಾದ ಶಾಸನ ಸಭೆಯನ್ನು ನಿರ್ಮಿಸಿಕೊಟ್ಟಿದ್ದೇವೆ. ಆದರೆ ಇವರು ಸಭೆಯ ಹೊರಗಡೆ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಈ ಭವ್ಯವಾದ ಮಹಲನ್ನು ಕಟ್ಟಿದ್ದು ನಾವು, ಆದರೆ ಇವರು ಹೊರಗಡೆ ಬೇರೆಯವರ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದಾರೆ.
ಇವಿಷ್ಟೇ ಅಲ್ಲ ಹಿಂದೂಸ್ತಾನದಲ್ಲಿ ಇರುವ ತಾಜ್ಮಹಲ್, ಚಾರ್ಮಿನಾರ್, ದೆಹಲಿಯ ಕೆಂಪುಕೋಟೆ ಮತ್ತು ಕುತುಬ್ ಮಿನಾರ್ ನಂತಹ ಎಲ್ಲಾ ಪ್ರಮುಖ ಕಟ್ಟಡಗಳನ್ನು ನಿರ್ಮಿಸಿದ್ದು ನಮ್ಮವರೇ ಹೊರತು, ಇವರು (ಹಿಂದೂಗಳು) ಏನು ಮಾಡಿದ್ದಾರೆ. ಇವರಿಗೆ ಸ್ವಲ್ಪವೂ ಕೃತಜ್ಞತೆ ಇಲ್ಲ ಎಂದು ಖಾದಿರ್ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದೀಗ ಇವರ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು, ಬಿಜೆಪಿಯ ನಾಯಕರೊಬ್ಬರು ರಾಷ್ಟ್ರಪಿತನಿಗೆ ಅಗೌರವ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಖಾದಿರ್ ವಿರುದ್ಧ ದೂರು ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


