ಈಗಿನ ಸುದ್ದಿ

ಶಿವಸೇನಾ ಅಧ್ಯಕ್ಷರಾಗಿ ಉದ್ಧವ್ ಠಾಕ್ರೆ ನೇಮಕ

Published On :

ಮುಂಬೈ: ಇತ್ತೀಚೆಗೆ ನಿಧನರಾದ ಶಿವ ಸೇನೆಯ ಸಂಸ್ಥಾಪಕ ಭಾಳಾ ಠಾಕ್ರೆ ಅವರ ಜನ್ಮದಿನಾಚರಣೆಯನ್ನು ಬುಧವಾರ ಆಚರಿಸಿದ ಶಿವಸೇನೆ, ಶಿವಸೇನೆಯ ಕಾರ್ಯಕಾರೀ ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ಮುಂಬೈಯ ಶಿವಸೇನಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಧವ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ಠಾಕ್ರೆ  ಜನ್ಮದಿನಾಚರಣೆಯ ಸಂದರ್ಭದಲ್ಲಿ ಶಿವಸೈನಿಕರು ತಮ್ಮ ಮಹಿಳಾ ಅನುಯಾಯಿಗಳಿಗೆ ಚೈನೀಸ್ ಕತ್ತಿಗಳನ್ನು ವಿತರಣೆ ಮಾಡಿದ್ದು ವಿಶೇಷವಾಗಿತ್ತು.

ಮಹಿಳೆಯರು ತಮ್ಮ ಪರ್ಸ್‌ಗಳಲ್ಲಿ ಲಿಪ್‌ಸ್ಟಿಕ್ ಇರಿಸಿಕೊಳ್ಳುವ ಬದಲು ಸ್ವಯಂ ರಕ್ಷಣೆಗಾಗಿ 'ಕತ್ತಿ' ಇಟ್ಟುಕೊಳ್ಳಬೇಕು ಎಂದು ಭಾಳಾ ಠಾಕ್ರೆ ಹೇಳುತ್ತಿದ್ದರು. ಆದ್ದರಿಂದ ಮಹಿಳಾ ಸಬಲೀಕರಣಕ್ಕಾಗಿ ನಾವು ಮಹಿಳೆಯರಿಗೆ ಕತ್ತಿ ವಿತರಣೆ ಮಾಡುತ್ತಿದ್ದೇವೆ ಎಂದು ಶಿವ ಸೇನೆಯ ದಕ್ಷಿಣ ಪ್ರದೇಶದ ಮುಖ್ಯಸ್ಥ ಅಜಯ್ ಚೌಧರಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ನಟ ಅಮಿತಾಬ್ ಬಚ್ಚನ್‌ರ ಜತೆ ಸೇರಿ ಮುಂಬೈ ಸ್ಲಂಗಳನ್ನು ಶುಚೀರಿಸುವ ಯೋಜನೆಯಾದ 'ಸ್ವಚ್ ಮುಂಬೈ ಪ್ರಬೋಧನ್ ಅಭಿಯಾನ್‌'ನ್ನು ಬುಧವಾರ ಸಂಜೆ 3 ಗಂಟೆ ಉದ್ಘಾಟಿಸುವ ನಿರೀಕ್ಷೆಯಿದೆ.

ಮಾತ್ರವಲ್ಲದೆ ಉದ್ಧವ್ ಬ್ರಿಹನ್‌ಮುಂಬೈ ಮುನ್ಸಿಪಲ್ ಕಾರ್ಪರೇಷನ್ (ಬಿಎಂಸಿ)ಯಲ್ಲಿ ವಿರ್ಚ್ಯುವಲ್ ಕ್ಲಾಸ್‌ರೂಂನ ಉದ್ಘಾಟನೆಯನ್ನೂ ಮಾಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.