ಈಗಿನ ಸುದ್ದಿ

ಆಸ್ಟ್ರೇಲಿಯನ್ ಓಪನ್: ಜಾಕೋವಿಕ್ ಮುಡಿಗೆ ಪ್ರಶಸ್ತಿ

ಆಸ್ಟ್ರೇಲಿಯನ್ ಓಪನ್: ಜಾಕೋವಿಕ್ ಮುಡಿಗೆ ಪ್ರಶಸ್ತಿ
Published On :

ನವದೆಹಲಿ: ಸರ್ಬಿಯಾದ ನುವಾನ್ ಜಾಕೋವಿಕ್ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಬ್ರಿಟನ್ ನ ಆಂಡಿ ಮರ್ರೆ ವಿರುದ್ಧ ಇಂದು ನಡೆದ ಅಂತಿಮ ಪಂದ್ಯದಲ್ಲಿ ಜಾಕೊವಿಕ್ 6-7, 7-6, 6-3,6-2 ಅಂಕಗಳಿಂದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯದ ಆರಂಭದ ಎರಡು ಸುತ್ತುಗಳು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಒಟ್ಟು 40 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಮೊದಲ ಸೆಟ್ ಅನ್ನು ಮರ್ರೆ ಪ್ರಯಾಸದಿಂದಲೇ 6-7 ಅಂಕದಿಂದ ತಮ್ಮತ್ತ ವಾಲಿಸಿಕೊಂಡರು. ನಂತರ ಅದೇ ಅಂತರವನ್ನು ಕಾಯ್ದುಕೊಳ್ಳುವಲ್ಲಿ ಅವರು ವಿಫಲರಾದರು.

ಮೊದಲ ಸೆಟ್ ಅನ್ನು ಕೈಚೆಲ್ಲಿದರೂ ದೃತಿಗೆಡದ ಜಾಕೋವಿಕ್ ನಂತರದ ಸೆಟ್ ಗಳಲ್ಲಿ ಆಕರ್ಷವಾಗಿ ಆಡಿ ಪ್ರಶಸ್ತಿ ಪಡೆದುಕೊಂಡರು. ಅಲ್ಲದೆ ಸತತ ಮೂರನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುವ ಮೂಲಕ ದಾಖಲೆ ಬರೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.