ಈಗಿನ ಸುದ್ದಿ

ಪೊಲೀಸ್ ಠಾಣೆಯಲ್ಲಿ ಶೂಟೌಟ್: ಪಿಎಸ್‌ಐ ಸಾವು

ಪೊಲೀಸ್ ಠಾಣೆಯಲ್ಲಿ ಶೂಟೌಟ್: ಪಿಎಸ್‌ಐ ಸಾವು
Published On :

ಬೆಂಗಳೂರು: ರಜೆ ವಿಚಾರದಲ್ಲಿ ಪೊಲೀಸ್ ಪೇದೆ ಮತ್ತು ಸಬ್ ಇನ್ಸ್ ಪೆಕ್ಟರ್ ನಡುವೆ ನಡೆದ ಜಗಳ ಸಾವಿನೊಂದಿಗೆ ಅಂತ್ಯಗೊಂಡಿದೆ.

ಬೆಂಗಳೂರು ಗ್ರಾಮಾಂತರವಲಯದ ರಾಜಾನುಕುಂಟೆ ಪೊಲೀಸ್ ಠಾಣೆಯ ಪೇದೆ ಆನಂದ್ ಅದೇ ಠಾಣೆಯ ಪಿಎಸ್‌ಐ ವಿಜಯ್ ಕುಮಾರ್ ಅವರ ಮೇಲೆ ಗುಂಡುಹಾರಿಸಿ ಕೊಂದು ಹಾಕಿದ್ದಾನೆ.

ಪೇದೆ ಆನಂದ್ ಮತ್ತು ಪಿಎಸ್‌ಐ ವಿಜಯ್ ಕುಮಾರ್ ಅವರ ನಡುವೆ ರಜೆ ವಿಚಾರವಾಗಿ ಜಗಳ ಆರಂಭವಾಗಿತ್ತು. ಮಾತಿನ ಚಕಮಕಿ ಅತಿರೇಕಕ್ಕೆ ಹೋಗಿ ಪೇದೆ ಆನಂದ್ ಎಸ್‌ಐ ವಿಜಯ್ ಕುಮಾರ್ ಅವರನ್ನು ಗುಂಡುಹಾರಿಸಿ ಕೊಂದು ಹಾಕಿದ್ದಾನೆ.

ರಾಜಾನುಕುಂಟೆಯ ಪೊಲೀಸ್ ಠಾಣೆಯ ಪೇದೆ ಆನಂದ್, ರಾತ್ರಿ ಪಾಳಿ ಡ್ಯೂಟಿ ಮುಗಿಸಿ ಬೆಳ್ಳಿಗೆ ಮನೆಗೆಹೊರಡಲು ಸಿದ್ದನಾಗಿದ್ದನು. ಬೆಳ್ಳಿಗೆ ಠಾಣೆಗೆ ಬಂದ ಪಿಎಸ್‌ಐ ವಿಜಯ್ ಕುಮಾರ್ ಅವರು, ಸಿಬ್ಬಂದಿಗಳ ಕೊರತೆ ಇದ್ದು, ಬೆಳ್ಳಿಗೆ ಡ್ಯೂಟಿ ಮುಂದುವರೆಸುವಂತೆ ಹೇಳಿದರು. ಆದರೆ ಇದಕ್ಕೆ ಆನಂದ್, ಒಪ್ಪದೇ ಜಗಳಕ್ಕೆ ಇಳಿದಿದ್ದನು. ವಿಜಯ್ ಕುಮಾರ್ ಮತ್ತು ಆನಂದ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಒಂದು ಹಂತದಲ್ಲಿ ಮಾತಿನ ಚಕಮಕಿ ಅತಿರೇಕಕ್ಕೆ ಹೋಗಿ ಪೇದೆ ಆನಂದ್ ಠಾಣೆಯಲ್ಲಿದ್ದ 303 ರೈಫಲ್ ಅನ್ನು ತೋರಿಸಿ ಗುಂಡುಹಾರಿಸುವುದಾಗಿ ಬೆದರಿಕೆ ಹಾಕಿದ.

ಅಲ್ಲದೆ ಠಾಣೆಯ ಇನ್ಸ್ ಪೆಕ್ಟರ್ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದನು. ಇನ್ಸ್ ಪೆಕ್ಟರ್ ಶಿವಾರೆಡ್ಡಿ, ಪೇದೆ ಆನಂದ್ ನನ್ನು ಸಮಾಧಾನ ಪಡಿಸಿ, ತಾವು ಬರುವವರೆಗೂ ಡ್ಯೂಟಿ ಮುಂದುವರೆಸುವಂತೆ ಹೇಳಿದರು. ನಂತರ ತಣ್ಣಗಿದ್ದ ಆನಂದ್ ಮತ್ತೆ ಜಗಳ ತೆಗೆದು 303 ರೈಫಲ್ ನಿಂದ ಎಸ್‌ಐ ವಿಜಯ್ ಕುಮಾರ್ ಅವರ ಮೇಲೆ 3 ಸುತ್ತು ಗುಂಡುಹಾರಿಸಿದ್ದಾನೆ. ತಲೆಗೆ ಮತ್ತು ಎದೆಗೆ ಗುಂಡೇಟು ತಿಂದ ವಿಜಯ್ ಕುಮಾರ್ ಅವರು ರಕ್ತದ ಮಡುವಿನಲ್ಲಿ ಸ್ಥಳದಲ್ಲಿಯೇ ಮೃತಪಟ್ಟರು.

ಮೃತ ವಿಜಯ್ ಕುಮಾರ್ ಅವರನ್ನು ಸಮೀಪದ ಸರ್ಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.