ಈಗಿನ ಸುದ್ದಿ

ಉತ್ತರಾಖಂಡ: ಬದರೀನಾಥದಲ್ಲಿ ಸ್ಥಳಾಂತರ ಕಾರ್ಯ ಪೂರ್ಣ

ಉತ್ತರಾಖಂಡ: ಬದರೀನಾಥದಲ್ಲಿ ಸ್ಥಳಾಂತರ ಕಾರ್ಯ ಪೂರ್ಣ
Published On :

ಡೆಹ್ರಾಡೂನ್: ಪ್ರಳಯ ಪೀಡಿತ ಪ್ರದೇಶವಾದ ಬದರೀನಾಥದಲ್ಲಿ ಸಿಲುಕಿಕೊಂಡಿದ್ದ 150 ಯಾತ್ರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇದೀಗ ಬದರೀನಾಥದಲ್ಲಿ ಸ್ಥಳಾಂತರ ಕಾರ್ಯ ಪೂರ್ಣಗೊಂಡಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಆಹಾರ ಸಾಮಾಗ್ರಿಗಳನ್ನು ಒದಗಿಸಲಾಗುತ್ತಿದೆ.

ಪ್ರವಾಹ ಬಂದು 17 ದಿನಗಳಾಗಿದ್ದು, ಕೇದಾರನಾಥದಲ್ಲಿ ಪ್ರಳಯಕ್ಕೆ ಸಿಕ್ಕಿ ಮೃತಪಟ್ಟವರ ದೇಹಗಳನ್ನು ಸಾಗಿಸಲು ರಾಜ್ಯ ಸರ್ಕಾರ ಹರಸಾಹಸ ಪಡುತ್ತಿದೆ. ಈಗಾಗಲೇ ಅಲ್ಲಿ ಸುಮಾರು 36 ಶವಗಳನ್ನು ಹೂಳಲಾಗಿದೆ.

ಬದರೀನಾಥ ಧಾಮದಲ್ಲಿ ನೆಲೆಸಿದ್ದ ತೀರ್ಥಯಾತ್ರಿಕರನ್ನೆಲ್ಲರನ್ನೂ ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿ ಈಗ ಸ್ಥಳೀಯರು ಮತ್ತು ನೇಪಾಳಿ ಕಾರ್ಮಿಕರು ಇದ್ದಾರೆ. ಅವರನ್ನು ಇಂದು ಸಂಜೆಯೊಳಗೆ ಸ್ಥಳಾಂತರಿಸಲಾಗುವುದು ಎಂದು ಚಮೋಲಿ ಜಿಲ್ಲೆಯ ನ್ಯಾಯಾಧೀಶ ಎಸ್. ಎ ಮುರುಗೇಶನ್ ಹೇಳಿದ್ದಾರೆ.

ಆದಾಗ್ಯೂ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸೇತುವೆ ಮತ್ತು ರಸ್ತೆಗಳು ಹದಗೆಟ್ಟಿರುವುದರಿಂದ ಅಲ್ಲಿನ ಜನರಿಗೆ ಆಹಾರ ಸಾಮಾಗ್ರಿಗಳನ್ನು ಸಾಗಿಸುವುದು ಕೂಡಾ ಕಷ್ಟವಾಗಿದೆ.

ಅಲಕಾನಂದ ನದಿ ಮೇಲಿರುವ ಲಂಬಾಗರ್ ಸೇತುವೆ ಹದಗೆಟ್ಟಿದ್ದು, ಅದನ್ನು ಸರಿಪಡಿಸಲು 2-3 ತಿಂಗಳುಗಳೇ ಬೇಕಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳ ಜತೆ ಸಂಪರ್ಕ ಕಷ್ಟವಾಗಿರುವುದರಿಂದ ಅಲ್ಲಿನ ಜನರಿಗೆ ಆಹಾರ ಪದಾರ್ಥಗಳನ್ನು ಸಾಗಿಸುವುದು ಕೂಡಾ ಕಷ್ಟವಾಗಿದೆ. ಕೆಲವೊಂದು ಪ್ರದೇಶಗಳಿಗೆ ಹೆಲಿಕಾಪ್ಟರ್ ಮೂಲಕ ತೆರಳಿ ಸಹಾಯ ನೀಡಲಾಗುತ್ತಿದೆ ಎಂದು ಬಲ್ಲಮೂಲಗಳು ಹೇಳಿವೆ.

ಗೌರಿಖಂಡ್- ಕೇದಾರ ಹೈವೇ ಬಂದ್ ಮಾಡಿರುವ ಕಾರಣ ಅಲ್ಲಿನ 170 ಗ್ರಾಮಗಳಿಗೆ ಆಹಾರ ಸಾಮಾಗ್ರಿಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ರುದ್ರಪ್ರಯಾಗ ಜಿಲ್ಲೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.