ಸಿಎಂ ಆಗಿ ಸಿದ್ದರಾಮಯ್ಯರಿಂದ ಚೊಚ್ಚಲ ಬಜೆಟ್ ಮಂಡನೆ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಮಧ್ಯಾಹ್ನ 12.30ಕ್ಕೆ ತಮ್ಮ ಚೊಚ್ಚಲ ಹಾಗೂ 2013ನೇ ಸಾಲಿನ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು, ಜನರ ಅವಶ್ಯಕತೆಗಳನ್ನು ಈಡೇರಿಸುವುದು ತಮ್ಮ ಕರ್ತವ್ಯ ಎಂದು ಹೇಳಿದರು.
ರಾಜ್ಯದ ಜನರ ನೀರಿಕ್ಷೆಗಳು ಹೆಚ್ಚು ಇಲ್ಲ. ಆದರೆ ಹಿಂದಿನ ಸರ್ಕಾರ ಜನರ ನಿರೀಕ್ಷೆಯನ್ನು ಹುಸಿ ಮಾಡಿದೆ. ಜನತೆಗೆ ಉತ್ತಮ ನೀರು, ಊಟ, ಮನೆ, ಮಾರುಕಟ್ಟೆ, ವಿದ್ಯುತ್ ಮತ್ತು ಉತ್ತಮ ರಸ್ತೆ ಒದಗಿಸುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರ ಮೇಲೆ ಹೆಚ್ಚು ಹೊರೆ ಹಾಕದೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಯತ್ನ ಮಾಡಿದ್ದಾರೆ.
ಇಂದು 8ನೇ ಬಾರಿ ಬಜೆಟ್ ಮಂಡಿಸಿದ ಸಿದ್ದರಾಮ್ಯ ಅವರು, ಒಟ್ಟು 1 ಲಕ್ಷದ 20 ಸಾವಿರದ 717 ಕೋಟಿ ರುಪಾಯಿ ಗಾತ್ರದ ಬಜೆಟ್‌ನಲ್ಲಿ ಶಿಕ್ಷೆಣಕ್ಕೆ ಅತೀ ಹೆಚ್ಚು ಹಣ ಹಂಚಿಕೆ ಮಾಡಿದ್ದಾರೆ.
ಸಿದ್ದು ಬಜೆಟ್‌ನ ಮುಖ್ಯಾಂಶಗಳು
- ವಾಣಿಜ್ಯ ಮತ್ತು ಕೈಗಾರಿಕೆ-885 ಕೋಟಿ
- ನಗರಾಭಿವೃದ್ಧಿ-9,286 ಕೋಟಿ
- ರೈತರಿಗೆ 2 ಲಕ್ಷ ರುಪಾಯಿವರಗೆ ಬಡ್ಡಿ ರಹಿತ ಸಾಲ ಹಾಗೂ 2ರಿಂದ 3 ಲಕ್ಷದವರೆಗಿನ ಅಲ್ಪಾವಧಿ ಸಾಲಕ್ಕೆ ಶೇ.1 ರ ಬಡ್ಡಿ ಮತ್ತು ಶೇ.3ರ ಬಡ್ಡಿಯಲ್ಲಿ 10 ಲಕ್ಷದ ವರೆಗೆ ದಿಘಾರ್ವಧಿ ಸಾಲ ಪಡೆಯಬಹುದಾಗಿದೆ.
- ಕ್ರೀಡೆ ಮತ್ತು ಯುವಜನ ಕ್ಷೇತ್ರಕ್ಕೆ 138 ಕೋಟಿ
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ 3,466 ಕೋಟಿ
- ಒಳಾಡಳಿತ ಮತ್ತು ಸಾರಿಗೆ -5,315 ಕೋಟಿ
- ಸಮಾಜ ಕಲ್ಯಾಣ ಇಲಾಖೆಗೆ 5046 ಕೋಟಿ
- ಲೋಕೋಪಯೋಗಿ-5862 ಕೋಟಿ
- 15 ಜಿಲ್ಲೆಗಳಲ್ಲಿ ಮಹಿಳಾ ಕಾಲೇಜ್ ಸ್ಥಾಪನೆ
- ಮೀನುಗಾರಿಕೆ- 1,903 ಕೋಟಿ
- ಉನ್ನತ ಶಿಕ್ಷಣಕ್ಕೆ - 3,243 ಕೋಟಿ ಅನುದಾನ
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-5421 ಕೋಟಿ
- ಪಶು ಸಂಗೋಪನೆ - 4,371 ಕೋಟಿ
- ಜಲ ಸಂಪನ್ಮೂಲ- 9363 ಕೋಟಿ
- ಇಂಧನ - 10,312 ಕೋಟಿ
- ವಸತಿ- 1,365 ಕೋಟಿ
- ಕಂದಾಯ - 3,797 ಕೋಟಿ
- ಗ್ರಾಮೀಣಾಭಿವೃದ್ಧಿ ಹಾಗೂ ಪಂಜಾಯತ್ ರಾಜ್- 8218
- ಉತ್ಪಾದನಾ ವಲಯ ಉತ್ತೇಜನಕ್ಕೆ 5 ಕೋಟಿ
- ರೈತರಿಗೆ 2 ಲಕ್ಷ ರುಪಾಯಿವರಗೆ ಬಡ್ಡಿ ರಹಿತ ಸಾಲ ಹಾಗೂ 2ರಿಂದ 3 ಲಕ್ಷದವರೆಗಿನ ಅಲ್ಪಾವಧಿ ಸಾಲಕ್ಕೆ ಶೇ.1 ರ ಬಡ್ಡಿ ಮತ್ತು ಶೇ.3ರ ಬಡ್ಡಿಯಲ್ಲಿ 10 ಲಕ್ಷದ ವರೆಗೆ ದಿಘಾರ್ವಧಿ ಸಾಲ ಪಡೆಯಬಹುದಾಗಿದೆ.
- ಕೃಷಿ ಬೆಲೆ ಆಯೋಗ ರಚನೆ
- ಯಾದಗಿರಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆ
- ಬರ, ನೆರೆಯಿಂದ ನಿರಾಶ್ರಿತರ ಮಕ್ಕಳ ಶಿಕ್ಷಣ ಶುಲ್ಕ ಭರಿಸಲು ಸರ್ಕಾರ ನಿರ್ಧಾರ
- ರೈತರಿಗೆ ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್‌ಗಳ ವಿತರಣೆ
- ವಿದ್ಯುತ್ ಉತ್ಪಾದನೆಗೆ ಕಾಲುವೆಗಳ ಮೇಲೆ ಸೌರಶಕ್ತಿ ಪ್ಯಾನೆಲ್‌ಗಳ ಅಳವಡಿಕೆ.
- ಆಕಸ್ಮಿಕವಾಗಿ ಕುರಿ, ಮೇಕೆ ಮೃತಪಟ್ಟರೆ 3 ಸಾವಿರ ಪರಿಹಾರ ಘೋಷಣೆ
- ಕೃಷಿ ಉತ್ಪನ್ನಗಳ ದರ ಮಾಹಿತಿಗೆ ಪ್ರತ್ಯೇಕ ವೆಬ್‌ಸೈಟ್ ಸ್ಥಾಪನೆ
- ಮುಂದಿನ ವರ್ಷಗಳಲ್ಲಿ 130 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಗುರಿ
- ಎತ್ತಿನಹೊಳೆ ಯೋಜನೆಗೆ 1000 ಕೋಟಿ ರು. ಅನುದಾನ
- ಚಿಕ್ಕಪಡಸಲಗಿ ಬ್ಯಾರೇಜ್ ಎತ್ತರಿಸಲು 10 ಕೋಟಿ ರು. ಅನುದಾನ
- ಮೈಸೂರಿನಲ್ಲಿ ಹಾಲಿನ ಪುಡಿ ತಯಾರಿಸುವ ಮೆಗಾ ಡೈರಿ ಸ್ಥಾಪನೆ
- ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ
- ಚಾಮರಾಜನಗರದ ಅಮೃತ ಭೂಮಿ ಟ್ರಸ್ಟ್‌ಗೆ 5 ಕೋಟಿ
- ದಾಳಿಂಬೆ ಬೆಳೆಗಾರರಿಗೆ 12.5 ಕೋಟಿ ನೆರವು
- ರೇಷ್ಮೆ ಗೂಡಿನ ಮಾರುಕಟ್ಟೆ ಆಧುನಿಕರಣಕ್ಕೆ 5 ಕೋಟಿ
- 10 ಸಾವಿರ ಪೊಲೀಸ್ ವಸತಿ ಗೃಹಗಳ ನಿರ್ಮಾಣ
- ಇಂಡಿಯಾ ರಿಸರ್ವ್ ಬೆಟಾಲಿಯನ್ ಸ್ಥಾಪನೆ
- 51 ಕೋಟಿ ವೆಚ್ಚದಲ್ಲಿ 32 ಹೊಸ ಪೊಲೀಸ್ ಠಾಣೆಗಳ ಕಟ್ಟಡ ನಿರ್ಮಾಣ
- ಹೆದ್ದಾರಿ ಗಸ್ತು ವಾಹನ ಖರೀದಿಗೆ 4 ಕೋಟಿ
- ಹೊಸದಾಗಿ 8,500 ಪೇದೆಗಳ ನೇಮಕ
- ನಕ್ಸಲ್ ನಿಗ್ರಹ ಪಡೆಗೆ 9 ಕೋಟಿ
- ಕೋರಮಂಗಲ ಹಾಗೂ ಮೈಸೂರು ಪೊಲೀಸ್ ಶಾಲೆಗಳ ಉನ್ನತಿಕರಣ
ಸಿನಿಮಾಗೆ ಸಿದ್ದು ಕೊಡುಗೆ
- ಕನ್ನಡ ಅಮೃತ ಮಹೋತ್ಸವ ಭವನದ ಬಾಕಿ ಉಳಿದಿರುವ ನಿರ್ಮಾಣ ಕಾರ್ಯಕ್ಕೆ 2.5 ಕೋಟಿ ಅನುದಾನ
- ವರನಟ ಡಾ.ರಾಜಕುಮಾರ್ ಸ್ಮಾರಕ ಕಾಮಗಾರಿ ಪೂರ್ಣಗೊಳಿಸಿ ಶೀಘ್ರವೇ ಲೋಕಾರ್ಪಣೆ
- ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಎರಡು ಎಕರೆ ಜಮೀನು, ಸ್ಮಾರಕ ನಿರ್ಮಾಣಕ್ಕೆ ಚಾಲನೆ
- ಗುಣಾತ್ಮಕ ಚಿತ್ರಗಳಿಗೆ ನೀಡುವ ಸಹಾಯಧನ ಏರಿಕೆ
- 75 ರಿಂದ 100 ಕನ್ನಡ ಸಿನಿಮಾಗಳಿಗೆ ಸಹಾಯಧ ಘೋಷಣೆ
ಬೆಂಗಳೂರಿಗೆ ಸಾರಿಗೆಗೆ ಸಿಕ್ಕಿದ್ದು
- ಬನ್ನೇರುಘಟ್ಟ, ಸರ್ಜಾಪುರ ರಸ್ತೆ ಅಗಲಿಕರಣಕ್ಕೆ 300 ಕೋಟಿ ರು. ಅನುದಾನ
- ಸಿಲ್ಕ್‌ಬೋರ್ಡ್ ಜಂಕ್ಷನ್ ಮೇಲ್ಸೇತುವೆ ನಿರ್ಮಾಣಕ್ಕೆ 150 ಕೋಟಿ ರು.
- ಕೆ.ಆರ್.ಪುರಂ ಸೇತುವೆ ಗ್ರೇಡ್ ಸಪರೇಟರ್‌ಗೆ ಸುಮಾರು 500 ಕೋಟಿ ರು.
- ಸೋನಿವರ್ಲ್ಡ್ ಜಂಕ್ಷನ್ ಮೇಲು ರಸ್ತೆ ನಿರ್ಮಾಣಕ್ಕೆ 200 ಕೋಟಿ ರು. ಅನುದಾನ ಹಾಗೂ ಪಾದಚಾರಿಗಳ ರಕ್ಷಣೆಗೆ ಸ್ಕೈವಾಕ್ ನಿರ್ಮಾಣಕ್ಕೆ 100 ಕೋಟಿ ರು.
- ಮೆಟ್ರೋ ಟ್ರೈನ್ ಲೈನ್ ಅಳವಡಿಕೆ ಕಾಮಗಾರಿ ಅಕ್ಟೋಬರ್‌ನಲ್ಲಿ ಆರಂಭ
- ನಗರದ ಸಂಪಿಗೆ ರಸ್ತೆಯಿಂದ ಪೀಣ್ಯ ನಡುವಣ 10.5 ಕಿಮೀ ರಸ್ತೆ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


