ಮೋದಿ ಹೇಳಿಕೆ ಸಮರ್ಥಿಸಿಕೊಂಡ ಬಿಎಸ್ಪಿ ಸಂಸದ

ಮಹೊಬಾ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ 'ನಾಯಿ' ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಬಿಎಸ್ಪಿ ಸಂಸದ ವಿಜಯ್ ಬಹದೂರ್ ಅವರು, ಮೋದಿ ಅವರ ಹೇಳಿಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಶನಿವಾರ ಹೇಳಿದ್ದಾರೆ.
ಮೋದಿ ಒಬ್ಬ ಭಾವನಾತ್ಮಕ ಜೀವಿ ಎಂದಿರುವ ವಿಜಯ್ ಬಹದೂರ್, ಪ್ರತಿಪಕ್ಷಗಳು ಮೋದಿ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿರುವುದು ಸರಿಯಲ್ಲ. ಗುಜರಾತ್ನಲ್ಲಿ ನಡೆದಿದ್ದ ಗೋಧ್ರ ಗಲಭೆಯಲ್ಲಿ ಸಂಭವಿಸಿದ ದುರ್ಘಟನೆಯ ಬಗ್ಗೆ ಮೋದಿ ಮನನೊಂದು ಈ ರೀತಿ ಹೇಳಿಕೆ ನೀಡಿದ್ದಾರೆ ವಿನಃ, ಅವರು ಯಾವುದೇ ಒಂದು ಸಮುದಾಯವನ್ನು ಪ್ರಸ್ತಾಪ ಮಾಡಿಲ್ಲ ಎಂದು ಬಹದೂರ್ ತಿಳಿಸಿದ್ದಾರೆ.
ಗೋಧ್ರ ಗಲಭೆ ಸಂಬಂಧ, ಮೋದಿ ಅವರು ನೀಡಿರುವ ಹೇಳಿಕೆ ನೂರರಷ್ಟು ಸತ್ಯವಾಗಿದೆ. ಆದರೆ ರಾಜಕೀಯ ಪಕ್ಷಗಳು ಇದಕ್ಕೆ ರಾಜಕೀಯ ಬಣ್ಣ ಹಚ್ಚಿ ತಮ್ಮ ಬೆಳೆ ಬೇಯಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಮೋದಿ ಅವರ ಹೇಳಿಕೆಯಲ್ಲಿ ಅಂತ ತಪ್ಪೇನಿದೆ. ಪ್ರತಿಯೊಬ್ಬ ಪ್ರಜೆಗು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರವಿದೆ ಎಂದು ಬಹದೂರ್ ಅಭಿಪ್ರಾಯ ಪಟ್ಟಿದ್ದಾರೆ.
ಬಿಜೆಪಿ ಚುನಾವಣಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮೋದಿ ಅವರು, 2002 ಗೋಧ್ರೋತರ ಗಲಭೆಯಲ್ಲಿ ಸರ್ಕಾರ ನಡೆದುಕೊಂಡ ರೀತಿಯನ್ನು ಸಮರ್ಥಿಸಿಕೊಂಡಿದ್ದು, ಇದಕ್ಕೆ ಪೂರಕವಾಗಿ ನಾವೊಂದು ಕಾರು ಚಲಿಸುತ್ತಿದ್ದರೆ, ಆಗ ನಾವೇ ಡ್ರೈವರ್. ಅದೇ ನಾವು ಹಿಂದೆ ಕುಳಿತು, ಮುಂದೆ ಬೇರೆ ಅವರು ಕಾರನ್ನು ಚಲಾಯಿಸುತ್ತಿದ್ದರೆ ಆಗ ಆತನೇ ಡ್ರೈವರ್. ನಾನು ಹಿಂಬದಿಯಲ್ಲಿ ಕುಳಿತ ಪ್ರಯಾಣಿಕ. ಆಗ ಅಡ್ಡ ಬರುವ ನಾಯಿಯೊಂದು ಕಾರಿನ ಚಕ್ರಕ್ಕೆ ಸಿಕ್ಕಿ ಮೃತಪಟ್ಟರೆ ನನಗೂ ನೋವಾಗುವುದಿಲ್ಲವೇ ಎಂದು ಮೋದಿ ಅವರು ನೀಡಿದ್ದ ಹೇಳಿಕೆ ಬಾರಿ ವಿವಾದಕ್ಕಿಡಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


