ಈಗಿನ ಸುದ್ದಿ

ತನ್ನ ಭಾಷಣವು ದೇಶದ ಯುವಜನಾಂಗದ ಪ್ರತಿಧ್ವನಿ: ಮೋದಿ

ತನ್ನ  ಭಾಷಣವು ದೇಶದ ಯುವಜನಾಂಗದ ಪ್ರತಿಧ್ವನಿ: ಮೋದಿ
Published On :

ಪುಣೆ: ಮುಂದಿನ ಸಾರ್ವತ್ರಿಕ ಚುನಾವಣೆಗಾಗಿ ಪ್ರಚಾರ ಕಾರ್ಯ ಆರಂಭಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಭಾನುವಾರ ಫೆರ್ಗಸ್ಸನ್ ಕಾಲೇಜಿನಲ್ಲಿ ಪ್ರಚಾರಾರ್ಥ ಭಾಷಣ ನೀಡಿದ್ದಾರೆ.

ಪ್ರಸ್ತುತ ಕಾಲೇಜಿನಲ್ಲಿ ಯುವಜನಾಂಗವನ್ನುದ್ದೇಶಿಸಿ ಮಾತನಾಡಿದ ಅವರು, ಇನ್ನುಳಿದ ಪಕ್ಷಗಳ ಅಧಿಕಾರಕ್ಕಾಗಿ ಬಯಸುತ್ತಿದ್ದರೆ, ನಾವು ಅಧಿಕಾರವನ್ನು ನೀಡುವಲ್ಲಿ ಆಸಕ್ತಿ ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಇದೀಗ ನಮ್ಮ ದೇಶವು ಆಶಾಭಾವನೆಗಳಿಂದ ವಿಮುಖವಾಗುತ್ತಿದೆ..ನಾನಿದನ್ನು ಬೆಂಬಲಿಸುವುದಿಲ್ಲ. ನಾನು ಯಾವತ್ತೂ ಧನಾತ್ಮಕ ಚಿಂತನೆಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಯುವಜನಾಂಗದ ಜತೆ ಸಂಪರ್ಕ ಸಾಧಿಸಲು ಯತ್ನಿಸುತ್ತಿರುವ ಮೋದಿ, ತನ್ನ  ಭಾಷಣವು ದೇಶದ ಯುವಜನಾಂಗದ ಪ್ರತಿಧ್ವನಿಯಾಗಿದೆ. ಅದೇ ವೇಳೆ ಸಾಮಾಜಿಕ ಜಾಲ ತಾಣವಾದ ಫೇಸ್‌ಬುಕ್‌ನಲ್ಲಿ ತನಗೆ ಬಂದ ಪ್ರತಿಕ್ರಿಯೆಗಳೂ ಈ ಭಾಷಣದಲ್ಲಿದೆ ಎಂದು ಹೇಳಿದ್ದಾರೆ.

ನಮ್ಮ ದೇಶದಲ್ಲಿನ 65 ಶೇ ಜನರು 35 ವರ್ಷಗಿಂತ ಕೆಳಗಿನ ವಯಸ್ಸಿನವರಾಗಿದ್ದು, ಇವರೆಲ್ಲರಿದೂ ದೇಶದ ವ್ಯವಹಾರಗಳ ಬಗ್ಗೆ ಹೆಚ್ಚಿನ ಕಾಳಜಿ ಇದೆ. ಆದಾಗ್ಯೂ, ಯುವಜನಾಂಗ ತುಂಬಾ ಪ್ರತಿಭಾವಂತರಾಗಿರುವುದರಿಂದ ಅವರಿಗೆ ಸರಿಯಾದ ಮಾರ್ಗದರ್ಶನ ಅಗತ್ಯವಿದೆ ಎಂದು ಮೋದಿ ನುಡಿದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.