ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ಪುಣೆ: ಬಿಜೆಪಿ ಪ್ರಚಾರಾರ್ಥ ಕಾರ್ಯಕ್ರಮದಲ್ಲಿ ಭಾಷಣಗೈದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆಡಳಿತಾರೂಡ ಕಾಂಗ್ರೆಸ್ ಪಕ್ಷವು ತನ್ನೆಲ್ಲಾ ಕಾರ್ಯಗಳಿಗೆ ದೇಶದ ಜನರ ಒಪ್ಪಿಗೆ ಇದೆ ಎಂದು ವ್ಯಾಖ್ಯಾನಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ. ಪುಣೆಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋದಿ, ಇಲ್ಲಿನ ಪರಂಪರಾಗತ ರಾಜಕಾರಣವು ಸಾಮಾನ್ಯ ಜನರ ನಿರೀಕ್ಷೆ ಮತ್ತು ಕನಸುಗಳನ್ನು ಛಿದ್ರಗೊಳಿಸಿದೆ ಎಂದಿದ್ದಾರೆ.
ಕಾಂಗ್ರೆಸ್ ಮುಕ್ತ ಭಾರತ ಎಂಬ ತಮ್ಮ ಘೋಷವಾಕ್ಯವನ್ನು ಪುನರುಚ್ಚರಿಸಿದ ಮೋದಿ, ದೇಶದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದ ವೋಟ್ ಬ್ಯಾಂಕ್ ರಾಜಕಾರಣವೇ ಮೂಲ ಕಾರಣ ಎಂದು ಟೀಕಿಸಿದ್ದಾರೆ.
ವೋಟ್ ಬ್ಯಾಂಕ್ನಿಂದಾಗಿ ಚುನಾವಣೆಯನ್ನು ಗೆಲ್ಲಬಹುದು ಮತ್ತು ಜನರ ಮತ ಪಡೆದು ತಮಗೆ ಮನಸೋ ಇಚ್ಛೆ ಅಧಿಕಾರ ಚಲಾಯಿಸಬಹುದು ಎಂದು ಕಾಂಗ್ರೆಸ್ ಭಾವಿಸದಂತಿದೆ ಎಂದು ಮೋದಿ ಕಾಂಗ್ರೆಸ್ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅದೇ ವೇಳೆ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಟೀಕಾಪ್ರಹಾರ ಮಾಡಿದ ಮೋದಿ, ದೇಶ ಸ್ವತಂತ್ರಗೊಂಡಾಗ ಡಾಲರ್ಗೆ ಸಮವಾಗಿದ್ದ ರುಪಾಯಿ ಬೆಲೆ ಇದೀಗ ಕುಸಿಯುತ್ತಾ ಬರುತ್ತಿದ್ದೆ. ಆರ್ಥಿಕ ತಜ್ಞರಾಗಿರುವ ಪ್ರಧಾನಿಯವರಿರುವಾಗ ರುಪಾಯಿ ಮೌಲ್ ಕಳೆದುಕೊಳ್ಳುತ್ತಿದೆ ಎಂದಾದರೆ ಪ್ರಧಾನಿ ಆರ್ಥಿಕತೆಯನ್ನು ಅರಿಯುವಲ್ಲಿಯೇ ವಿಫಲರಾಗಿದ್ದಾರೆ.
ಹೀಗೆ ಮುಂದುವರಿದರೆ ಡಾಲರ್ ವಿರುದ್ಧ ರುಪಾಯಿ ಮೌಲ್ಯ ನಮ್ಮ ವಿತ್ತ ಸಚಿವರ ವಯಸ್ಸಿನಷ್ಟಾಗಬಹುದು ಎಂದು ಮೋದಿ ಲೇವಡಿ ಮಾಡಿದ್ದಾರೆ.
ಅದೇ ವೇಳೆ ಪಾಕಿಸ್ತಾನ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಮೊದಲಾದ ಚಿಕ್ಕ ದೇಶಗಳಲ್ಲಿ ಅಲ್ಲಿನ ಕರೆನ್ಸಿ ಸ್ಥಿರತೆ ಕಾಯ್ದುಕೊಂಡಿರುವುದನ್ನು ಉದಾಹರಿಸಿದ ಮೋದಿ, ಭಾರತ ಕಾಂಗ್ರೆಸ್ ಕೈಯಿಂದ ಮುಕ್ತವಾಗುವವರೆಗೆ ಇಲ್ಲಿನ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


