ಮೋದಿ ಜಾತ್ಯಾತೀತ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು

ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆಗೆ ಸೋಮವಾರ ತಿರುಗೇಟು ನೀಡಿರುವ ಕಾಂಗ್ರೆಸ್, ಮೋದಿ 'ಅವಕಾಶವಾದಿ ಜಾತ್ಯಾತೀತ' ರಾಜಕಾರಣಿ ಎಂದು ಕೇಂದ್ರ ವಾರ್ತಾ ಇಲಾಖೆ ಸಚಿವ ಮನೀಶ್ ತಿವಾರಿ ತಿವಿದಿದ್ದಾರೆ.
ಜಾತಿಯನ್ನು ಮುಂದಿಟ್ಟುಕೊಂಡು ರಾಜ್ಯಭಾರ ಮಾಡುತ್ತಿರುವವರು ನಾವಲ್ಲ. ಸಮಯಕ್ಕೆ ತಕ್ಕಂತೆ ವೇಷ ಬದಲಿಸುವ ಚಾಕುಚಕ್ಯತೆ ಮೋದಿ ಅವರಿಗೆ ಹೇಳಿ ಮಾಡಿಸಿದ್ದಂತಿದೆ ಎಂದು ತಿವಾರಿ ಹೇಳಿದ್ದಾರೆ.
ಮೋದಿ ಅವರು ನಿನ್ನೆ ಪುಣೆಯ ಕಾಲೇಜುವೊಂದರಲ್ಲಿ ಮಾಡಿದ ಭಾಷಣದಲ್ಲಿ, ಕಾಂಗ್ರೆಸ್ ಜಾತ್ಯಾತೀತೆಯ ಹೆಸರಲ್ಲಿ ದೇಶದ ಜನರ ಆಶಾಭಾವ ಹಾಗೂ ಮಹತ್ವಾಕಾಂಕ್ಷೆಯ ಉಸಿರುಗಟ್ಟಿಸುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಜಾತಿಯ ಹೆಸರಲ್ಲಿ ದೇಶವನ್ನು ಇಬ್ಬಾಗ ಮಾಡುವ ಹುನ್ನಾರ ನಡೆಸಿದವರು ಯಾರು ಎಂಬುದು ಜನರಿಗೆ ತಿಳಿದಿದೆ. ಅಲ್ಲದೆ ದೇಶದಲ್ಲಿ ನಡೆದಿದ್ದ ಗಲಭೆಗಳಿಗೆ ಕಾರಣಕರ್ತರು ಯಾರೆಂಬುದನ್ನು ಸ್ವತಃ ಮೋದಿ ಅವರು ಮರೆತಂತಿದೆ ಎಂದು ತಿವಾರಿ ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ಹಿಂದು, ಮುಸ್ಲಿಂ, ಸಿಖ್ ಹಾಗೂ ಜೈನರು ಸಹ ಬಾಳ್ವೆಯ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಊಳಿ ಹಿಂಡುವ ಕೆಲಸ ಮಾಡುತ್ತಿರುವವರು ಯಾರು. ಹಾಗೂ ಸಮಯಘಾತುಕ ತನ ಅನುಸರಿಸುವರು ಯಾರು ಎಂಬುದನ್ನು ಮೋದಿ ಮರೆಯಬಾರದು ಎಂದು ತಿವಾರಿ ಹೇಳಿದ್ದಾರೆ.
'ಕುತ್ತೆ ಕಾ ಬಚ್ಚಾ'(ನಾಯಿ ನನ್ನ ಮಗ) ಇಂತಹ ಹೇಳಿಕೆಗಳನ್ನು ಕೊಟ್ಟಂತ ಮೋದಿ ಅವರು ಕಾಂಗ್ರೆಸ್ ವಿರುದ್ಧ ಆರೋಪ ಮಾಡುವಷ್ಟು ಪ್ರಬುದ್ಧರಾಗಿಲ್ಲ ಎಂದು ತಿವಾರಿ ಹೇಳಿದ್ದಾರೆ.
ರಾಷ್ಟ್ರದಲ್ಲಿ ಇಬ್ಬಗೆ ನೀತಿಯನ್ನು ಅನುಸರಿಸುತ್ತಿರುವ ಬಿಜೆಪಿಯ ಕೈಗೆ ಅಧಿಕಾರ ನೀಡಬೇಕೆ ಬೇಡವೆ ಎಂಬುದನ್ನು ದೇಶದ ಜನತೆ ತೀರ್ಮಾನಿಸಲಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


