ಈಗಿನ ಸುದ್ದಿ

2ಜಿ ಸ್ಪೆಕ್ಟ್ರಂ ಹಗರಣಕ್ಕೆ ಅಂಬಾನಿ ದಂಪತಿ 'ಸಾಕ್ಷಿ'

Published On :

ನವದೆಹಲಿ: 2ಜಿ ತರಂಗಾಂತರ ಹಂಚಿಕೆ ಹಗರಣ ಸಂಬಂಧ ರಿಲಯನ್ಸ್ ಎಡಿಎ ಗ್ರೂಪ್ನ ಅಧ್ಯಕ್ಷ ಅನಿಲ್ ಅಂಬಾನಿ ಹಾಗೂ ಅವರ ಪತ್ನಿ ಟೀನಾ ಅಂಬಾನಿ ಸೇರಿದಂತೆ 11 ಮಂದಿಗೆ ಪ್ರಕರಣದ ಸಾಕ್ಷಿಧಾರರಾಗಿ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಕೋರ್ಟ್ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ.

ಅನಿಲ್ ಅಂಬಾನಿ ಹಾಗೂ ಪತ್ನಿ ಟೀನಾ ಅಂಬಾನಿ ಸೇರಿದಂತೆ ಇತರೆ 17 ಮಂದಿಯನ್ನು ಸಾಕ್ಷಿಧಾರರನ್ನಾಗಿ ಪರಿಗಣಿಸುವಂತೆ ಸಿಬಿಐ, ಕೋರ್ಟ್ಗೆ ಮನವಿ ಮಾಡಿತ್ತು. ಸಿಬಿಐ ಮನವಿಯನ್ನು ಪರಿಗಣಿಸಿರುವ ಕೋರ್ಟ್, ಪ್ರಕರಣ ಸಂಬಂಧ ಅಂಬಾನಿ ದಂಪತಿ ಸೇರಿದಂತೆ 13 ಮಂದಿಯ ವಿಚಾರಣೆಗೆ ಒಪ್ಪಿಗೆ ಸೂಚಿಸಿದೆ.

ಪ್ರಕರಣದ ನಿರ್ಧಾರ ತೆಗೆದುಕೊಳ್ಳಲು ಈ ಸಾಕ್ಷಿಧಾರರ ಹೇಳಿಕೆಯ ಅಗತ್ಯತೆ ಇದೆ ಎಂದು ಸಿಬಿಐ ವಿಶೇಷ ಕೋರ್ಟ್ನ ನ್ಯಾಯಾಧೀಶ ಒ.ಪಿ.ಸೈನಿ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಇನ್ನಷ್ಟು ಸತ್ಯಾಂಶಗಳನ್ನು ಹೊರಗೆಡವಲು ಅನಿಲ್ ಅಂಬಾನಿ ಸೇರಿ 17 ಮಂದಿಯ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಅಗತ್ಯ ಇದೆ. 2007ರ ಅಕ್ಟೋಬರ್‌ನಲ್ಲಿ ಡಿಬಿ ಗ್ರೂಪ್ ಮತ್ತು ರಿಲಯನ್ಸ್ ಎಡಿಎ ಕಂಪನಿಗಳ ನಡುವೆ ನಡೆದ 997 ಕೋಟಿ ಹಣ ವರ್ಗಾವಣೆಗೆ ಸಂಬಂಧಿಸಿ ವಿವರಣೆ ಕೇಳುವ ಅಗತ್ಯ ಇದೆ ಎಂದು ಸಿಬಿಐ ನ್ಯಾಯಾಲಯದಲ್ಲಿ ವಾದಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.