ಈಗಿನ ಸುದ್ದಿ

ನಟಿ ಶೃತಿ ಎರಡನೇ ಮದುವೆ ಅಸಿಂಧು?

ನಟಿ ಶೃತಿ ಎರಡನೇ ಮದುವೆ ಅಸಿಂಧು?
Published On :

ಬೆಂಗಳೂರು: ನಟಿ ಶೃತಿ ಅವರ ಎರಡನೇ ಮದುವೆ ಈಗ ಹೊಸ ತಿರುವು ಪಡೆದುಕೊಂಡಿದ್ದು, ಚಂದ್ರಚೂಡ್ ಅವರೊಂದಿಗಿನ ಎರಡನೇ ಮದುವೆ ಅಸಿಂಧುಗೊಳ್ಳುವ ಸಾಧ್ಯತೆ ಇದೆ.

ಚಂದ್ರಚೂಡ್ ಅವರ ಎರಡನೇ ಮದುವೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಚಂದ್ರಚೂಡ್ ಅವರ ಮೊದಲ ಪತ್ನಿ ಮಂಜುಳ ಅವರು ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಪ್ರಕರಣ ಸಂಬಂಧ ಚಂದ್ರಚೂಡ್ ಹಾಗೂ ಶೃತಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ ಇಬ್ಬರೂ ಈ ಸಂಬಂಧ ಕೋರ್ಟ್ಗೆ ಹಾಜರಾಗಿರಲಿಲ್ಲ. ಇಂದು ಚಂದ್ರಚೂಡ್ ಅವರು ತಮ್ಮ ವಕೀಲರ ಮೂಲಕ, ಶೃತಿಯೊಂದಿಗಿನ ಎರಡನೇ ಮದುವೆಯನ್ನು ಅಸಿಂಧುಗೊಳಿಸಲು ಒಪ್ಪಿಗೆ ಸೂಚಿಸಿ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆಯನ್ನು ಕೋರ್ಟ್ ಆಗಸ್ಟ್ 23ಕ್ಕೆ ಮುಂದೂಡಿದೆ. ಹೀಗಾಗಿ ನಟಿ ಶೃತಿಯ ಎರಡನೇ ಮದುವೆಯೂ ಈಗ ಮುರಿದು ಬೀಳುವ ಹಂತ ತಲುಪಿದೆ.

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಚಂದ್ರಚೂಡ ಅವರು, ಶೃತಿ ನನ್ನ ಪಾಲಿನ ಮಹಾತಾಯಿ, ಅವರಿಗೆ ಅನ್ಯಾಯ ಮಾಡುವುದಿಲ್ಲ. ಇಬ್ಬರೊಂದಿಗೂ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಶಿಕ್ಷೆಯ ಭಯದಿಂದ ನಾನು ಮದುವೆ ಅಸಿಂಧುಗೊಳಿಸಲು ಒಪ್ಪಿಗೆ ಸೂಚಿಸಿಲ್ಲ. ನನಗೆ ಶಿಕ್ಷೆಯ ಭಯವಿಲ್ಲ. ಕೋರ್ಟ್ ಆದೇಶಕ್ಕೆ ತಲೆಬಾಗುತ್ತೇನೆ. ಆದರೆ ಶೃತಿ ಒಬ್ಬ ನಟಿ. ಹೀಗಾಗಿ ಅವಳ ಸಾರ್ವಜನಿಕ ಜೀವನದಲ್ಲಿ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದಿದ್ದಾರೆ.

ಎರಡನೇ ಮದುವೆ ಅಸಿಂಧುಗೊಳಿಸಲು ಒಪ್ಪಿಗೆ ಸೂಚಿಸಿರುವ ಚಂದ್ರಚೂಡ್ ಅವರು, ಮುಂದೆ ತಾವು ಯಾವುದೇ ಕಾರಣಕ್ಕೂ ಮೊದಲ ಪತ್ನಿ ಮಂಜುಳ ಅವರೊಂದಿಗೆ ಜೀವನ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶೃತಿ, ನನ್ನ ಜೀವನದಲ್ಲಿ ಒಂದು ಕಡೆ ಅವಮಾನ ಮತ್ತೊಂದು ಕಡೆ ಸನ್ಮಾನ ಎರಡೂ ಆಗಿದೆ. ಇಬ್ಬರಲ್ಲಿ ಒಬ್ಬರಿಗೆ ನ್ಯಾಯ ಸಿಗಲಿ ಎಂದು ಬಯಸುತ್ತೇನೆ. ನನ್ನಿಂದ ಈ ನಾಡಿನ ಯಾವುದೇ ಮಹಿಳೆಗೆ ಅನ್ಯಾಯವಾಗುವುದು ಬೇಡ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.