ಈಗಿನ ಸುದ್ದಿ

1 ವರ್ಷ ಆದ್ಮೇಲೆ ಕುರ್ಚಿಯಲ್ಲಿರಲ್ಲ: ಸಿಎಂ ಛೇಡಿಸಿದ ಬಿಎಸ್ ವೈ

1 ವರ್ಷ ಆದ್ಮೇಲೆ ಕುರ್ಚಿಯಲ್ಲಿರಲ್ಲ: ಸಿಎಂ ಛೇಡಿಸಿದ ಬಿಎಸ್ ವೈ
Published On :

ಬೆಂಗಳೂರು: ಒಂದು ವರ್ಷ ಆದ್ಮೇಲೆ ನೀವು ಮುಖ್ಯಮಂತ್ರಿಯ ಕುರ್ಚಿಯಲ್ಲಿರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಛೇಡಿಸಿದ ಘಟನೆ ಶುಕ್ರವಾರ ವಿಧಾನಸಭೆಯಲ್ಲಿ ನಡೆಯಿತು.

ವಿಧಾನಸಭೆಯಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡುತ್ತಿದ್ದ ಮಾಜಿ ಸಿಎಂ, ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದ ಮೇಲೆ ಎಲ್ಲ ನಿರ್ಧಾರಗಳನ್ನು ತರಾತುರಿಯಲ್ಲಿ ತೆಗೆದುಕೊಳ್ಳುತ್ತಿರುವುದು ಯಾಕಂತ ನಮಗೆ ಈಗ ಅರ್ಥವಾಯಿತು. ಮುಂದಿನ ಲೋಕಸಭೆಯ ಚುನಾವಣೆಯವರೆಗೆ ಮಾತ್ರ ಸಿದ್ದರಾಮಯ್ಯ ಅವರು ಕುರ್ಚಿಯಲ್ಲಿರುತ್ತಾರೆ. ನಂತರ ಅವರನ್ನು ಸಿಎಂ ಆಗಿ ಮುಂದುವರೆಯಲು ಕಾಂಗ್ರೆಸ್ ನವರು ಬಿಡಲ್ಲ. ಆದರೆ ಆ ರೀತಿ ಆಗದಿರಲಿ ಎಂದು ನಾವು ಬಯಸುತ್ತೇವೆ ಎಂದರು.

ಇದಕ್ಕೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಅವರು, ನಾವು ಅಪರೇಷನ್ ಕಮಲದಂತೆ ಮಾಡಲ್ಲ. ನೀವು ಅನಾವಶ್ಯಕವಾಗಿ ಭಯ ಹುಟ್ಟಿಸುತ್ತಿದ್ದಿರಿ. ಆದರೆ ಕಾಂಗ್ರೆಸ್ ಇದ್ಯಾವುದಕ್ಕೂ ಬೆದರದೇ ಗಟ್ಟಿತನ ತೋರಿಸಲಿದೆ ಎಂದರು.

ಇನ್ನು ಯಡಿಯೂರಪ್ಪ ಅವರು ಸಿದ್ದು ಅವರನ್ನು ಛೇಡಿಸುತ್ತಿದ್ದರೆ, ಸಿಎಂ ಮಾತ್ರ ನಿದ್ದೆಗೆ ಜಾರಿದ್ದರು.

ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿಕೆ
ಹಲವು ವಿಷಯಗಳ ಮೇಲಿನ ಚರ್ಚೆಗಳ ಬಳಿಕ ವಿಧಾನಸಭೆ ಕಲಾಪವನ್ನು ಸೋಮವಾರ ಬೆಳಗ್ಗೆ 11ಕ್ಕೆ ಮುಂದೂಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.