ಈಗಿನ ಸುದ್ದಿ

ಕ್ರೇಜಿಸ್ಟಾರ್ ಆತ್ಮಹತ್ಯೆ: ಸುಳ್ಳು ಕರಪತ್ರ ಮುದ್ರಿಸಲು 'ಅಭಿಮಾನಿ' ಯತ್ನ

ಕ್ರೇಜಿಸ್ಟಾರ್ ಆತ್ಮಹತ್ಯೆ: ಸುಳ್ಳು ಕರಪತ್ರ ಮುದ್ರಿಸಲು 'ಅಭಿಮಾನಿ' ಯತ್ನ
Published On :

ಬೆಂಗಳೂರು: ಜೀವನದಲ್ಲಿ ಜಿಗುಪ್ಸೆ ಹೊಂದಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಚೆನ್ನೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬೆಂಗಳೂರಿನಲ್ಲಿ ಹರಿದಾಡುತ್ತಿದ್ದು, ರವಿ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗಲು ಕಾರಣವಾಗಿದೆ.

ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ನಂದಗೋಕುಲ ಆಪ್‌ಸೆಟ್ ಪ್ರಿಂಟರ್ಸ್‌ಗೆ ವ್ಯಕಿಯೊಬ್ಬ ಬಂದು ತಾನು ಹನುಮಂತನಗರದ ಶಿವಕುಮಾರ್ ಎಂದು ಪರಿಚಯಿಸಿಕೊಂಡಿದ್ದು, ತಾನು ರವಿಚಂದ್ರನ್ ಅವರ ಅಭಿಮಾನಿ, ರವಿಚಂದ್ರನ್ ಜೀವನದಲ್ಲಿ ಜಿಗುಪ್ಸೆಗೊಂಡು ಚೆನ್ನೈನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಾಗಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ 10 ಸಾವಿರ ಕರಪತ್ರ ಮುದ್ರಿಸಿಕೊಂಡುವಂತೆ ಕೇಳಿದ್ದಾನೆ.

ಶಿವಕುಮಾರ್ ಮಾತನ್ನು ನಂಬದ ಪ್ರೆಸ್‌ನ ಮಾಲೀಕರು ಆತನನ್ನು ವಿಚಾರಿಸಿದ್ದು, ಕೂಡಲೆ ರವಿಚಂದ್ರನ್ ಅವರ ಮನೆಗೆ ಕರೆದುಕೊಂಡು ಹೋಗುವಂತೆ ಹೇಳಿ, ರವಿ ಸಾವಿನ ವರದಿ ನಿಜವಾಗಿದ್ದರೆ ಮಾತ್ರ ತಾವು ಕರಪತ್ರ ಮುದ್ರಿಸಿಕೊಡುವುದಾಗಿ ತಿಳಿಸಿದ್ದಾರೆ. ತಕ್ಷಣ ಆತ ಇಲ್ಲ ರವಿಚಂದ್ರನ್ ಅವರ ತಮ್ಮ ಬಾಲಾಜಿಯೇ ಖುದ್ದು ತನಗೆ ದೂರವಾಣಿ ಕರೆ ಮಾಡಿ ಈ ವಿಷಯ ತಿಳಿಸಿರುವುದಾಗಿ ಹೇಳಿಕೊಂಡಿದ್ದಾನೆ. ರವಿ ಅವರ ಪಾರ್ಥಿವ ಶರೀರವನ್ನು ಸಂಜೆ ಬೆಂಗಳೂರಿಗೆ ತರಲಿದ್ದಾರೆ. ಸಂಜೆ ಅವರ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಅವರ ನಿವಾಸದ ಮುಂದೆ ಇಡಲಾಗುತ್ತದೆ ಎಂದು ಹೇಳಿರುವುದಾಗಿ ತಿಳಿಸಿದ್ದಾನೆ.

ಆದರೆ ಶಿವಕುಮಾರ್ ಮಾತನ್ನು ನಂಬದ ಪ್ರೆಸ್‌ನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಲು 100ಕ್ಕೆ ಕರೆ ಮಾಡಿದ್ದಾರೆ. ಆದರೆ ಆ ಸಂದರ್ಭದಲ್ಲಿ ನಂಬರ್ ಬ್ಯುಸಿ ಇದ್ದುದ್ದರಿಂದ ಸಂಪರ್ಕ ಸಾಧ್ಯವಾಗಿಲ್ಲ. ವಿಷಯ ತಿಳಿಯುತ್ತಿದಂತೆ ಅಕ್ಕ ಪಕ್ಕದವರು ಬಂದಿದ್ದರಿಂದ ವಿಚಲಿತಗೊಂಡ ಶಿವಕುಮಾರ್ ಅಲ್ಲಿಂದ ಪರಾರಿಯಾಗಿದ್ದಾನೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.